×
Ad

ಲಿಯೋನಾರ್ಡೊ, ಸಂಘದ ಅಣತಿಯಂತೆ ನಮಗೆ ಸಸ್ಯಾಹಾರಿ ಆಗುವ ಬಿಟ್ಟಿ ಸಲಹೆ ಕೊಡಬೇಡ, ಏಕೆಂದರೆ?

Update: 2016-07-04 13:44 IST

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ತಿಂಗಳಲ್ಲಿ ಲಂಡನ್ನಿನಲ್ಲಿ ಸಂಘಪರಿವಾರದ ಪತಾಕೆ ಹಾರಿಸಲು ತೆರಳುತ್ತಿದ್ದಾರೆ. ಬ್ರಿಟನಿನ ಹಿಂದೂ ಸ್ವಯಂಸೇವಕ ಸಂಘದ 50ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ಅಂಗವಾಗಿ ಮೋಹನ್ ಭಾಗವತ್ ಭಾಷಣ ಮಾಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಟ ಲಿಯೋನಾರ್ಡೊ ಡಿಕಾಪ್ರಿಯೊ, ಭಾಷಣಕಾರ ಡೇವಿಡ್ ಅಟೆನ್‌ಬೊರೊ ಮತ್ತು ಉದ್ಯಮಿ ರಿಚರ್ಡ್ ಬ್ರಾನ್ಸನ್ ಕೂಡ ಭಾಗವಹಿಸಲಿದ್ದಾರೆ.

ಇವರೆಲ್ಲರೂ ಸಸ್ಯಾಹಾರದ ಬಗ್ಗೆ ಭಾಷಣ ಮಾಡಲಿದ್ದಾರೆ. ಅಲ್ಲದೆ ಭಾರತದಲ್ಲಿ ಆರೆಸ್ಸೆಸ್ ಮಾಡಿರುವ ಉತ್ತಮ ಕೆಲಸಗಳನ್ನು ಬೆಂಬಲಿಸಲಿದ್ದಾರೆ. ಆದರೆ ಈ ಮೂವರು ಹಿಂದುತ್ವದ ಹೆಸರಿನಲ್ಲಿ ಬಹುಪಂಥೀಯರ ಮೇಲೆ ಹೇರಲಾಗುತ್ತಿರುವ ವಿಷಯವೊಂದರ ಬಗ್ಗೆ ತಾವು ಮಾತನಾಡುತ್ತಿದ್ದೇವೆ ಎನ್ನುವುದು ಇವರಿಗೆ ಗೊತ್ತೆ? ಅವರಿಗೆ ಮಾಹಿತಿ ನೀಡುವ ಉದ್ದೇಶದಲ್ಲಿ,

ಪ್ರಿಯ ಲಿಯನಾರ್ಡೋ, ಡೇವಿಡ್ ಮತ್ತು ರಿಚರ್ಡ್ ಅವರೇ, ನೀವು ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಸಸ್ಯಾಹಾರದ ಬಗ್ಗೆ ಮಾತನಾಡುವ ಮುನ್ನ ಈ ಬಗ್ಗೆ ಗಮನಹರಿಸಿ:

1. ಮಾಂಸಾಹಾರ ಎನ್ನುವುದು ಭಾರತೀಯರು ಮಾತ್ರ ಬಳಸುವ ಪದ. ಯಾವುದೇ ರಾಷ್ಟ್ರವೂ ಈ ಪದ ಬಳಸುವುದಿಲ್ಲ.

2. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಶೇ. 70ರಷ್ಟು ಭಾರತೀಯರು ಮಾಂಸಾಹಾರಿಗಳು. ಹಿಂದೂಗಳು ಸಸ್ಯಾಹಾರಿಗಳೆಂದು ವಿಶ್ವದ ಜನತೆ ತಿಳಿದುಕೊಂಡಿರುವುದು ತಪ್ಪು. ಈ ತಪ್ಪು ಕಲ್ಪನೆಗೆ ಕಾರಣ ಕೆಲವು ಉನ್ನತ ವರ್ಗದವರು ಮಾತ್ರ ನಮ್ಮ ಗುರುತಿನ ಸಂಕೇತವಾಗಿರುವುದು.

3. ಈ ಸಸ್ಯಾಹಾರಿ ಪದ್ಧತಿ ಭಾರತೀಯರಿಗೆ ನೆರವಾಗಿಲ್ಲ. ನಮ್ಮ ಜೀವಿತಾವಧಿ ಕಡಿಮೆ. ಇತರ ಯಾವುದೇ ನಗರವಾಸಿಗಳಿಗಿಂತ ಭಾರತೀಯರಲ್ಲಿ ಅತಿಯಾದ ಮಧುಮೇಹಿಗಳು ಮತ್ತು ಹೃದಯ ರೋಗಿಗಳು ಇದ್ದಾರೆ.

4. ಸಸ್ಯಾಹಾರಿಯಾಗಿ ಮುಂದುವರಿಯಲು ಕೆಲವು ಸಾಂಸ್ಕೃತಿಕ ಕಾರಣಗಳಿವೆ ಎಂದು ತಿಳಿಯುತ್ತೇವೆ. ಅಂತಹುದೇನೂ ಇಲ್ಲ. ಅದೇನೂ ದೊಡ್ಡ ಸಾಧನೆಯಲ್ಲ. ಯೋಗದಲ್ಲಿಯೂ ವಿದೇಶಿಯರು ಭಾರತೀಯರಿಗಿಂತ ಮೇಲು.

5. ಈ ಕಾರ್ಯಕ್ರಮದಲ್ಲಿ ನೀವು ಬಹುತೇಕ ಪಟೇಲರನ್ನೇ ಕಾಣುವಿರಿ. ಮಾಂಸಾಹಾರ ಸೇವಿಸದ ಭಾರತದ ಏಕೈಕ ರೈತವರ್ಗದ ಅತೀ ಸಣ್ಣ ಸಮುದಾಯವಿದು. ಜಾತ್, ಯಾದವ್, ಗೌಡ ಮತ್ತು ರೆಡ್ಡಿ ಮೊದಲಾದ ಎಲ್ಲಾ ರೈತವರ್ಗ, ಪಟೇಲರಿಗೆ ಹೊರತುಪಡಿಸಿ, ಮಾಂಸಾಹಾರ ಸೇವಿಸುತ್ತಾರೆ. ಉಳಿದ ಸಹೋದರರು ಸೇವಿಸುವ ಮಾಂಸಾಹಾರವನ್ನು ಅವರೇಕೆ ತೊರೆದಿದ್ದಾರೆ. ಅದಕ್ಕೆ ಕಾರಣ ಹಿಂದುತ್ವ.

6. ಹಿಂದುತ್ವಕ್ಕೆ ಕೆಳವರ್ಗದ ಸಂಸ್ಕೃತಿಯ ಭಯವಿರುವ ಕಾರಣ ಅದು ಮಾಂಸ ನಿಷೇಧಕ್ಕೆ ಒತ್ತಡ ಹೇರುತ್ತದೆ. ರೆಸ್ಟೊರೆಂಟುಗಳು ಶುದ್ಧ ಸಸ್ಯಾಹಾರಿ ಎಂದು ಇಲ್ಲಿ ಜಾಹೀರಾತು ಕೊಡುತ್ತವೆ. ಅವುಗಳ ನೈತಿಕ ಮೌಲ್ಯ ತೋರಿಸಲು ಅಲ್ಲ, ಪಾವಿತ್ರ್ಯ ತೋರಿಸಲು. ಆಧುನಿಕ ಭಾರತೀಯ ಸಸ್ಯಾಹಾರ ಚಳವಳಿ ಈ ಮೌಢ್ಯದ ಹಿನ್ನೆಲೆ ಹೊಂದಿದೆ.

 7. 101 ವರ್ಷಗಳ ಹಿಂದೆ ಗಾಂಧಿ ಲಂಡನ್ನಿನಿಂದ ಹಿಂದಿರುಗಿದಾಗ ಈ ವಿಷಯದ ಬಗ್ಗೆ ಕೆಲವು ಕಲ್ಪನೆ ಹೊಂದಿದ್ದರು. ಹಾಲು ಇರುವ ವ್ಯಕ್ತಿ ಮೊಟ್ಟೆ ತಿನ್ನಲು ಅಡ್ಡಿಯಿಲ್ಲ ಎಂದು ಅವರು ಬೋಧಿಸಿದರು. ಅಂದರೆ ಗಾಂಧಿ ಹಾಲು ಸೇವಿಸುವುದನ್ನೂ ವಿರೋಧಿಸಿದ್ದರು ಎಂದು ಅರ್ಥ ಮಾಡಿಕೊಳ್ಳುವ ತನಕ ಅದು ಸಕಾರಣ ಎನಿಸಿತ್ತು. ದನಕ್ಕೆ ಅಹಿತ ತರಬಾರದು ಎಂದು ಅವರು ನಿರ್ಧರಿಸಿದ್ದರು. 1917ರಲ್ಲಿ ಅನಾರೋಗ್ಯ ಬಂದಾಗ ಅವರು ಆಡಿನ ಹಾಲು ಸೇವಿಸಿ ತಮ್ಮದು ಬೂಟಾಟಿಕೆಯಲ್ಲ ಎಂದು ತೋರಿಸಿದ್ದರು.

8. ಸಸ್ಯಾಹಾರ ಎನ್ನುವುದು ಸಂಸ್ಕೃತದಿಂದ ಬಂದದ್ದು. ಭಾರತೀಯ ಸಸ್ಯಾಹಾರಿಗಳು ಇದನ್ನು ವಿರೋಧಿಸಬೇಕು. ಉನ್ನತ ವರ್ಗದವರು ನಮಗೆ ಮಾಂಸಾಹಾರ ತ್ಯಜಿಸುವುದರಿಂದ ಸಿಗುವ ಆರೋಗ್ಯ ಮತ್ತು ಪರಿಸರ ಲಾಭದ ಬಗ್ಗೆ ವಿವರಿಸುವಾಗ ಚಿಂತನಾಶೀಲರಾಗಬೇಕು. ಭೋಜನಕ್ಕೆ ಕರೆದು ಸಸ್ಯಾಹಾರ ಮಾತ್ರ ಕೊಡುವ ಮನೆಗಳು ಬ್ರಾಹ್ಮಣ ಮತ್ತು ಬನಿಯಾಗಳದ್ದು. ಅದು ಸೇವಿಸುವ ಬಗ್ಗೆಯಲ್ಲ, ಕೊಡುವ ಬಗ್ಗೆಯಲ್ಲ. ಅದು ಧಾರ್ಮಿಕ ಪಾವಿತ್ರ್ಯ.

9. ನಮ್ಮ ತಿನಿಸಿನ ಅಂಗಡಿಗಳೂ ಮುಕ್ತವಾಗಿ ನಾಚಿಕೆಯಿಲ್ಲದೆ ಜಾತೀವಾದ ಬಿಂಬಿಸುತ್ತವೆ. (ಅಯ್ಯಂಗಾರ್ ಬೇಕರಿ, ಬ್ರಾಹ್ಮಿನ್ಸ್ ಕಾಫಿ ಬಾರ್). ದಕ್ಷಿಣ ಭಾರತದಲ್ಲಿ ಬ್ರಿಟಿಷ್ ಮಾರ್ಷಲ್ ಜನಾಂಗದವರು ಊಟ ಮಾಡುತ್ತಿದ್ದ ಸ್ಥಳಕ್ಕೆ ಉನ್ನತ ವರ್ಗದವರು ಕಾಲಿಡುತ್ತಿರಲಿಲ್ಲ ಮತ್ತು ಅವುಗಳನ್ನು ಮಿಲಿಟರಿ ಹೊಟೇಲುಗಳೆಂದೇ ಕರೆಯಲಾಗುತ್ತದೆ. ಅದು ರೈತರ ಆಹಾರ ಕೊಡುತ್ತದೆ: ಕುರಿ ಮತ್ತು ಆಡಿನ ಸಾಂಬಾರ್. ಶತಮಾನಗಳಿಂದ ಶ್ಲೋಕಗಳನ್ನು ಪಠಿಸುವುದನ್ನೇ ಕೆಲಸವಾಗಿಸದೆ ದೇಹ ದಾರ್ಢ್ಯದ ಕೆಲಸ ಮಾಡಿಕೊಂಡು ಬಂದ ಸಮುದಾಯವಿದು.

10. ಅಂತಿಮವಾಗಿ ಹೇಳುವುದೆಂದರೆ, ಭಾಗವತ್ ಇಂದು ಭಾರತೀಯ ಸಸ್ಯಾಹಾರವನ್ನು ಬ್ರಿಟನಿಗೆ ಕೊಡುತ್ತಿದ್ದಾರೆ. ಆದರೆ ಭಾರತೀಯರು ಹಿಂದೆ ಬ್ರಿಟನಿನಿಂದ ಮಾಂಸಾಹಾರ ಆಮದು ಮಾಡಿಕೊಂಡಿದ್ದರು.ಇತಿಹಾಸದ ಮೂರ್ಖ ಯುದ್ಧಕ್ಕಾಗಿ ಭಾರತೀಯರು ಫ್ರಾನ್ಸ್‌ನಲ್ಲಿದ್ದಾಗ ಬ್ರಿಟಿಷರು 10,000 ಜೀವಂತ ಆಡುಗಳನ್ನು ಪ್ರತೀ ತಿಂಗಳು ಅವರಿಗಾಗಿ ಕಳುಹಿಸಿದ್ದಾರೆ. ಅದರ ಶತಮಾನೋತ್ಸವವೂ ಇದೇ ವಾರಾಂತ್ಯದಲ್ಲಿದೆ. 1916 ಜುಲೈ 14ರಂದು ಸೋಮ್‌ನಲ್ಲಿ ಎರಡು ಭಾರತೀಯ ರೆಜಿಮೆಂಟುಗಳಾದ 34ನೇ ಪೂನಾ ಹಾರ್ಸ್ ಮತ್ತು 20ನೇ ಡೆಕನ್ ಹಾರ್ಸ್ ಜರ್ಮನ್ ಲೈನ್ ವಿರುದ್ಧ ಅಶ್ವದಳದ ದಾಳಿ ಮಾಡಿದ್ದರು. ಅದರಲ್ಲಿ 102 ಮಂದಿ ಮತ್ತು 130 ಕುದುರೆಗಳು ಬಲಿಯಾಗಿದ್ದವು.

ಲಿಯನಾರ್ಡೋ ಮತ್ತು ಡೇವಿಡ್ ಮತ್ತು ರಿಚಾರ್ಡ್ ಅವರೇ: ಭಾರತದಲ್ಲಿ ಸಸ್ಯಾಹಾರಿ ಆಳವಾದ ಭೇದವನ್ನು ಹೊಂದಿದೆ. ಅದು ಮುಸ್ಲಿಮರ ವಿರುದ್ಧ ಧ್ವೇಷ ಕಾರುತ್ತದೆ. ಅದನ್ನು ಮಾರಕವಾಗಿ ವಂಚನೆಗಾಗಿ ಬಳಸಲಾಗುತ್ತದೆ. ಇತ್ತೀಚೆಗೆ ನಿರ್ದಿಷ್ಟ ಪ್ರಾಣಿಗಳ ಪ್ರಭೇಧಗಳ ಕೊಲೆಯನ್ನು ನಿಷೇಧಿಸುವ ಮೂಲಕ ಸಸ್ಯಾಹಾರವನ್ನು ಹೇರಲು ಪ್ರಯತ್ನಿಸುವುದು ಹೊಸ ಹಾದಿಯಾಗಿದೆ.

ಮಾನವರ ವಿರುದ್ಧ ಜಾತೀವಾದ ಮತ್ತು ಪ್ರತ್ಯೇಕತಾವಾದ ಮತ್ತು ಧರ್ಮಾಂಧತೆ ತೋರುವ ಒಂದು ಜಾಗಕ್ಕೆ ನೀವು ಪ್ರವೇಶಿಸುತ್ತಿದ್ದೀರಿ. ಅದನ್ನೇ ಈಗ ಪ್ರಾಣಿಗಳ ಕುರಿತಂತೆ ನೈತಿಕ ನಡೆ ಮತ್ತು ಮೌಲ್ಯಗಳ ಹೆಸರಲ್ಲಿ ಮುಂದಿಡಲಾಗುತ್ತಿದೆ. ಹಿಂದೂಗಳ ಸಭೆಯಲ್ಲಿ ಏನಾದರೂ ಹೇಳಿಕೆ ನೀಡಬೇಕೆಂದಿದ್ದಲ್ಲಿ ನೀವು ಮೊದಲು ಈ ಧರ್ಮಾಂಧತೆಯ ಬಗ್ಗೆ ಮಾತನಾಡಬೇಕು.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News