×
Ad

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮೈಕಲ್ ಕಾರ್ಬೆರ್ರಿಗೆ ಕ್ಯಾನ್ಸರ್

Update: 2016-07-15 23:58 IST

ಲಂಡನ್, ಜು.15: ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಮೈಕಲ್ ಕಾರ್ಬೆರ್ರಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೌಂಟಿ ತಂಡ ಹ್ಯಾಂಪ್‌ಶೈರ್ ಗುರುವಾರ ಹೇಳಿದೆ.

35ರ ಹರೆಯದ ಕಾರ್ಬೆರ್ರಿ ಇಂಗ್ಲೆಂಡ್‌ನ ಪರ ಕೇವಲ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2014ರಲ್ಲಿ ಕೊನೆಯ ಪಂದ್ಯ ಆಡಿದ್ದರು. ಈ ವಾರ ಅನಾರೋಗ್ಯದ ಕಾರಣ ವಾರ್ವಿಕ್‌ಶೈರ್ ವಿರುದ್ಧ ಕೌಂಟಿ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದ ಕಾರ್ಬೆರ್ರಿ ಮಂಗಳವಾರ ತಜ್ಞವೈದ್ಯರನ್ನು ಭೇಟಿಯಾದಾಗ ಕ್ಯಾನ್ಸರ್ ಕಾಯಿಲೆಯಿರುವುದು ಪತ್ತೆಯಾಗಿದೆ.

ಹ್ಯಾಂಪ್‌ಶೈರ್ ತಂಡದಲ್ಲಿ ನಾಯಕರಾಗಿದ್ದಾಗ ಕಾರ್ಬೆರ್ರಿ ಅವರೊಂದಿಗೆ ಆಡಿರುವ ಆಸ್ಟ್ರೇಲಿಯದ ಸ್ಪಿನ್ ದಿಗ್ಗಜ ಶೇನ್ ವಾರ್ನ್, ನನ್ನ ಉತ್ತಮ ಸ್ನೇಹಿತ ಕುರಿತು ಒಂದು ಆಘಾತಕರ ಸುದ್ದಿ ಕೇಳಿ ಬೇಸರವಾಯಿತು. ನಾನು ಹಾಗೂ ಇಡೀ ಕ್ರಿಕೆಟ್ ಪರಿವಾರ ನಿಮ್ಮಿಂದಿಗಿದೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ 60 ರನ್ ಗಳಿಸಿದ್ದ ಕಾರ್ಬೆರ್ರಿ ಏಕದಿನದಲ್ಲಿ ಗರಿಷ್ಠ 63 ರನ್ ಗಳಿಸಿದ್ದರು. ಕಳೆದ ಶುಕ್ರವಾರ ಹ್ಯಾಂಪ್‌ಶೈರ್ ಪರ ಕೊನೆಯ ಟ್ವೆಂಟಿ-20 ಪಂದ್ಯ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News