ಕೆಲಸಕ್ಕೆ ಪ್ರಾಮಾಣಿಕವಾಗಿರಿ, ಬಾಸ್‌ನ ಗುಲಾಮರಾಗಬೇಡಿ
ಬಾಸ್ ಜೊತೆಗೆ ಸ್ನೇಹಮಯ ಸಂಬಂಧ ಹೊಂದಿದ್ದೂ ವೃತ್ತಿಪರವಾಗಿ ಅಂತರ ಕಾಯ್ದುಕೊಳ್ಳುವುದು ಸಂಕೀರ್ಣ ವಿಷಯವಾಗುತ್ತದೆ. ಮುಖ್ಯವಾಗಿ ಬಾಸ್ ಸ್ವಲ್ಪ ಮಜಾ ಸ್ವಭಾವದವರಾಗಿದ್ದು ಪ್ರಾಮಾಣಿಕವಾದ ವೈಯಕ್ತಿಕ ಸಂಭಾಷಣೆಯನ್ನು ಮಾಡುವ ಮತ್ತು ಜೋಕ್ ಮಾಡುವ ಸ್ವಭಾವದವರಾಗಿದ್ದರೆ ಇನ್ನೂ ಕಷ್ಟವಾಗುತ್ತದೆ.ಆದರೆ ನೀವೆಷ್ಟೇ ಸ್ನೇಹಮಯವಾಗಿದ್ದರೂ ಅವರು ನಿಮ್ಮ ಬಾಸ್ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕು ಮತ್ತು ಆ ಗೌರವವನ್ನು ಅವರಿಗೆ ಕೊಡಲೇಬೇಕು. ವೃತ್ತಿಪರ ಮತ್ತು ವೈಯಕ್ತಿಕ ಎರಡೂ ಸಮೀಕರಣಗಳೂ ಉಲ್ಟಾ ಹೊಡೆಯದಂತೆ ಗಮನಹರಿಸಬೇಕು. ಬಾಸ್ ಜತೆಗೆ ಸಂಬಂಧ ಕಾಯ್ದುಕೊಳ್ಳುವಾಗ ಈ ಐದು ವಿಷಯಗಳತ್ತ ಗಮನಹರಿಸಬೇಕು.
ನಿಮ್ಮ ಖಾಸಗಿ ಜೀವನ ನಿಮ್ಮದಾಗಿರಲಿ
ನಿಮ್ಮ ಖಾಸಗಿ ಜೀವನದ ಬಗ್ಗೆ ಬಾಸ್ ಜೊತೆಗೆ ಹೆಚ್ಚು ವಿವರಣೆ ಕೊಡಬೇಡಿ. ಖಾಸಗಿ ಬದುಕನ್ನು ಸ್ವಂತಕ್ಕೆ ಇಟ್ಟುಕೊಳ್ಳಬೇಕು. ಆರಂಭದಲ್ಲಿ ಹೆಚ್ಚು ನಷ್ಟವೆನಿಸದೆ ಇರುವುದು ನಂತರ ಅಹಿತಕರವಾಗಿ ಪರಿಣಮಿಸಬಹುದು. ಉದಾಹರಣೆಗೆ ನಿಮ್ಮ ಬಾಸ್ ಅದೇ ಖಾಸಗಿ ಸಮಸ್ಯೆಯನ್ನು ಮತ್ತೊಬ್ಬ ಸಹೋದ್ಯೋಗಿ ಜತೆಗೆ ಚರ್ಚಿಸಬಹುದು. ನಿಮಗೆ ಅದು ಹಿಡಿಸದೆ ಇರಬಹುದು. ಆದರೆ ಬಾಸ್ ಆಗಿರುವ ಕಾರಣ ಅವರನ್ನು ಏನೂ ಹೇಳುವ ಹಾಗಿರುವುದಿಲ್ಲ.
ಎಲ್ಲಾ ಅಭಿಪ್ರಾಯ ಮುಂದಿಡಬೇಡಿ
ಕಾರ್ಯಪರಿಸರದ ಅಭಿಪ್ರಾಯವನ್ನು ಮ್ಯಾನೇಜರ್ ಮುಂದೆ ಇಡುವಾಗ ಏನು ಹೇಳಬೇಕು ಮತ್ತು ಏನು ಹೇಳಬಾರದು ಎಂದು ಗಮನಿಸಬೇಕು. ಹಿರಿಯರನ್ನು ಮುಖ ನೋಡಿ ಅಂದಾಜಿಸಬೇಡಿ. ಪರಿಸ್ಥಿತಿಯನ್ನು ಗಮನಿಸಿ. ಕೆಲವೊಮ್ಮೆ ಇಷ್ಟವಾಗದಿದ್ದರೆ ಟೀಕೆಗಳೂ ಬರಬಹುದು. ಅಂತಹವನ್ನು ಬಾಸ್ ಜೊತೆಗೆ ಹಂಚಿಕೊಳ್ಳಲು ಅವರು ಬಯಸದೆ ಇರಬಹುದು.
ನೇರವಾದ ಸಂಬಂಧ ಬೇಡ
ಮ್ಯಾನೇಜರುಗಳೂ ಮನುಷ್ಯರು. ಎಲ್ಲವನ್ನೂ ನೇರವಾಗಿ ಹೇಳುವುದು ಉತ್ತಮವಲ್ಲ. ಸ್ವಲ್ಪ ಪರೋಕ್ಷವಾಗಿ ವಿಷಯ ಮುಂದಿಡಬೇಕಾಗುತ್ತದೆ. ಶಬ್ದಗಳನ್ನು ಜಾಗರೂಕವಾಗಿ ಆಡಿ. ಉದ್ಯೋಗಿಗೆ ನೇರವಾಗಿ ತಾರತಮ್ಯ ಮಾಡುತ್ತಿದ್ದೀಯ ಎಂದು ಹೇಳಲು ಹೋಗಬೇಡಿ.
ನಿಮ್ಮೆಲ್ಲ ಸಾಮರ್ಥ್ಯ ಖಾಲಿ ಮಾಡಬೇಡಿ
ನಿಮ್ಮ ಪ್ರತಿಭೆ ಸಾಬೀತುಮಾಡುವ ಮಹತ್ವಾಕಾಂಕ್ಷೆ ನಿಮಗೆ ಇರಬಹುದು. ಆದರೆ ಧೀರ್ಘಕಾಲೀನ ಗುರಿ ಮತ್ತು ಉದ್ದೇಶಗಳಿರಲಿ. ನಿಧಾನವಾಗಿ ನಿಮ್ಮ ಕೌಶಲ್ಯವನ್ನು ಮುಂದಿಡಿ. ಕೆಲವೊಮ್ಮೆ ನಿಮಗೇನು ಬೇಕೆಂಬುದೇ ನಿಮಗೆ ತಿಳಿಯದೆ ಇರಬಹುದು. ಎಲ್ಲವನ್ನೂ ಮೊದಲೇ ಹೇಳಿ ಮತ್ತೆ ಬದಲಿಸಬೇಕೆಂದಾಗ ಕಷ್ಟವಾಗಬಹುದು. ವೃತ್ತಿಯಲ್ಲಿ ಒಂದೊಂದೇ ಹೆಜ್ಜೆ ಇಟ್ಟು ಜಾಗರೂಕವಾಗಿ ಮುಂದೆ ಸಾಗಿ.
ಸಹೋದ್ಯೋಗಿಗಳ ಜೊತೆಗೆ ಸೌಹಾರ್ದವಾಗಿರಿ
ನಿಮ್ಮ ಸಹೋದ್ಯೋಗಿಗಳು ವಿಶ್ವಾಸವಿಟ್ಟು ಕೆಲವು ವಿಷಯಗಳನ್ನು ಹೇಳಿರಬಹುದು. ಅಂತಹ ಸಂಬಂಧ ಮತ್ತು ಸಂಭಾಷಣೆಗೆ ಗೌರವ ಕೊಡಿ. ನಿಮ್ಮ ಉದ್ಯೋಗಿ ಹೇಳಿದ್ದೆಲ್ಲವನ್ನೂ ಮುಂದಿಡಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ನೈತಿಕವಾಗಿ ನೋಡಬೇಕೇ ವಿನಾ ವೃತ್ತಿಪರವಾಗಿಯಲ್ಲ.
ಕೃಪೆ:indianexpress.com