×
Ad

ಶಂಕಿತ ಉಗ್ರರ ದಾಳಿ

Update: 2016-07-18 23:44 IST

ಅಲಮಾಟಿ, ಜು.18: ಕಝಕಿಸ್ತಾನದ ಅತಿ ದೊಡ್ಡ ನಗರವಾದ ಅಲಮಾಟಿಯಲ್ಲಿ ಸೋಮವಾರ ಶಸ್ತ್ರಸಜ್ಜಿ ತ ದುಷ್ಕರ್ಮಿಗಳಿಬ್ಬರು ಪೊಲೀಸ್ ಠಾಣೆ ಹಾಗೂ ಭದ್ರತಾ ಸೇವಾ ಕಚೇರಿಯ ದಾಳಿ ನಡೆಸಿ, ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಓರ್ವ ನಾಗರಿಕನನ್ನು ಹತ್ಯೆಗೈದಿದ್ದಾರೆ. ಘಟನೆಯ ಬಳಿಕ ನಗರದ ಕೆಲವು ಭಾಗಗಳಲ್ಲಿ ಪೊಲೀಸರು ನಿಷೇಧಾಜ್ಞೆ ಹೇರಿದ್ದು, ಓರ್ವ ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆತನ ಇನ್ನೋರ್ವ ಸಹಚರನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಂಧಿತ ವ್ಯಕ್ತಿಯು, ಮೊದಲಿಗೆ ಸ್ಥಳೀಯ ನಿವಾಸಿಯೊಬ್ಬನನ್ನು ಹತ್ಯೆಗೈದು ಆತನ ಕಾರನ್ನು ಅಪಹರಿಸಿದ್ದ. ಆನಂತರ ಪೊಲೀಸರ್ ಠಾಣೆಯೊಂದರ ಮೇಲೆ ದಾಳಿ ನಡೆಸಿ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಕೊಂದನು. ಅಲ್ಲಿದ್ದ ಬಂದೂಕನ್ನು ಕಸಿದುಕೊಂಡು, ಇನ್ನಿಬ್ಬರು ಪೊಲೀಸ್ ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದನು.

ಘಟನೆಯ ಬಳಿಕ ಸಹಚರನೊಂದಿಗೆ ಪರಾರಿಯಾದ ಹಂತಕನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ. ಇನ್ನೋರ್ವ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಬಂಧಿತ ಆರೋಪಿಯು 27 ವರ್ಷದವನಾಗಿದ್ದು, ಹಿಂದೆ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಆತನಿಗೆ ಶಿಕ್ಷೆಯಾಗಿತ್ತು. ಈ ವಾರಾಂತ್ಯದಲ್ಲಿ ನಡೆದ ಮಹಿಳೆಯೊಬ್ಬಳ ಹತ್ಯೆಯ ಹಿಂದೆಯೂ ಈತನ ಕೈವಾಡವಿದೆಯೆಂದು ಶಂಕಿಸಲಾಗಿದೆ.

ಬಂಧಿತನು ಉಗ್ರಗಾಮಿ ಸಂಘಟನೆಯ ಕಾರ್ಯಕರ್ತನಾಗಿರುವ ಶಂಕೆಯಿದ್ದು, ಆತ ವಿದೇಶಿ ಉಗ್ರರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದನೆಂದು ಪೊಲೀಸರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News