ಐರೋಪ್ಯ ಒಕ್ಕೂಟಕ್ಕೆ ಮತ್ತೆ ಸೇರ್ಪಡೆ ಸಾಧ್ಯವಿಲ್ಲ

Update: 2016-06-20 18:29 GMT

ಲಕ್ಸಂಬರ್ಗ್, ಜೂ. 20: ಐರೋಪ್ಯ ಒಕ್ಕೂಟದಿಂದ ಹೊರಬರುವ ಇಂಗಿತ ವ್ಯಕ್ತಪಡಿಸಿ ಒಮ್ಮೆ ಹಾಕುವ ಮತವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಹಾಗೂ ಅಸ್ವೀಕಾರಾರ್ಹ ಶರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಮತ್ತೊಮ್ಮೆ ಕೂಟಕ್ಕೆ ಸೇರ್ಪಡೆಗೊಳ್ಳಬಹುದಾಗಿದೆ ಎಂದು ಬ್ರಿಟನ್‌ನ ವಿದೇಶ ಕಾರ್ಯದರ್ಶಿ ಫಿಲಿಪ್ ಹ್ಯಾಮಂಡ್ ಸೋಮವಾರ ಎಚ್ಚರಿಸಿದ್ದಾರೆ.

‘‘ಇದು ಹಿಂದಕ್ಕೆ ಪಡೆಯಲಾಗದ ನಿರ್ಧಾರ ಎಂಬ ವಿಷಯವನ್ನು ಬ್ರಿಟಿಷ್ ಜನತೆಗೆ ಮನವರಿಕೆ ಮಾಡಿಕೊಡಲು ನಾವು ಪ್ರಯತ್ನಿಸುತ್ತಿದ್ದೇವೆ. ಒಮ್ಮೆ ಹೊರಬರಲು ನಿರ್ಧರಿಸಿದರೆ ಮತ್ತೆ ಹಿಂದೆ ಹೋಗಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.

ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸುವುದಕ್ಕಾಗಿ ಅವರು ಲಕ್ಸಂಬರ್ಗ್‌ಗೆ ಬಂದಿದ್ದಾರೆ.

‘‘ಮುಂದಿನ ದಿನಗಳಲ್ಲಿ ಬ್ರಿಟನ್ ಮತ್ತೊಮ್ಮೆ ಒಕ್ಕೂಟಕ್ಕೆ ಸೇರಲು ಸಾಧ್ಯವಿಲ್ಲ. ಸೇರುವುದಿದ್ದರೂ ಯುರೋ ಸದಸ್ಯತ್ವ, ಶೆಂಝನ್ (ಪಾಸ್‌ಪೋರ್ಟ್‌ಮುಕ್ತ ವಲಯ) ಮುಂತಾದ ಸ್ವೀಕಾರಾರ್ಹವಲ್ಲದ ಶರತ್ತುಗಳಿಗೆ ಅಂಗೀಕಾರ ನೀಡಬೇಕಾಗುತ್ತದೆ’’ ಎಂದರು.

ಬ್ರಿಟನ್ ಐರೋಪ್ಯ ಒಕ್ಕೂಟಕ್ಕೆ ಸೇರಬೇಕೇ, ಬೇಡವೇ ಎಂಬ ಬಗ್ಗೆ ಬ್ರಿಟಿಷರು ಗುರುವಾರ ಮತ ಹಾಕಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News