ಒಲಿಂಪಿಕ್ಸ್: ಬ್ರೆಝಿಲ್ ಫುಟ್ಬಾಲ್ ತಂಡದಲ್ಲಿ ನೇಮರ್
Update: 2016-07-15 23:57 IST
ಪ್ಯಾರಿಸ್, ಜು.15: ಬಾರ್ಸಿಲೋನದ ಸ್ಟಾರ್ ಆಟಗಾರ ನೇಮರ್ ನಿರೀಕ್ಷೆಯಂತೆಯೇ ಒಲಿಂಪಿಕ್ಸ್ ಫುಟ್ಬಾಲ್ ಟೂರ್ನಿಗೆ ಆಯ್ಕೆ ಮಾಡಲಾದ ಬ್ರೆಝಿಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನೇಮರ್ ಬಾರ್ಸಿಲೋನ ಕ್ಲಬ್‌ನ ಸಹ ಆಟಗಾರ ರಫಿನ್ಹಾ, ಮಿಡ್‌ಫೀಲ್ಡರ್ ಫಿಲಿಪ್ ಆ್ಯಂಡರ್ಸನ್ ಹಾಗೂ ಉದಯೋನ್ಮುಖ ಸ್ಟಾರ್ ಆಟಗಾರ ಗ್ಯಾಬ್ರಿಯೆಲ್ ಬಾರ್ಬೊಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಒಲಿಂಪಿಕ್ಸ್ ಗೇಮ್ಸ್‌ಗೆ 18 ಸದಸ್ಯರನ್ನು ಒಳಗೊಂಡ ಪೋರ್ಚುಗಲ್ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ, ಇತ್ತೀಚೆಗೆ ಯುರೋ ಕಪ್ ಜಯಿಸಿದ್ದ ಯಾವುದೇ ಆಟಗಾರರನ್ನು ಆಯ್ಕೆಗೆ ಪರಿಗಣಿಸಿಲ್ಲ. ಆ್ಯಂಡ್ರೆ ಮಾರ್ಟಿನ್ಸ್ ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಏಕೈಕ ಅನುಭವಿ ಆಟಗಾರನಾಗಿದ್ದಾರೆ.