ವಿಶ್ವದ ಅತ್ಯಂತ ಹಿಂಸಾತ್ಮಕ ಸೇನಾ ಕ್ರಾಂತಿಗಳು
ಕನಿಷ್ಠ 190 ಮಂದಿ ಪ್ರಾಣಕಳೆದುಕೊಂಡು ಸುಮಾರು 1000ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿರುವ ಇಸ್ತಾಂಬುಲ್‌ನ ಅಂಕಾರಾದ ಟರ್ಕಿ ಸೇನಾ ಕ್ರಾಂತಿಯನ್ನು ತಡೆಯಲಾಗಿದೆ. ಟರ್ಕಿಯಲ್ಲಿ ಈ ಹಿಂದೆಯೂ ಹಿಂಸಾತ್ಮಕ ಸೇನಾ ಕ್ರಾಂತಿಗಳು ನಡೆದ ಇತಿಹಾಸವಿದೆ. 2016ರ ಜುಲೈ 15-16ರಂದು ನಡೆದ ಸೇನಾಕ್ರಾಂತಿ ಕಳೆದ 56 ವರ್ಷಗಳ ಇತಿಹಾಸದ ಐದನೆಯದಾಗಿದೆ. ಕಳೆದ 60 ವರ್ಷಗಳಲ್ಲಿ ಜಗತ್ತು ಹಲವು ಸೇನಾ ಕ್ರಾಂತಿಗಳನ್ನು ನೋಡಿದೆ. ಇಲ್ಲಿ ಅಂತಹ ಐದು ಉದಾಹರಣೆಗಳಿವೆ.
ಅರ್ಜೆಂಟಿನಾ, 1955
ಅರ್ಜೆಂಟಿನಾ ಸೇನೆ ವಿಪಕ್ಷಗಳ ಜೊತೆಗೆ ಪಿತೂರಿ ನಡೆಸಿ 1955ರಲ್ಲಿ ಅಧ್ಯಕ್ಷ ಜುವಾನ್ ಪೆರಾನ್ ಸರ್ಕಾರದ ವಿರುದ್ಧ ಬಂಡಾಯವೆದ್ದಿತ್ತು. ಸೇನೆ ಮತ್ತು ನಾಗರಿಕ ಬಂಡಾಯದ ಸಂದರ್ಭ ನೌಕಾ ಮತ್ತು ವಾಯು ಸೇನಾಪಡೆ ಪ್ಲಾಜಾ ಡಿ ಮಾಯೋ ಮೇಲೆ ಬಾಂಬ್ ಹಾಕಿ ಸಾವಿರಾರು ನಾಗರಿಕರನ್ನು ಕೊಲೆ ಮಾಡಿತ್ತು. ಉಗ್ರವಾದಿ ಪೆರೋನಿಸ್ಟ್ ಸಮೂಹ ಹಲವಾರು ಚರ್ಚ್‌ಗಳ ಮೇಲೆ ದಾಳಿ ಮಾಡಿ ಸುಟ್ಟು ಹಾಕಿತ್ತು.
ಚಿಲಿ, 1973
ಚಿಲಿಯಲ್ಲಿ ರಾಜಕೀಯ ಬಿಕ್ಕಟ್ಟು ಮತ್ತು ಸಾಮಾಜಿಕ ಅಶಾಂತಿಯ ಹಿನ್ನೆಲೆಯಲ್ಲಿ ಸೇನಾಪಡೆಗಳು ಅಧ್ಯಕ್ಷ ಸಲ್ವಡಾರ್ ಅಲೆಂಡೆ ಸರ್ಕಾರವನ್ನು ಕಿತ್ತು ಹಾಕಿತು. ಕ್ರಾಂತಿಗೆ ಅಲೆಂಡೆ ಜೀವ ಕಳೆದುಕೊಂಡರು. ಸೇನೆ ಅಧಿಕಾರ ವಹಿಸಿಕೊಂಡು ಕಮ್ಯುನಿಸ್ಟ್ ವಿರೋಧಿ ಸೇನಾ ಸರ್ವಾಧಿಕಾರಿ ಸರ್ಕಾರವನ್ನು 17 ವರ್ಷಗಳ ಕಾಲ ನಡೆಸಿತು. ಆಗ ಹಲವಾರು ಎಡಪಂಥೀಯರು ಕಣ್ಮರೆಯಾಗಿದ್ದರು.
ಬೊಲಿವಿಯ, 1979
ಬೊಲಿವಿಯದಲ್ಲಿ ಆಲ್ ಸೈಂಟ್ಸ್ ಡೇ ಸಂಭ್ರಮಾಚರಣ ಸಂದರ್ಭ ಸೇನಾಪಡೆ ಸರ್ಕಾರವನ್ನು ಕಿತ್ತೊಗೆಯಲು ಹಿಂಸಾಚಾರ ನಡೆಸಿದಾಗ ನೂರಾರು ಮಂದಿ ಪ್ರಾಣ ಕಳೆದುಕೊಂಡು 300ಕ್ಕೂ ಅಧಿಕ ಮಂದಿ ಗಾಯಗೊಂಡರು. ಇದನ್ನು ಆಲ್ ಸೈಂಟ್ಸ್ ಡೇ ಹತ್ಯಾಕಾಂಡ ಎಂದೇ ಕರೆಯಲಾಗುತ್ತಿದೆ.
ಟರ್ಕಿ, 1980
ಟರ್ಕಿ 1980ರಲ್ಲಿ ಹಿಂಸಾತ್ಮಕ ಕ್ರಾಂತಿಯನ್ನು ನೋಡಿದೆ. ಎಡ ಮತ್ತು ಬಲಪಂಥೀಯ ಸಮೂಹಗಳು ರಸ್ತೆಗಳಲ್ಲಿ ಹಿಂಸಾತ್ಮಕ ಸಂಘರ್ಷಕ್ಕೆ ಇಳಿದಿದ್ದವು. ಸೇನೆ ಮಧ್ಯಪ್ರವೇಶಿಸಿ ಸರ್ಕಾರವನ್ನು ಕಿತ್ತೊಗೆಯಿತು. ಮುಂದಿನ ಮೂರು ವರ್ಷಗಳ ಕಾಲ ಟರ್ಕಿ ಸೇನಾಡಳಿತದಲ್ಲಿತ್ತು. ಪ್ರಜಾಪ್ರಭುತ್ವ ಮರಳಿ ಬರುವ ಮೊದಲು ರಾಷ್ಟ್ರೀಯ ಭದ್ರತಾ ಆಯೋಗದ ಮೂಲಕ ಸೇನೆ ಆಡಳಿತ ನಡೆಸಿತು. ಸಾವಿರಾರು ಮಂದಿಯನ್ನು ಹತ್ಯೆಗೈಯಲಾಯಿತು ಮತ್ತು 5 ಲಕ್ಷಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಯಿತು. ಹಲವರು ಜೈಲಿನಲ್ಲೇ ಸಾವನ್ನಪ್ಪಿದರು.
ಮಲಿ, 2012
ಅಧ್ಯಕ್ಷ ಅಮಡೌ ಟೊಮನಿಯ ಕಾರ್ಯವೈಖರಿ ಇಷ್ಟವಾಗದೆ ಸೈನಿಕರು ಬಂಡಾಯವೆದ್ದರು. ಅಧ್ಯಕ್ಷೀಯ ಅರಮನೆ, ಸೇನಾ ಬಾರಾಕ್ ಮತ್ತು ಸರ್ಕಾರಿ ಟೀವಿ ಸಂಸ್ಥೆ ಮೇಲೆ ದಾಳಿ ನಡೆಸಿದರು. 2012ರ ಈ ಬಂಡಾಯದಲ್ಲಿ 15,000 ಸೈನಿಕರು ಪ್ರಾಣತೆತ್ತರು. 1 ಲಕ್ಷಕ್ಕೂ ಅಧಿಕ ನಾಗರಿಕರು ಸ್ಥಳಾಂತರಗೊಂಡರು.
ಕೃಪೆ:www.catchnews.com