×
Ad

ಡೊಮೆಸ್ಟಿಕ್ ವಿಮಾನ ಪ್ರಯಾಣಿಕರಿಗೆ ಇಲ್ಲಿದೆ ಶುಭಸುದ್ದಿ

Update: 2016-07-01 12:16 IST

ಶುಕ್ರವಾರದಿಂದ ವಿಮಾನ ಪ್ರಯಾಣಿಕರು ಹೆಚ್ಚುವರಿ ಚೆಕ್ಡ್ ಇನ್ ಬ್ಯಾಗೇಜ್ ಮೇಲೆ ತೆರುವ ಶುಲ್ಕ ಅಗ್ಗವಾಗಲಿದೆ. ಹೊಸ ಶುಲ್ಕ ನಿಯಮಗಳ ಪ್ರಕಾರ ಹೆಚ್ಚುವರಿ   ಬ್ಯಾಗೇಜಿಗೆ ಒಂದು ಮಿತಿಯವರೆಗೆ ಕಿಲೋಗ್ರಾಂಗೆ ರೂ. 100 ಮಾತ್ರ ವಿಧಿಸಲಾಗುತ್ತದೆ. ಈಗಿನ ದರದ ಪ್ರಕಾರ ಕಿಲೋಗ್ರಾಂಗೆ ರು. 300 ತೆರಬೇಕಿದೆ.

ಕಡಿತಗೊಳಿಸಿದ ದರಗಳನ್ನು ಸರ್ಕಾರ ಈ ತಿಂಗಳ ಆರಂಭದಲ್ಲಿ ಘೋಷಿಸಿದೆ. ಆರಂಭದಲ್ಲಿ ಈ ನಿಯಮಗಳು ಜೂನ್ 15ರಿಂದ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ ನಂತರ ಅನುಷ್ಠಾನದ ದಿನವನ್ನು ಜುಲೈ 1ಕ್ಕೆ ಮುಂದೂಡಲಾಗಿತ್ತು. ವಿಮಾನ ಯಾನ ಸಂಸ್ಥೆಗಳು ತಮ್ಮ ವ್ಯವಸ್ಥೆಯನ್ನು ಅಪ್ ಗ್ರೇಡ್ ಮಾಡಲು ಸಮಯ ಕೇಳಿದ ಕಾರಣ ಭಾರತೀಯ ನಾಗರಿಕ  ವಾಯುಯಾನ ನಿಯಂತ್ರಣ ಮಂಡಳಿ(ಡಿಜಿಸಿಎ) ಅನುಷ್ಠಾನ ದಿನವನ್ನು ಮುಂದೂಡಿತ್ತು. ಈಗ ಎಲ್ಲಾ ದೇಶಿ ವೈಮಾನಿಕ ಸಂಸ್ಥೆಗಳು 15 ಕೇಜಿವರೆಗೆ ಬ್ಯಾಗೇಜನ್ನು ಉಚಿತ ಚೆಕಿನ್‌ಗೆ ಬಿಡುತ್ತಾರೆ. ಹೆಚ್ಚುವರಿ ಬ್ಯಾಗೇಜ್ ಇದ್ದರೆ ಕಿಲೋಗ್ರಾಂಗೆ ರೂ. 300 ತೆರಬೇಕಿದೆ. ಕೇವಲ ಏರ್ ಇಂಡಿಯಾ ಮಾತ್ರಿ 23 ಕೇಜಿ ಬ್ಯಾಗೇಜ್ ತೆಗೆದುಕೊಂಡು ಹೋಗಲು ಅವಕಾಶ ಕೊಡುತ್ತದೆ.

ಪ್ರಯಾಣಿಕರಿಗೆ ನೆರವಾಗಲು 15-20 ಕೇಜಿ ಒಳಗೆ ಚೆಕಿನ್ ಬ್ಯಾಗೇಜು ದರಗಳನ್ನು ಸುಲಭಗೊಳಿಸುವಂತೆ ವೈಮಾನಿಕ ಸಂಸ್ಥೆಗಳಿಗೆ ಹೇಳಲಾಗಿದೆ. ಪ್ರಯಾಣಿಕರು 20 ಕೇಜಿವರೆಗೆ ಬ್ಯಾಗೇಜ್ ಕೊಂಡೊಯ್ಯಬಹುದು ಎಂದು ಡಿಜಿಸಿಎ ಹೇಳಿದೆ. 20 ಕೇಜಿಗಿಂತ ಹೆಚ್ಚು ಇರುವ ಬ್ಯಾಗೇಜಿಗೆ ಯಾವುದೇ ಶುಲ್ಕ ವಿಧಿಸಲು ವೈಮಾನಿಕ ಸಂಸ್ಥೆಗಳಿಗೆ ಸ್ವಾತಂತ್ರ್ಯ ಕೊಡಲಾಗಿದೆ. ವಿಮಾನ ಸಂಸ್ಥೆಗಳು ಹೇರುವ ಹೆಚ್ಚುವರಿ ಬ್ಯಾಗೇಜ್ ಗೆ ಶುಲ್ಕ ವ್ಯವಸ್ಥೆಯನ್ನು ಇಳಿಸಿರುವ ಡಿಜಿಸಿಎ ನಿರ್ಧಾರಕ್ಕೆ ತಡೆಯಾಜ್ಞೆ ಕೊಡಲು ಬುಧವಾರ ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News