×
Ad

ಚೆನ್ನೈ: ಯುವತಿಯ ನಗ್ನ ಫೋಟೊ ಫೇಸ್‌ಬುಕ್‌ನಲ್ಲಿ ಹಾಕಿದಾತನ ಬಂಧನ

Update: 2016-06-29 15:05 IST

ಚೆನ್ನೈ, ಜೂನ್ 29: ತನ್ನ ನಗ್ನ ಚಿತ್ರವನ್ನು ಕೃತಕವಾಗಿ ಸೃಷ್ಟಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದರಿಂದ ನೊಂದುಕೊಂಡ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿದ್ದ ಘಟನೆಯ ಓರ್ವ ಆರೋಪಿಯನ್ನು ತಮಿಳ್ನಾಡು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಸೇಲಂನ ಸುರೇಶ್ ಎಂಬಾತ ಬಂಧಿತ ವ್ಯಕ್ತಿ. ಯುವತಿ ತನ್ನನ್ನು ಪ್ರೇಮಿಸಲು ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಕೃತಕವಾಗಿ ನಗ್ನ ಚಿತ್ರವನ್ನು ಸೃಷ್ಟಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 23ಕ್ಕೆ ಈತ ಯುವತಿಯ ನಗ್ನ ಫೋಟೊವನ್ನು ಕೃತಕವಾಗಿ ಸೃಷ್ಟಿಸಿ ಫೇಸ್‌ಬುಕ್‌ಗೆ ಅಪ್ ಲೋಡ್ ಮಾಡಿದ್ದ. ಅಂದೇ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಯುವತಿ ಶಂಕೆ ವ್ಯಕ್ತಪಡಿಸಿದ್ದ ಬೇರೊಬ್ಬ ವ್ಯಕ್ತಿಯನ್ನು ವಿಚಾರಿಸಿ ಆತ ತಪ್ಪಿತಸ್ಥನಲ್ಲ ಎಂದು ತಿಳಿದು ಬಿಟ್ಟಿದ್ದರು. ಮರು ದಿವಸ ಯುವತಿಯ ಮತ್ತೊಂದು ನಗ್ನ ಫೋಟೊವನ್ನು ಯುವತಿಯ ತಂದೆಯ ಫೋನ್‌ನಂಬರ್ ಸಹಿತ ಅಪ್‌ಲೋಡ್ ಮಾಡಿದ್ದ. ಇದರಿಂದ ನೊಂದ ಯುವತಿ ಮನೆಯ ಫ್ಯಾನ್‌ಗೆ ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆರೋಪಿಯ ಮನೆ ಯುವತಿಯ ಮನೆಯಿಂದ ಒಂದು ಕಿ.ಮೀ.ದೂರದಲ್ಲಿದೆ. ತಾನು ಯುವತಿಯನ್ನುಅಪಮಾನಿಸಲು ಹೀಗೆ ಮಾಡಿದೆ ಎಂದು ಆತ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News