×
Ad

ಕುಲಾಂತರಿ ತಳಿಗಳಿಗೆ ನೊಬೆಲ್ ವಿಜೇತರ ಅಂಗೀಕಾರ

Update: 2016-07-02 12:20 IST

ಕುಲಾಂತರಿ ತಳಿಗಳು ಅಥವಾ ಜಿಎಂಒಗಳ ವಿರುದ್ಧ ಗ್ರೀನ್‌ಪೀಸ್ ಮತ್ತು ಅದರ ಸಹಚರರು ನಡೆಸಿರುವ ಪ್ರಚಾರಾಭಿಯಾನವನ್ನು ನಿಲ್ಲಿಸುವಂತೆ 100ಕ್ಕೂ ಅಧಿಕ ನೊಬೆಲ್ ಪ್ರಶಸ್ತಿ ವಿಜೇತರು ಸಹಿ ಹಾಕಿದ್ದಾರೆ. ಕುಲಾಂತರಿ ಆಹಾರವನ್ನು ವಿರೋಧಿಸುವವರು ಜಗತ್ತಿನ ಎಲ್ಲಾ ಜನಸಂಖ್ಯೆಯ ಹೊಟ್ಟೆ ತುಂಬಿಸಲು ಎಷ್ಟು ಆಹಾರ ಬೇಕು ಎನ್ನುವ ವಾಸ್ತವವನ್ನು ಪದೇ ಪದೇ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ ಮತ್ತು ಕುಲಾಂತರಿ ಆಹಾರದ ಅಪಾಯಗಳು, ಲಾಭಗಳು ಮತ್ತು ಪರಿಣಾಮಗಳ ಬಗ್ಗೆ ತಪ್ಪು ಮಾಹಿತಿ ಮುಂದಿಡುತ್ತಿದ್ದಾರೆ. ವಿಜ್ಞಾನಿಗಳು ಪದೇ ಪದೇ ಕುಲಾಂತರಿ ಆಹಾರ ಸುರಕ್ಷಿತ ಎನ್ನುವುದನ್ನು ಕಂಡುಕೊಂಡು ಸಾಬೀತು ಮಾಡಿದ್ದರೂ ಸಹ ಜಿಎಂಒ ವಿರೋಧಿಗಳು ಅಂಗೀಕೃತ ಕ್ಷೇತ್ರವಾರು ಅಧ್ಯಯನಗಳು ಮತ್ತು ಸಂಶೋಧನಾ ಯೋಜನೆಗಳ ವಿನಾಶಕ್ಕೆ ಬೆಂಬಲಿಸಿದ್ದಾರೆ ಎಂದು ಜಿಎಂಒ ಪರವಾದಿಸುವವರು ಹೇಳಿದ್ದಾರೆ.

ಮುಖ್ಯವಾಗಿ ಜಿಎಂಒ ವಿರೋಧಿಗಳ ವಿರುದ್ಧ ಸಹಿ ಹಾಕಿದವರಲ್ಲಿ 41 ಮಂದಿ ವೈದ್ಯಶಾಸ್ತ್ರಕ್ಕೆ ನೊಬೆಲ್ ಪಡೆದಿದ್ದರೆ, 25 ಮಂದಿ ಭೌತಶಾಸ್ತ್ರ ಮತ್ತು 34 ಮಂದಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪಡೆದವರು. ಇವರೆಲ್ಲರೂ ಗೋಲ್ಡನ್ ರೈಸ್ ವಿರುದ್ಧ ಗ್ರೀನ್‌ಪೀಸ್ ಪ್ರಚಾರಾಭಿಯಾನ ನಿಲ್ಲಿಸಲು ಬಯಸಿದ್ದಾರೆ. ಜೊತೆಯಲ್ಲಿಯೇ ಜೈವಿಕತಂತ್ರಜ್ಞಾನ ಮೂಲಕ ಅಭಿವೃದ್ಧಿಪಡಿಸಿದ ಇತರ ಆಹಾರದ ಬಗ್ಗೆಯೂ ಸಕಾರಾತ್ಮಕವಾಗಿದ್ದಾರೆ. ಗೋಲ್ಡನ್ ರೈಸ್ ಈಗಲೇ ಸಾಮೂಹಿಕವಾಗಿ ಬೆಳೆಯುವ ಹಂತಕ್ಕೆ ಬಂದಿಲ್ಲ. ಆದರೆ 250 ಮಿಲಿಯ ಮಂದಿ ಈಗಾಗಲೇ ನಲುಗುತ್ತಿರುವ ರೋಗದ ಸಮಸ್ಯೆಯನ್ನು ನಿವಾರಿಸುವ ಮೂಲಕ ವಿಟಮಿನ್ ಎ ಕೊರತೆಯಿಂದ ಬಳಲುತ್ತಿರುವ ಮಂದಿಗೆ ಹೆಚ್ಚುವರಿ ಪೋಷಕಾಂಶ ಒದಗಿಸಲಿದೆ. ನೊಬೆಲ್ ವಿಜೇತರು ಗ್ರೀನ್‌ಪೀಸ್ ಸಂಸ್ಥೆಗೆ ಬರೆದ ಪತ್ರದ ಒಕ್ಕಣೆ ಇಲ್ಲಿದೆ.

ಗ್ರೀನ್‌ಪೀಸ್ ನಾಯಕರಿಗೆ, ವಿಶ್ವ ಸಂಸ್ಥೆಗೆ ಮತ್ತು ಜಾಗತಿಕವಾಗಿ ಇರುವ ಸರ್ಕಾರಗಳಿಗೆ,

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಕಾರ್ಯಕ್ರಮವು ಕಂಡುಕೊಂಡಿರುವ ಪ್ರಕಾರ 2050ರ ಹೊತ್ತಿಗೆ ಬೆಳೆಯುವ ಜಾಗತಿಕ ಜನಸಂಖ್ಯೆಯ ಬೇಡಿಕೆಯನ್ನು ಈಡೇರಿಸಬೇಕಿದ್ದಲ್ಲಿ ಜಾಗತಿಕ ಆಹಾರ ಉತ್ಪಾದನೆ, ಆಹಾರ ಮತ್ತು ಫೈಬರ್ ಅಂಶವು ಸರಿಸುಮಾರು ದ್ವಿಗುಣಗೊಳ್ಳಬೇಕಿದೆ. ಮುಂಚೂಣಿಯಲ್ಲಿರುವ ಗ್ರೀನ್‌ಪೀಸ್ ಸೇರಿದಂತೆ ಆಧುನಿಕ ಸಸ್ಯ ಬೆಳೆಸುವ ಪದ್ಧತಿಯನ್ನು ವಿರೋಧಿಸುವ ಸಂಸ್ಥೆಗಳು ಪದೇ ಪದೇ ಈ ವಾಸ್ತವಗಳನ್ನು ನಿರ್ಲಕ್ಷಿಸಿವೆ ಮತ್ತು ಕೃಷಿಯಲ್ಲಿ ಜೈವಿಕ ತಂತ್ರಜ್ಞಾನದ ಅನ್ವೇಷಣೆಗಳನ್ನು ವಿರೋಧಿಸಿವೆ. ಅವರು ಅಪಾಯಗಳು, ಲಾಭಗಳು ಮತ್ತು ಪರಿಣಾಮಗಳನ್ನು ತಪ್ಪು ರೀತಿಯಲ್ಲಿ ಮುಂದಿಟ್ಟಿವೆ ಮತ್ತು ಅಂಗೀಕೃತ ಕ್ಷೇತ್ರವಾರು ಪ್ರಯೋಗಗಳು ಮತ್ತು ಸಂಶೋಧನಾ ಯೋಜನೆಗಳ ಕ್ರಿಮಿನಲ್ ನಾಶಕ್ಕೆ ಬೆಂಬಲಿಸಿದ್ದಾರೆ.

ನಾವು ಗ್ರೀನ್‌ಪೀಸ್ ಮತ್ತು ಅದರ ಬೆಂಬಲಿಗರು ಜಾಗತಿಕವಾಗಿ ಜೈವಿಕ ತಂತ್ರಜ್ಞಾನದ ಮೂಲಕ ಸುಧಾರಿಸಿದ ರೈತರು ಮತ್ತು ಗ್ರಾಹಕರು ಬೆಳೆಗಳು ಮತ್ತು ಆಹಾರದ ಕುರಿತು ಪಡೆದಿರುವ ಅನುಭವವನ್ನು ಮರಳಿ ಪರಿಶೀಲಿಸುವಂತೆ ಒತ್ತಾಯಿಸುತ್ತಿದ್ದೇವೆ. ಅಧಿಕೃತ ವೈಜ್ಞಾನಿಕ ಸಂಸ್ಥೆಗಳು ಮತ್ತು ನಿಯಂತ್ರಣ ಸಂಘಟನೆಗಳ ಅಧ್ಯಯನವನ್ನು ಗುರುತಿಸಿ ಮತ್ತು ಕುಲಾಂತರಿ ತಳಿಗಳ ವಿರುದ್ಧ ಮತ್ತು ಮುಖ್ಯವಾಗಿ ಗೋಲ್ಡನ್ ರೈಸ್ ವಿರುದ್ಧ ತಮ್ಮ ಪ್ರಚಾರಾಭಿಯಾನವನ್ನು ತೊರೆಯಲಿ.

ವೈಜ್ಞಾನಿಕ ಮತ್ತು ನಿಯಂತ್ರಣ ಸಂಸ್ಥೆಗಳು ಜಾಗತಿಕವಾಗಿ ಪದೇ ಪದೇ ಮತ್ತು ನಿರಂತರವಾಗಿ ಜೈವಿಕ ತಂತ್ರಜ್ಞಾನದ ಮೂಲಕ ಸುಧಾರಿಸಿರುವ ಬೆಳೆಗಳು ಮತ್ತು ಆಹಾರಗಳು ಇತರ ವಿಧಾನದ ಉತ್ಪಾದನೆಯಿಂದ ಪಡೆದ ಆಹಾರವನ್ನು ಮೀರಿಸದೆ ಇದ್ದರೂ, ಅವುಗಳಿಗೆ ಸಮನಾಗಿ ಸುರಕ್ಷಿತ ಎಂದು ಹೇಳಿವೆ. ಮಾನವರಿಗೆ ಅಥವಾ ಪ್ರಾಣಿಗಳಿಗೆ ಈ ಆಹಾರ ಸೇವನೆಯಿಂದ ಯಾವುದೇ ನಕಾರಾತ್ಮಕ ಆರೋಗ್ಯ ಸಮಸ್ಯೆಗಳಾಗಿರುವ ದೃಢೀಕೃತ ಪ್ರಕರಣವಿಲ್ಲ. ಅವುಗಳಿಂದ ಪರಿಸರದ ಮೇಲೆ ಆಗುವ ಪರಿಣಾಮಗಳೂ ಕಡಿಮೆಯಾಗಿದ್ದು ಜಾಗತಿಕ ಜೀವ ವೈವಿಧ್ಯಕ್ಕೆ ಹೆಚ್ಚು ಲಾಭವಾಗಲಿದೆ ಎಂದೇ ಕಂಡುಬಂದಿವೆ.

ಗೋಲ್ಡನ್ ರೈಸ್‌ಗೆ ಗ್ರೀನ್‌ಪೀಸ್ ಸಂಸ್ಥೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಅನ್ನವು ವಿಟಮಿನ್ ಎ ಕೊರತೆ ಇರುವವರಿಗೆ ರೋಗದ ಮತ್ತು ಮರಣದ ಸಾಧ್ಯತೆಯನ್ನು ಕಡಿಮೆಗೊಳಿಸುವ ಅಥವಾ ನಿವಾರಿಸುವ ಸಾಮರ್ಥ್ಯ ಹೊಂದಿದೆ. ಗೋಲ್ಡನ್ ರೈಸ್ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಬಡಜನರ ಮೇಲೆ ಬಹಳ ಪರಿಣಾಮ ಬೀರಲಿದೆ.

250,000 - 500,000 ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 250 ಮಿಲಿಯ ಮಂದಿ ವಿಟಮಿನ್ ಎ ಕೊರತೆಯಿಂದ ಜಾಗತಿಕವಾಗಿ ಬಳಲುತ್ತಿದ್ದಾರೆ. ಅವರಲ್ಲಿ ಶೇ. 40ರಷ್ಟು ಐದರ ಒಳಗಿನ ಮಕ್ಕಳು ಅಭಿವೃದ್ಧಿ ಹೊಂದುತ್ತಿರುವ ದೇಶದವರು. ಯುನಿಸೆಫ್ ಅಂಕಿ ಅಂಶಗಳ ಪ್ರಕಾರ ಒಟ್ಟು ಒಂದರಿಂದ ಎರಡು ಮಿಲಿಯ ಮಕ್ಕಳು ವಾರ್ಷಿಕವಾಗಿ ಸಾಯುವುದನ್ನು ತಪ್ಪಿಸುವ ಸಾಧ್ಯತೆಯಿದೆ. ಏಕೆಂದರೆ ನಿರೋಧಶಕ್ತಿಯ ವ್ಯವಸ್ಥೆ ಸರಿಯಾಗಿಲ್ಲದೆ ಹಸುಗೂಸುಗಳು ಮತ್ತು ಮಕ್ಕಳು ಅಪಾಯದಲ್ಲಿದ್ದಾರೆ. ವಿಟಮಿನ್ ಎ ಕೊರತೆಯೇ ಜಾಗತಿಕವಾಗಿ ಪ್ರತೀ ವರ್ಷ ಮಕ್ಕಳು ಬಾಲ್ಯದಲ್ಲಿಯೇ ಅಂಧರಾಗಲು ಕಾರಣವಾಗುತ್ತಿದೆ. ಅರ್ಧದಷ್ಟು ಮಕ್ಕಳು ಕಣ್ಣು ಕಳೆದುಕೊಂಡು 12 ತಿಂಗಳಲ್ಲೇ ಪ್ರಾಣ ಕಳೆದುಕೊಳ್ಳುತ್ತವೆ.

ಗ್ರೀನ್ ಪೀಸ್ ಗೋಲ್ಡನ್ ರೈಸ್ ವಿರುದ್ಧ ಮತ್ತು ಸಾಮಾನ್ಯವಾಗಿ ಜೈವಿಕ ತಂತ್ರಜ್ಞಾನದಿಂದ ಸುಧಾರಿಸಿದ ಬೆಳೆಗಳು ಮತ್ತು ಆಹಾರಗಳ ವಿರುದ್ಧ ತಮ್ಮ ಪ್ರಚಾರಾಭಿಯಾನವನ್ನು ನಿಲ್ಲಿಸುವಂತೆ ಕರೆ ನೀಡುತ್ತಿದ್ದೇವೆ.

ಜಾಗತಿಕವಾಗಿ ಎಲ್ಲಾ ಸರ್ಕಾರಗಳೂ  ಗೋಲ್ಡನ್ ರೈಸ್ ವಿರುದ್ಧ ಮತ್ತು ಸಾಮಾನ್ಯವಾಗಿ ಜೈವಿಕ ತಂತ್ರಜ್ಞಾನದಿಂದ ಸುಧಾರಿಸಿದ ಬೆಳೆಗಳು ಮತ್ತು ಆಹಾರಗಳ ವಿರುದ್ಧ ಗ್ರೀನ್ ಪೀಸ್ ಪ್ರಚಾರಾಭಿಯಾನವನ್ನು ತಿರಸ್ಕರಿಸಲಿ ಮತ್ತು ಗ್ರೀನ್‌ಪೀಸ್ ಕ್ರಮವನ್ನು ಸಾಧ್ಯವಾದ ರೀತಿಯಲ್ಲಿ ತಮ್ಮ ಅಧಿಕಾರ ಉಪಯೋಗಿಸಿ ತಡೆಯಲು ಮತ್ತು ರೈತರಿಗೆ ಆಧುನಿಕ ಜೀವಶಾಸ್ತ್ರ ಮತ್ತು ಮುಖ್ಯವಾಗಿ ಸುಧಾರಿತ ಜೈವಿಕ ತಂತ್ರಜ್ಞಾನದ ಸೌಲಭ್ಯ ತಲುಪುವಂತೆ ಮಾಡಲು ಕೇಳಿಕೊಳ್ಳುತ್ತೇವೆ. ದಾಖಲೆಗಳಿಗೆ ವಿರುದ್ಧವಾದ ಭಾವನಾತ್ಮಕ ಮತ್ತು ಮೌಢ್ಯಪೂರಿತ ವಿರೋಧವು ನಿಲ್ಲಬೇಕು.

ಇದನ್ನು ನಾವು ಮಾನವತೆಯ ವಿರುದ್ಧದ ಅಪರಾಧ ಎಂದು ತಿಳಿದುಕೊಳ್ಳುವ ಮೊದಲು ಜಗತ್ತಿನಲ್ಲಿ ಎಷ್ಟು ಬಡಜನತೆ ಪ್ರಾಣ ಕಳೆದುಕೊಳ್ಳಬೇಕು.

ಪ್ರಾಮಾಣಿಕವಾಗಿ,

ನೊಬೆಲ್ ಪ್ರಶಸ್ತಿ ವಿಜೇತರ ಸಹಿ

ಈ ಪತ್ರಕ್ಕೆ ಗ್ರೀನ್‌ಪೀಸ್ ತನ್ನ ಪ್ರತಿಕ್ರಿಯೆಯನ್ನೂ ನೀಡಿದೆ.

“ಕುಲಾಂತರಿ ರೂಪದಲ್ಲಿ ಸಿದ್ಧವಾದ ಗೋಲ್ಡನ್ ರೈಸ್‌ನ್ನು ಯಾರೋ ತಡೆಯುತ್ತಿದ್ದಾೆ ಎನ್ನುವ ಆರೋಪಗಳು ಸುಳ್ಳು. ಗೋಲ್ಡನ್ ರೈಸ್ ಒಂದು ಪರಿಹಾರವಾಗಿ ಸೋತಿದೆ. ಸಂಶೋಧನೆಯಾಗಿ 20 ವರ್ಷಗಳೇ ಆಗಿದ್ದರೂ ಅದು ಈಗ ಮಾರುಕಟ್ಟೆಗೆ ಲಭ್ಯವಿಲ್ಲ. ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯೇ ಹೇಳಿರುವ ಪ್ರಕಾರ ಅದು ವಿಟಮಿನ್ ಎ ಕೊರತೆ ನೀಗಿಸುತ್ತದೆ ಎನ್ನುವುದು ಸಾಬೀತಾಗಿಲ್ಲ. ಹೀಗಾಗಿ ನಾವು ಇಲ್ಲದ ವಿಷಯವೊಂರ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿದೆ. ವಾಣಿಜ್ಯ ಸಂಸ್ಥೆಗಳು ಗೋಲ್ಡನ್ ರೈಸ್ ಬಗ್ಗೆ ಅತಿಯಾಗಿ ಪ್ರಶಂಸಿಸುವ ಮೂಲಕ ಇತರ ಹೆಚ್ಚು ಲಾಭಕರವಾದ ಕುಲಾಂತರಿ ಬೆಳೆಗಳಿಗೆ ದಾರಿ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ. ಈ ದುಬಾರಿ ಪ್ರಯೋಗವು ಕಳೆದ 20 ವರ್ಷಗಳಲ್ಲಿ ಫಲಿತಾಂಶ ತಂದುಕೊಡುವಲ್ಲಿ ವಿಫಲವಾಗಿದೆ. ಈ ದುಬಾರಿ ಸಾರ್ವಜನಿಕ ಸಂಪರ್ಕ ಕ್ರಮದಲ್ಲಿ ಹಣ ಹೂಡುವ ಬದಲಾಗಿ ನಾವು ಹೆಚ್ಚು ವೈವಿಧ್ಯಮಯ ಶಿಸ್ತಿನ ಆಹಾರ, ಆಹಾರ ಮತ್ತು ಜೈವಿಕ ಕೃಷಿಗೆ ಅವಕಾಶ ನೀಡುವ ಮೂಲಕ ಪೌಷ್ಠಿಕತೆಯ ಸಮಸ್ಯೆಯನ್ನು ಎದುರಿಸಬೇಕು” ಎಂದು ಗ್ರೀನ್‌ಪೀಸ್ ಹೇಳಿದೆ.

ಕೃಪೆ: www.techinsider.io

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News