×
Ad

ಶೌಚಾಲಯಕ್ಕಾಗಿ ತಾಳಿ ಒತ್ತೆಯಿಟ್ಟ ಮಹಿಳೆ

Update: 2016-07-18 23:51 IST

ಸಸಾರಂ, ಜು.18: ಬಿಹಾರದ ಬಾರಹಖಾನ್ನಾ ಗ್ರಾಮದ ಮಹಿಳೆಯೊಬ್ಬರು ಮನೆಯಲ್ಲಿ ಶೌಚಾಲಯವನ್ನು ಕಟ್ಟಿಸುವುದಕ್ಕಾಗಿ ತನ್ನ ಮಂಗಲಸೂತ್ರವನ್ನೇ ಅಡವಿರಿಸಿದ್ದಾಳೆ. ಇದನ್ನು ತಿಳಿದ ಬಳಿಕ ರೊಹ್ತಾಸ್ ಜಿಲ್ಲಾಡಳಿತ ಆಕೆಯನ್ನು ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮದ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಿದೆ.

 ಫೂಲ್ ಕುಮಾರಿ ಎಂಬ ಈ ಮಹಿಳೆ ಸ್ಥಳೀಯ ಪ್ರಾಥಮಿಕ ಶಾಲೆ ಯೊಂದರಲ್ಲಿ ಅಡುಗೆಯವಳಾಗಿ ಕೆಲಸ ಮಾಡುತ್ತಿದ್ದು, ಅವಳ ಗಂಡ ಕೃಷಿ ಕಾರ್ಮಿಕನಾಗಿದ್ದಾನೆ. ಅವರ ಆದಾಯದಲ್ಲಿ ಶೌಚಾಲಯಕ್ಕೆ ಹಣ ಹೊಂದಿಸಲು ಅಸಾಧ್ಯವಾದುದರಿಂದ ಮಹಿಳೆ ತಾಳಿ ಒತ್ತೆಯಿಟ್ಟು ಹಣ ಪಡೆದಿದ್ದಾಳೆಂದು ಸ್ಥಳೀಯ ಪಂಚಾಯತ್ ತಿಳಿಸಿದೆ.
ಇದಕ್ಕಾಗಿ ಫೂಲ್‌ಕುಮಾರಿ ಕುಟುಂಬದ ಪುರುಷರ ವಿರೋಧವನ್ನು ಎದುರಿಸಬೇಕಾಗಿ ಬಂದಿತ್ತೆಂದು ಅದು ಹೇಳಿದೆ.
ಬುಧವಾರ ಫೂಲ್ ಕುಮಾರಿಯ ಮನೆಯಲ್ಲಿ ಆಕೆಯ ಗಂಡ ಹಾಗೂ ಮಾವನ ಉಪಸ್ಥಿತಿಯಲ್ಲಿ ನಡೆದ ಶೌಚಾಲಯ ನಿರ್ಮಾಣ ಆರಂಭ ಕಾರ್ಯಕ್ರಮದಲ್ಲಿ ತಾನು ಹಾಗೂ ಜಿಲ್ಲಾಡಳಿತದ ಇತರ ಅಧಿಕಾರಿಗಳು ಭಾಗವಹಿಸಿದ್ದೆವು. ಇತರರಿಗೆ ಸ್ಫೂರ್ತಿ ನೀಡುವುದಕ್ಕಾಗಿ ಅವಳನ್ನು ಜಿಲ್ಲೆಯ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮದ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಲಾಗಿದೆ. 10 ದಿನಗಳೊಳಗೆ ಶೌಚಾಲಯ ನಿರ್ಮಾಣ ಪೂರ್ಣಗೊಳ್ಳುವುದನ್ನು ತಾವು ಖಚಿತಪಡಿಸಲಿದ್ದೇವೆಂದು ರೊಹ್ರಾಸ್‌ನ ಜಿಲ್ಲಾ ದಂಡಾಧಿಕಾರಿ ಅನಿಮೇಷ್ ಕುಮಾರ್ ಪರಾಶರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News