ಬಾಬರಿ ಮಸೀದಿ ಧ್ವಂಸಕ್ಕೆ ಮಾಜಿ ಪ್ರಧಾನಿ ನರಸಿಂಹರಾವ್‌ರ ಮೃದು ಹಿಂದುತ್ವ ಕಾರಣ: ಮಣಿಶಂಕರ್ ಅಯ್ಯರ್

Update: 2016-06-29 07:02 GMT

ಹೊಸದಿಲ್ಲಿ,ಜೂನ್ 29: ಮಾಜಿ ಪ್ರಧಾನಿ ನರಸಿಂಹರಾವ್‌ರ ಮೃದುಹಿಂದುತ್ವ ಮನಸ್ಸು 1992ರಲ್ಲಿಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾಯಿತುಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ರಾವ್‌ರೊಂದಿಗೆ ಹೆಚ್ಚುನಿಕಟವಾಗಿದ್ದ ಮಾಜಿ ಕಾಂಗ್ರೆಸ್ ನಾಯಕ ನಟವರ್ ಸಿಂಗ್‌ಮುಂತಾದವರು ಉಪಸ್ಥಿತರಿದ್ದ ಹೊಸದಿಲ್ಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

ಆರ್ಥಿಕಸುಧಾರಣೆ ರಂಗದಲ್ಲಿ ಧೀರವಾದ ಮತ್ತು ಸಂದರ್ಭೋಚಿತ ನಿರ್ಧಾರಗಳನ್ನು ತೆಗೆದ ನರಸಿಂಹರಾವ್‌ರ ಭಾರೀ ಸೋಲು ಬಾಬರಿ ಮಸೀದಿ ಧ್ವಂಸ ಎಂದು ಅವರು ವಿಶ್ಲೇಷಿಸಿದ್ದಾರೆ.ಅಯೋಧ್ಯೆಯಲ್ಲಿ ಸನ್ಯಾಸಿಗಳೊಂದಿಗೆ ಮಾತುಕತೆ ನಡೆಸಿ ರಾಮಮಂದಿರ ಸಮಸ್ಯೆಯನ್ನು ಬಗೆಹರಿಸಬೇಕೆಂದು ರಾವ್ ಉದ್ದೇಶಿಸಿದ್ದರು ಎಂದು ವಿನಯ್‌ಸೀತಾಪತಿಯ ‘ಹಾಫ್‌ಲಯನ್: ಹೌ ನರಸಿಂಹರಾವ್ ಟ್ರಾನ್ಸ್‌ಫೋರ್ಮ್ ಇಂಡಿಯಾ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.ಶಾಂತಿಗಾಗಿ ಮತ್ತು ಸಾಮುದಾಯಿಕ ಸೌಹಾರ್ದಕ್ಕಾಗಿ ತಾನು 1992 ನವೆಂಬರ್ ಹದಿನಾಲ್ಕರಂದು ನಡೆಸಿದ್ದ ರಾಮ್ ರಹೀಂ ಯಾತ್ರೆಮತ್ತು ಅದನ್ನುಉತ್ತರಪ್ರದೇಶದಲ್ಲಿ ತಡೆದು ತನ್ನನ್ನು ಬಂಧಿಸಿದ್ದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ. ತನ್ನ ಯಾತ್ರೆಯಲ್ಲಿ ತನಗೆ ವಿರೋಧವಿಲ್ಲ ಎಂದು ರಾವ್ ತನ್ನನ್ನು ಕರೆಯಿಸಿಕೊಂಡು ಹೇಳಿದ್ದರು. ಆದರೆ ಹಿಂದೂ ಬಹುಸಂಖ್ಯಾತರಾಷ್ಟ್ರವೆಂಬ ನೆಲೆಯಲ್ಲಿ ಸೆಕ್ಯುಲರಿಸಂ ಸಂಬಂಧಿಸಿ ತನ್ನ ವ್ಯಾಖ್ಯಾನವನ್ನು ಅವರು ಒಪ್ಪಲಿಲ್ಲ. ಅವರು ಹೇಳುವುದನ್ನು ಈಗಾಗಲೇ ಬಿಜೆಪಿಯೂ ವಾದಿಸುತ್ತಿದೆ ಎಂದು ನಾನು ಅವರಿಗೆ ತಿಳಿಸಿದ್ದೆ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಪರಿಸ್ಥಿತಿಯನ್ನು ಅರ್ಥೈಸುವುದರಲ್ಲಿ ರಾವ್ ವಿಫಲಾರಾಗಿದ್ದು ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾಯಿತು ಎಂದು ಗ್ರಂಥಕಾರ ವಿನಯ್ ಸೀತಾಪತಿ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News