ಭಯೋತ್ಪಾದಕ ದಾಳಿ ನಡೆದ ವಿಮಾನ ನಿಲ್ದಾಣದಲ್ಲಿದ್ದರು ಹೃತಿಕ್ ರೋಷನ್ !

Update: 2016-06-29 06:53 GMT

ಇಸ್ತಾಂಬುಲ್, ಜೂ.29: ಟರ್ಕಿಯ ರಾಜಧಾನಿ ಇಸ್ತಾಂಬುಲ್ ನ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 36 ಮಂದಿ ಸಾವಿಗೀಡಾಗಿ 150 ಕ್ಕೂ ಹೆಚ್ಚು ಗಾಯಗೊಂಡಿದ್ದರೆ, ಈ ದಾಳಿ ನಡೆಯುವ ಕೆಲವೇ ನಿಮಿಷಗಳ ಮೊದಲು ಬಾಲಿವುಡ್ ನಟ ಹೃತಿಕ್ ರೋಷನ್ ಇದೇ ವಿಮಾನ ನಿಲ್ದಾಣದಲ್ಲಿದ್ದರು. ಹೃತಿಕ್ ಅವರು ತಮ್ಮ ಪುತ್ರರಾದ ಹ್ರೆಹಾನ್ ಹಾಗೂ ಹೃದಾನ್ ಜತೆ ಸ್ಪೇನ್ ಹಾಗೂ ಆಫ್ರಿಕಾ ಪ್ರವಾಸ  ಮುಗಿಸಿ ಭಾರತಕ್ಕೆ ಇಸ್ತಾಂಬುಲ್ ಮೂಲಕ ಹಿಂದಿರುಗುತ್ತಿದ್ದರು.

ಈ ಬಗ್ಗೆ ಟ್ವೀಟ್ ಮೂಲಕ ಹೇಳಿಕೊಂಡ 42 ವರ್ಷದ ನಟ ``ಇಸ್ತಾಂಬುಲ್ ನಲ್ಲಿ ಕನೆಕ್ಟಿಂಗ್ ಫ್ಲೈಟ್ ಮಿಸ್ ಆಗಿ ಬಿಟ್ಟಿತು, ಮುಂದಿನ ಫ್ಲೈಟ್ ಮರುದಿನವಾಗಿದ್ದರೂ ನಾವು ಇಕಾನಮಿ ಕ್ಲಾಸ್ ಆಯ್ದುಕೊಂಡು ಬೇಗ ಪ್ರಯಾಣಿಸಿಬಿಟ್ಟೆವು. #ಪ್ರೇಯರ್ಸ್4ಇಸ್ತಾಂಬುಲ್.'' ``ಇಸ್ತಾಂಬುಲ್ ವಿಮಾನ ನಿಲ್ದಾಣದ ದಯಾಳು  ಸಿಬ್ಬಂದಿ ಕೆಲವು ಗಂಟೆಗಳ ಮೊದಲು ನಮಗೆ ಸಹಾಯ ಮಾಡಿದರು. ಈಗ ಆಘಾತಕಾರಿ ಸುದ್ದಿ. ಮುಗ್ಧರನ್ನು ಧರ್ಮದ ಹೆಸರಿನಲ್ಲಿ ಸಾಯಿಸಲಾಗಿದೆ. ನಾವೆಲ್ಲರೂ ಉಗ್ರವಾದದ ವಿರುದ್ಧ ಒಂದಾಗಿ ನಿಲ್ಲಬೇಕು.'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News