×
Ad

ಸೌದಿ : ಖತಿಫ್ ನಗರದಲ್ಲಿ ಸ್ಪೋಟ - ಚದುರಿಬಿದ್ದ ದೇಹದ ಭಾಗಗಳು

Update: 2016-07-04 22:56 IST

ಜಿದ್ದಾ, ಜು. 4: ಸೌದಿ ಅರೇಬಿಯಾದ ಪೂರ್ವ ಭಾಗದ ಖತಿಫ್ ನಗರದ ಮಸೀದಿಯೊಂದರ ಸಮೀಪ ಸೋಮವಾರ ಸಂಜೆ ಕನಿಷ್ಠ ಒಂದು ಭಾರೀ ಸ್ಪೋಟ ಸಂಭವಿಸಿದ ಸದ್ದು ಕೇಳಿದೆ.

ಸಂಜೆ ಸುಮಾರು ಏಳು ಗಂಟೆಗೆ ನಡೆದ ಈ ಸ್ಫೋಟದಲ್ಲಿ ಒಂದು ಕಾರು ಛಿದ್ರಗೊಂಡಿದೆ.

ಈ ದುರಂತದಲ್ಲಿ ಎಷ್ಟು ಪ್ರಾಣ ಹಾನಿ ಸಂಭವಿಸಿದೆ ಎಂದು ಖಚಿತವಾಗಿಲ್ಲ. ಆದರೆ ಸ್ಥಳದಲ್ಲಿ ಮಾನವ ದೇಹದ ಭಾಗಗಳು ಚದುರಿಬಿದ್ದಿದ್ದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ.

ಸೋಮವಾರ ಬೆಳಗ್ಗೆಯಷ್ಟೇ ಜಿದ್ದಾದಲ್ಲಿ ಅಮೇರಿಕಾ ಕಾನ್ಸುಲೇಟ್ ಎದುರು ಆತ್ಮಹತ್ಯಾ ದಾಳಿಯಲ್ಲಿ ಇಬ್ಬರು ಸುರಕ್ಷತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News