ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಗುರುಪ್ರಸಾದ್ ಮೊಹಪಾತ್ರ ಅಧಿಕಾರ ಸ್ವೀಕಾರ
Update: 2016-07-19 21:07 IST
ಹೊಸದಿಲ್ಲಿ, ಜು.19: ಗುಜರಾತ್ ಕೇಡರ್‌ನ 1986ರ ಐಎಎಸ್ ಅಧಿಕಾರಿ ಡಾ.ಗುರುಪ್ರಸಾದ್ ಮೊಹಪಾತ್ರ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಭಾರತ ಸರಕಾರದ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಡಾ.ಗುರುಪ್ರಸಾದ್ ಹೈದರಾಬಾದ್‌ಪುರಸಭೆಯ ಕಮೀಶನರ್, ಸೂರತ್ ಪುರಸಭೆಯ ಕಮೀಶನರ್, ಗುಜರಾತ್‌ನ ಜಿಎಸಿಎಲ್‌ನ ಆಡಳಿತ ನಿರ್ದೇಶಕ, ಜಿಎನ್‌ಎಫ್‌ಸಿಯ ಆಡಳಿತ ನಿರ್ದೇಶಕ ಸೇರಿದಂತೆ ದೇಶದ ಇಂಧನ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.