ಮಳೆಗಾಲದಲ್ಲಿ ಡ್ರೈವಿಂಗ್ : ಈ ಸುರಕ್ಷತಾ ಕ್ರಮಗಳು ನಿಮಗೆ ತಿಳಿದಿರಲಿ
ಮಳೆಗಾಲದಲ್ಲಿ ಒದ್ದೆಯಾದ ನೆಲ, ಬಜ್ಜಿ ಮತ್ತು ಖಡಕ್ ಚಾಯ್ ಸವಿ ನೋಡುವುದು ಬಹಳ ಖುಷಿಯಾಗುತ್ತದೆ. ಆದರೆ ಡ್ರೈವಿಂಗ್ ಮಾಡುವವರಿಗೆ ಮಳೆ ದೊಡ್ಡ ತಲೆನೋವು. ರಸ್ತೆ ಮೇಲೆ ಗ್ರಿಪ್ ಪಡೆಯಲು ಸಾಕಷ್ಟು ಶ್ರಮ ಪಡಬೇಕು. ಜೋರು ಮಳೆ ಇರುವಾಗ ರಸ್ತೆಯೂ ಸರಿಯಾಗಿ ಕಾಣಿಸುವುದಿಲ್ಲ, ದ್ವಿಚಕ್ರ ವಾಹನ ಓಡಿಸುವವರಿಗೆ ಮಳೆಯಲ್ಲಿ ತೋಯಬೇಕಾದ ಸಮಸ್ಯೆ. ಹೀಗೆ ಮಳೆಯಲ್ಲಿ ಡ್ರೈವಿಂಗ್ ಮಾಡುವವರಿಗೆ ಇಲ್ಲಿವೆ ಕೆಲವು ಸಲಹೆಗಳು.
1. ಪ್ರಯಾಣ ಮಾಡಲೇಬೇಕೆ ಎಂದು ಯೋಚಿಸಿ:ಅತಿಯಾಗಿ ಮಳೆ ಸುರಿದು ನೀರು ರಸ್ತೆಯಲ್ಲೆಲ್ಲ ನಿಂತಿದ್ದರೆ ಪ್ರಯಾಣಿಸುವುದು ಅಪಾಯಕಾರಿ. ಕಾರು ಬಳಸದೆ ಪ್ರಂಾಣ ಮಾಡಬಹುದೇ ಎಂದು ಯೋಚಿಸಿ.ಮಳೆ ಇನ್ನೂ ಜೋರಾಗಿದ್ದರೆ ಪ್ರಯಾಣ ವಿಳಂಬವಾಗಬಹುದು. ಏಕಾಂಗಿಯಾಗಿ ಮಳೆ ನಡುವೆ ಸಿಕ್ಕಿಕೊಳ್ಳುವ ಬದಲಾಗಿ ಕಾರಿನಲ್ಲಿ ಸಿಕ್ಕಿಕೊಳ್ಳುವುದೇ ಉತ್ತಮ. ಆದರೆ ಕೆಲವೊಮ್ಮೆ ಕಾರನ್ನು ಬಿಟ್ಟು ಬೇರೆ ವಾಹನದಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಬರಬಹುದು. ಇಂತಹ ಸನ್ನಿವೇಶ ತಂದುಕೊಳ್ಳುವುದಾದರೂ ಏಕೆ?
2. ರಸ್ತೆಯಲ್ಲಿ ಆಳವಾಗಿ ನೀರು ತುಂಬಿದ್ದರೆ ಗಾಡಿ ಓಡಿಸಬೇಡಿ: ಕಾರಿನಲ್ಲಿ ಮಳೆಯಲ್ಲೇ ಪ್ರಯಾಣ ಬೆಳೆಸುವುದು ಸರಿ. ಆದರೆ ಮಳೆ ನೀರು ನಿಂತ ರಸ್ತೆಯಲ್ಲಿ ಗಾಡಿ ಓಡಿಸುವಾಗ ಹುಷಾರು. ಪ್ರವಾಹದ ನೀರು ತುಂಬಿದ ರಸ್ತೆಗಳಲ್ಲಿ ಪ್ರಯಾಣಿಸಬೇಡಿ. ಒಂದು ಅಡಿಗಿಂತ ಹೆಚ್ಚು ಆಳ ನೀರಿದ್ದರೆ ಬೇರೆ ರಸ್ತೆಯಲ್ಲಿ ಹೋಗಿ. ಮತ್ತೊಂದು ವಾಹನ ಹಾದು ಹೋಗುವುದನ್ನು ಕಂಡು ಎಷ್ಟು ಆಳ ನೀರಿದೆ ಎಂದು ಗಮನಿಸಿ ಮುಂದುವರಿಯಿರಿ. ಚಕ್ರದ ಮಧ್ಯಭಾಗಕ್ಕಿಂತ ಹೆಚ್ಚು ನೀರಿನ ಮಟ್ಟ ಇದ್ದಲ್ಲಿ ಬೇರೆ ದಾರಿ ಹುಡುಕಿ.ಇಲ್ಲದಿದ್ದರೆ ಇಂಜಿನಿಗೆ ಹಾನಿಯಾಗಬಹುದು. ನೀರು ಕಾರಿನ ಇಲೆಕ್ಟ್ರಿಕಲ್ ಗಳಿಗೆ ತಗಲಿದಲ್ಲಿ ಸಮಸ್ಯೆ ತೀವ್ರವಾಗಲಿದೆ.
3. ಕಾರನ್ನು ಫಸ್ಟ್ ಗೇರಲ್ಲಿಡಿ, ನಿಧಾನವಾಗಿ ಸಾಗಿ: ನೀರು ತುಂಬಿದ ಜಾಗದಲ್ಲಿ ನಿಧಾನವಾಗಿ ಚಲಿಸಬೇಕು. ಫಸ್ಟ್ ಗೇರಲ್ಲಿ ಮುಂದುವರಿಯಿರಿ. ಆಟೋಮ್ಯಾಟಿಕ್ ಕಾರಾಗಿದ್ದಲ್ಲಿ ಗೇರ್ ಲಿವರನ್ನು ಎಲ್‌ಗೆ ಇಡಿ ಅಥವಾ ಮ್ಯಾನುವಲ್ ಮೋಡಿಗೆ ತನ್ನಿ. ನೀರು ತುಂಬಿದ ರಸ್ತೆಯಲ್ಲಿ ವೇಗವಾಗಿ ಸಾಗಬೇಡಿ.ಕಾರಿನ ನಿಯಂತ್ರಣ ತಪ್ಪಬಹುದು. ನಿಧಾನವಾಗಿ ಗಂಟೆಗೆ 15 ಕಿಮೀ ವೇಗದಲ್ಲಿ ಮುಂದೆ ಸಾಗಿ ಮತ್ತು ಬ್ರೇಕನ್ನು ವೇಗವಾಗಿ ಅಕ್ಸಲರೇಟ್ ಮಾಡಬೇಡಿ.
4. ದೃಶ್ಯ ಕಾಣಬೇಕು: ಮಳೆಯಿಂದ ಹಿಮಬಿಂದುಗಳು ವಾತಾವರಣದಲ್ಲಿರುತ್ತವೆ. ಹೀಗಾಗಿ ದೃಶ್ಯಗಳು ಸರಿಯಾಗಿ ಕಾಣಿಸುವುದಿಲ್ಲ. ಆಗ ನಿಮ್ಮ ಹೆಡ್ ಲ್ಯಾಂಪುಗಳು ಮತ್ತು ಫಾಗ್ ಲ್ಯಾಂಪುಗಳನ್ನು ಆನ್ ಮಾಡಿ. ರೇರ್ ಫಾಗ್ ಲ್ಯಾಂಪ್ ಕಾರಿಗೆ ಇದ್ದಲ್ಲಿ ಅದೂ ಬೆಳಗುತ್ತಿರಲಿ ತುರ್ತು ಬ್ಲಿಂಕರನ್ನು ಬೆಳಗಬೇಡಿ.ಹಾಗೆ ಮಾಡಿದಲ್ಲಿ ಲೇನಲ್ಲಿ ಸಾಗುವ ಇತರರಿಗೆ ತಪ್ಪು ಸಂದೇಶ ಹೋಗಲಿದೆ.
5. ಸತತವಾಗಿ ಕ್ರಾಂಕ್ ಮಾಡಬೇಡಿ: ನೀರು ತುಂಬಿದ ಜಾಗದಲ್ಲಿ ವಾಹನ ನಿಂತಿದ್ದಲ್ಲಿ ಮತ್ತೆ ಮತ್ತೆ ಕ್ರಾಂಕ್ ಮಾಡಬೇಡಿ. ಕಾರನ್ನು ಸ್ಟಾರ್ಟ್ ಮಾಡುವ ಪ್ರಯತ್ನದಿಂದ ನೀರು ತುಂಬಿಕೊಂಡು ರಿಪೇರಿ ಕಷ್ಟವಾಗಲಿದೆ.ಕೆಲವು ಕ್ರಾಂಕಲ್ಲಿ ವಾಹನ ಸ್ಟಾರ್ಟ್ ಆಗದಿದ್ದಲ್ಲಿ ನ್ಯೂಟ್ರಲಲ್ಲಿ ಕಾರನ್ನು ರಸ್ತೆಯ ಮೇಲೆ ಎಡಬದಿಗೆ ದೂಡಿ. ಇತರ ವಾಹನಗಳಿಗೆ ತೊಂದರೆಯಾಗದಂತೆ ಹೀಗೆ ಮಾಡಬೇಕು.
6. ಒದ್ದೆ ಸ್ಥಿತಿಯಲ್ಲಿ ಬ್ರೇಕ್ ಪರಿಣಾಮಕಾರಿಯಾಗಿರುವುದಿಲ್ಲ. ನೀರು ತುಂಬಿದ ಜಾಗ ದಾಟಿದ ಮೇಲೆ ಬ್ರೇಕ್ ಪೆಡಲನ್ನು ಪಂಪ್ ಮಾಡಿ. ಬ್ರೇಕ್ ಒಣಗಿಸಲು ಕೆಲ ಬಾರಿ ಬ್ರೇಕ್ ಪೆಡಲನ್ನು ಒತ್ತಿ. ನೀವು ಮುಂದುವರಿಯುವ ಮೊದಲು ಇದನ್ನು ಮಾಡಬೇಕು.
7. ನೀರು ಹರಿಸಬೇಡಿ: ರಸ್ತೆಯಲ್ಲಿ ವಾಹನ ಚಲಾಯಿಸುವ ಭರದಲ್ಲಿ ಇತರರ ಮೇಲೆ ನೀರು ಹಾರಿಸುವಂತೆ ಸಾಗಬೇಡಿ. ಗುಂಡಿಬಿದ್ದ ರಸ್ತೆಗಳನ್ನು ಬಿಟ್ಟು ಸಾಗಿ.
ಕೃಪೆ: zeenews.india.com