ಎಟಿಎಂನಲ್ಲಿ ಖೋಟಾ ನೋಟು ಬಂದರೆ ಏನು ಮಾಡಬೇಕು?

Update: 2016-06-21 17:50 GMT

ಎಟಿಎಂ ಯಂತ್ರಗಳಿಂದ ಖೋಟಾನೋಟುಗಳು ಹೊರಗೆ ಬರುವುದು ಹೆಚ್ಚಾಗುತ್ತಿದೆ. ಮುಖ್ಯವಾಗಿ ರೂ. 500 ಮತ್ತು ರೂ. 1000ದ ನೋಟುಗಳು ಇತರೆಲ್ಲವುಗಳಿಗಿಂತ ಹೆಚ್ಚಾಗಿ ನಕಲಿ ಬರುತ್ತಿವೆ. ಎಟಿಎಂನಿಂದ ದುಡ್ಡು ತೆಗೆದುಕೊಂಡ ಮೇಲೆ ಅದನ್ನು ಪರೀಕ್ಷಿಸದೆ ಮುಂದೆ ಹೋಗಬೇಡಿ. ಏಕೆಂದರೆ ನೀವು ಸುಲಭವಾಗಿ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತರಬಹುದು. ನಂತರ ನಿಮಗೆ ನೋಟುಗಳು ನಕಲಿ ಎಂದು ತಿಳಿದರೂ ಅದು ಎಲ್ಲಿಂದ ಕೈಗೆ ಬಂತೆಂದು ತಿಳಿದುಕೊಳ್ಳುವುದು ಕಷ್ಟವಾಗಲಿದೆ. ಯಾವಾಗಲಾದರೂ ಇಂತಹ ದುರದೃಷ್ಟ ಸನ್ನಿವೇಶ ಬಂದರೆ ಭಯ ಬೇಡ. ಹೀಗೆ ಮಾಡಿ.

ಎಟಿಎಂ ಕಾವಲುಗಾರನಿಗೆ ಹೇಳಿ


ಎಟಿಎಂ ಕಾವಲುಗಾರನ ಬಳಿ ನೋಟಿನ ನಂಬರ್, ಟ್ರಾನ್ಸಾಕ್ಷನ್ ಐಡಿ ನಂಬರ್, ದಿನ ಮತ್ತು ಸಮಯ ಬರೆದಿಟ್ಟುಕೊಳ್ಳುವ ರಿಜಿಸ್ಟರ್ ಇರುತ್ತದೆ. ನಂತರ ನೀವು ದೂರು ನೀಡಿದ ವಿವರದ ಫೋಟೋ ತೆಗೆದಿಟ್ಟುಕೊಳ್ಳಿ ಮತ್ತು ಅದನ್ನು ಸಮೀಪದ ಬ್ಯಾಂಕಿನ ಶಾಖೆಯಲ್ಲಿ ತಿಳಿಸಿ. ಯಾವತ್ತೂ ಹಣ ತೆಗೆದ ರಶೀದಿ ಅಥವಾ ಸಂದೇಶವನ್ನು ಕಳೆದುಕೊಳ್ಳಬೇಡಿ.

ಬ್ಯಾಂಕ್ ಮೇಲೆ ವಿಶ್ವಾಸವಿರಲಿ


ಒಮ್ಮೆ ಬ್ಯಾಂಕಿಗೆ ಖೋಟಾ ನೋಟಿನ ಬಗ್ಗೆ ದೂರು ಕೊಟ್ಟ ಮೇಲೆ ಅದು ನೋಟನ್ನು ಸ್ಕಾನ್ ಮಾಡುತ್ತದೆ. ಅದು ಖೋಟಾ ನೋಟಾದಲ್ಲಿ ಅದನ್ನು ಬ್ಯಾಂಕು ತೆಗೆದುಕೊಂಡು ನಾಶಪಡಿಸುತ್ತದೆ. ಅಷ್ಟೇ ಮೊತ್ತವನ್ನು ಬ್ಯಾಂಕು ನಿಮಗೆ ಕೊಡುತ್ತದೆ.

ಬ್ಯಾಂಕ್ ಕುರುಡಾದಲ್ಲಿ


ನೀವು ನೇರವಾಗಿ ಆರ್‌ಬಿಐ ಬಳಿ ಹೋಗಬಹುದು. ಆರ್‌ಬಿಐಗೆ ಹಣ ತೆಗೆದಿರುವುದು ಮತ್ತು ಬ್ಯಾಂಕ್ ಅಲಕ್ಷ್ಯ ಮಾಡುತ್ತಿರುವ ಬಗ್ಗೆ ಇಮೇಲ್ ಮಾಡಿ.

ಎಫ್‌ಐಆರ್ ದಾಖಲಿಸಿ


ನೀವು ಪೊಲೀಸರ ನೆರವೂ ಪಡೆಯಬಹುದು. ಹಣ ತೆಗೆದ ವಿವರಗಳನ್ನು ನೀಡಿ ಕೇಸು ಹಾಕಬಹುದು. ಪೊಲೀಸ್ ವಿಷಯವನ್ನು ತನಿಖೆ ಮಾಡಿ ಸಮಸ್ಯೆ ನಿವಾರಿಸುತ್ತಾರೆ.

ಕೃಪೆ: www.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News