ಗುಜರಾತ್‌ನಲ್ಲಿ 4.7 ತೀವ್ರತೆಯ ಭೂಕಂಪ
Update: 2016-07-17 23:54 IST
ಅಹ್ಮದಾಬಾದ್, ಜು.17: ದಕ್ಷಿಣ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ರವಿವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ಹೊಂದಿದ್ದ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಿಗ್ಗೆ 9:24ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇದರ ಕೇಂದ್ರ ಸೂರತ್‌ನಿಂದ ವಾಯವ್ಯಕ್ಕೆ 24 ಕಿಲೋಮೀಟರ್ ದೂರದಲ್ಲಿರುವ ಕಮ್ರೇಜ್ ತಾಲೂಕು ಭಡಾ ಗ್ರಾಮದಲ್ಲಿ ಇತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದಾದ ಬಳಿಕ 11:23ಕ್ಕೆ 2.8 ತೀವ್ರತೆ ಭೂಕಂಪ ಅನುಭವಕ್ಕೆ ಬಂದಿದ್ದು, ಇದರ ಕೇಂದ್ರಬಿಂದು ಸೌರಾಷ್ಟ್ರದ ಭಾವನಗರದಲ್ಲಿತ್ತು ಎಂದು ಗಾಂಧಿನಗರ ಇನ್‌ಸ್ಟಿಟ್ಯೂಟ್ ಆಫ್ ಸೆಸ್ಮೊಲಾಜಿಕಲ್ ರೀಸರ್ಚ್‌ನ ಭೂಗರ್ಭಶಾಸ್ತ್ರಜ್ಞ ಎ.ಸತೀಶ್ ಹೇಳಿದ್ದಾರೆ.
ಗುಜರಾತ್‌ನ ಸೂರತ್ ಹಾಗೂ ಭಾವನಗರ ಅಲ್ಲದೇ ಅಮ್ರೇಲಿ, ಪಲಿಟಾನ, ಸಾವರ್ ಕುಂಡ್ಲ, ಅದಜಾನ್‌ಗಳನ್ನೂ ಭೂಮಿ ಕಂಪಿಸಿದ ಅನುಭವವಾಗಿದೆ.