×
Ad

ಥೆರೇಸಾಗೆ ಸಂತ ಪದವಿ

Update: 2016-07-17 23:58 IST

ಕೋಲ್ಕತ್ತಾ, ಜು.17: ಮುಂದಿನ ಸೆಪ್ಟಂಬರ್‌ನಲ್ಲಿ ವ್ಯಾಟಿಕನ್ ಸಿಟಿಯಲ್ಲಿ ನಡೆಯುವ ಅಭೂತಪೂರ್ವ ಸಮಾರಂಭದಲ್ಲಿ ದಿವಂಗತ ಮದರ್ ಥೆರೇಸಾ ಅವರಿಗೆ ಸಂತ ಪದವಿ ಕರುಣಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಸಮಾವೇಶಗೊಳ್ಳಲಿದ್ದಾರೆ. ಇದೇ ವೇಳೆ ಛಾಯಾಗ್ರಾಹಕರ ಗುಂಪೊಂದು, ಮದರ್ ಥೆರೇಸಾ ಅವರ ಕಾರ್ಯಕ್ಷೇತ್ರವಾದ ಕೊಲ್ಕತ್ತಾದ ಬಗ್ಗೆ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದೆ. ಜೊತೆಗೆ ಥೆರೇಸಾ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡುವಂತೆ ಪ್ರವಾಸಿಗರನ್ನು ಆಹ್ವಾನಿಸುವರು.

ಛಾಯಾಚಿತ್ರ, ಸಂಗೀತ ಹಾಗೂ ಚರ್ಚೆಯ ಶಕ್ತಿಯನ್ನು ಬಳಸಿಕೊಂಡು, ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಕೌಂತೇಯ ಸಿನ್ಹಾ ಹಾಗೂ ಅವರ ತಂಡದ ಸದಸ್ಯರು ರೋಮ್ ಮತ್ತು ವ್ಯಾಟಿಕನ್ ಸಿಟಿಯ 11 ಕಡೆಗಳಲ್ಲಿ ಪ್ರದರ್ಶನ ಆಯೋಜಿಸುವರು. ದ ಸೈಂಟ್‌ಹುಡ್ ಪ್ರಾಜೆಕ್ಟ್ ಎಂಬ ನಾಗರಿಕ ಆಂದೋಲನದಡಿ ಈ ಎರಡು ವಾರಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.

ಸಂತ ಪದವಿ ಕರುಣಿಸುವ ಸಮಾರಂಭಕ್ಕೆ ಸಾಕ್ಷಿಯಾಗಲು ಆಗಮಿಸಿದ ಕನಿಷ್ಠ ಶೇ.1ರಷ್ಟು ಮಂದಿ, ಮದರ್ ಥೆರೇಸಾ ಐದು ದಶಕಗಳ ಕಾಲ ಬಡವರು, ರೋಗಿಗಳು ಹಾಗೂ ನಿರ್ಗತಿಕರ ಸೇವೆ ಮಾಡಿದನ್ನು ತಿಳಿದುಕೊಳ್ಳಲು ಕೊಲ್ಕತ್ತಾಗೆ ಬರುವ ನಿರೀಕ್ಷೆ ಇದೆ ಎಂದು ಕೊಲ್ಕತ್ತಾ ಮೂಲದ ಏಸ್ ಲೆನ್ಸ್‌ಮನ್ ಹೇಳುತ್ತಾರೆ.

ವ್ಯಾಟಿಕನ್ ಸಿಟಿ ಹಾಗೂ ರೋಮ್‌ನ ರಸ್ತೆ ಬದಿಯಲ್ಲಿ ಎರಡೂ ಕಡೆಗಳಲ್ಲಿ ಕಾರ್ಯಕರ್ತರು ಹಿಡಿದುಕೊಳ್ಳುವ ಹಗ್ಗಗಳಿಗೆ ತೂಗುಹಾಕಿ 50 ಅಪೂರ್ವ ಛಾಯಾಚಿತ್ರಗಳನ್ನು ವಿಶಿಷ್ಟವಾಗಿ ಅವರು ಪ್ರದರ್ಶಿಸಲಿದ್ದಾರೆ. ನಗರದ ಬಗೆಗಿನ ಏಕತಾನತೆಯನ್ನು ಮುರಿಯುವುದು ಇದರ ಉದ್ದೇಶ. ಆದ್ದರಿಂದ ನಮಗೆ ವಿಕ್ಟೋರಿಯಾ ಸ್ಮಾರಕ, ಹೌರಾ ಬ್ರಿಡ್ಜ್ ಅಥವಾ ನಗರದ ಬ್ರಿಟಿಷ್ ಪ್ರಾಚ್ಯಶಾಸ್ತ್ರದ ಸೌಂದರ್ಯದ ವಿಚಾರವನ್ನು ಪ್ರದರ್ಶಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News