ಎಂಎಚ್17 ವಿಮಾನ ಪತನಕ್ಕೆ 2 ವರ್ಷ
Update: 2016-07-17 23:48 IST
ಪೆಟ್ರೊಪವ್ಲಿವ್ಕ, ಜು. 17: ಎರಡು ವರ್ಷಗಳ ಹಿಂದೆ ಎಂಎಚ್17 ವಿಮಾನ ಪತನಗೊಂಡ ಪೂರ್ವ ಯುಕ್ರೇನ್‌ನ ಸ್ಥಳದಲ್ಲಿ ಇಂದು ಸೇರಿದ ಜನರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಆ್ಯಮ್‌ಸ್ಟರ್‌ಡಾಂನಿಂದ ಕೌಲಾಲಂಪುರಕ್ಕೆ ತೆರಳುತ್ತಿದ್ದ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್17 ವಿಮಾನದಲ್ಲಿ 298 ಮಂದಿ ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಮೃತರಾಗಿದ್ದಾರೆ.
ಯುಕ್ರೇನ್ ಬಂಡುಕೋರರ ರಾಕೆಟ್ ದಾಳಿಯಲ್ಲಿ ವಿಮಾನ ಪತನಗೊಂಡಿದೆ ಎಂದು ಆರೋಪಿಸಲಾಗಿದೆ.