MGNREGA Vs VB–G RAM G; ಯಾವುದು ಉತ್ತಮ?
Photo Credit : PTI
ಮುಖ್ಯವಾದ ವ್ಯತ್ಯಾಸಗಳಲ್ಲಿ ಒಂದು MGNREGA ಬೇಡಿಕೆ ಚಾಲಿತವಾಗಿದೆ ಮತ್ತು ಕೆಲಸಕ್ಕೆ ಬೇಡಿಕೆ ಇದ್ದರೆ ಕೇಂದ್ರ ಸರ್ಕಾರ ಹೆಚ್ಚು ಹಣ ಕೊಡಬೇಕಾಗಿದೆ. ಆದರೆ ಹೊಸ ಮಸೂದೆಯಲ್ಲಿ ಪ್ರತಿ ವರ್ಷ ರಾಜ್ಯವಾರು ಎಷ್ಟು ಹಣ ಹಂಚಿಕೆಯಾಗಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಹೆಚ್ಚುವರಿ ವೆಚ್ಚವೇನಾದರೂ ಆದಲ್ಲಿ ಅದನ್ನು ರಾಜ್ಯ ಸರ್ಕಾರವೇ ಭರಿಸಬೇಕು.
ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA ) ಬದಲಿಸಲು ಯೋಜಿಸುತ್ತಿದ್ದು, ಅದರ ಬದಲಿಗೆ ವಿಕಸಿತ್ ಭಾರತ್-ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ 2025 ( VB–G RAM G ಮಸೂದೆ) ಜಾರಿಗೆ ತರುವುದಾಗಿ ಹೇಳಿದೆ. ಹಳೆಯ ಕಾನೂನಿನಲ್ಲಿ ಗ್ರಾಮೀಣ ಕುಟುಂಬಗಳಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗದ ಕಾನೂನುಬದ್ಧ ಖಾತರಿಯನ್ನು ಒದಗಿಸುತ್ತದೆ. ಪ್ರಸ್ತುತ ಅದನ್ನು 125 ದಿನಗಳಿಗೆ ಏರಿಸಲಾಗಿದೆ. ಹಾಗಿದ್ದರೆ ವಿಪಕ್ಷಗಳು ಈ ಕಾನೂನಿಗೆ ವಿರೋಧ ವ್ಯಕ್ತಪಡಿಸುವುದೇಕೆ? ಹೊಸ ಮಸೂದೆಯಲ್ಲಿ ಏನಿದೆ?
ಕೇಂದ್ರ ಸರ್ಕಾರದ ಪ್ರಕಾರ, 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಗ್ರಾಮೀಣಾಭಿವೃದ್ಧಿ ಚೌಕಟ್ಟನ್ನು ಸ್ಥಾಪಿಸುವ ಗುರಿಯೊಂದಿಗೆ ಮಸೂದೆಯನ್ನು ಮುಂದಿಡಲಾಗಿದೆ. ಕೇಂದ್ರ ಸರ್ಕಾರದ ಪ್ರಕಾರ ಹಿಂದಿನ ಕಾಯ್ದೆಯಲ್ಲಿದ್ದ ರಚನಾತ್ಮಕ ದೌರ್ಬಲ್ಯಗಳನ್ನು ಸರಿಪಡಿಸಲು ಪ್ರಮುಖ ನವೀಕರಣವನ್ನು ಮಾಡಲಾಗಿದೆ.
ಡಿಜಿಟಲ್ ಹಾಜರಾತಿ, ಡಿಜಿಟಲ್ ಪಾವತಿ ಮತ್ತು ಡೇಟಾ ಚಾಲಿತ ಯೋಜನೆಯು ದಕ್ಷತೆಯನ್ನು ಹೆಚ್ಚಿಸುತ್ತದೆ. ಜಲಸಂಬಂಧಿತ ಕೆಲಸಗಳ ಮೂಲಕ ಜಲಭದ್ರತೆ, ಪ್ರಮುಖ ಗ್ರಾಮೀಣ ಮೂಲ ಸೌಕರ್ಯ, ಜೀವನೋಪಾಯ ಸಂಬಂಧಿತ ಮೂಲಸೌಕರ್ಯ ಮತ್ತು ತೀವ್ರವಾದ ಹವಾಮಾನ ವೈಪರೀತ್ಯವನ್ನು ಎದುರಿಸಲು ವಿಶೇಷ ಕೆಲಸಗಳು ಎಂದು ವಿವರಿಸಿದೆ.
ಎರಡು ಮಸೂದೆಗಳ ನಡುವಿನ ಪ್ರಮುಖ ವ್ಯತ್ಯಾಸವೇನು?
ಮುಖ್ಯವಾದ ವ್ಯತ್ಯಾಸಗಳಲ್ಲಿ ಒಂದು MGNREGA ಬೇಡಿಕೆ ಚಾಲಿತವಾಗಿದೆ ಮತ್ತು ಕೆಲಸಕ್ಕೆ ಬೇಡಿಕೆ ಇದ್ದರೆ ಕೇಂದ್ರ ಸರ್ಕಾರ ಹೆಚ್ಚು ಹಣ ಕೊಡಬೇಕಾಗಿದೆ. ಆದರೆ ಹೊಸ ಮಸೂದೆಯಲ್ಲಿ ಪ್ರತಿ ವರ್ಷ ರಾಜ್ಯವಾರು ಎಷ್ಟು ಹಣ ಹಂಚಿಕೆಯಾಗಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಹೆಚ್ಚುವರಿ ವೆಚ್ಚವೇನಾದರೂ ಆದಲ್ಲಿ ಅದನ್ನು ರಾಜ್ಯ ಸರ್ಕಾರವೇ ಭರಿಸಬೇಕು.
MGNREGA ಯೋಜನೆಯಲ್ಲಿ ಕೇಂದ್ರ ಸರ್ಕಾರವೇ ಶೇ 100ರಷ್ಟು ವೆಚ್ಚ ಭರಿಸುತ್ತಿತ್ತು. ಸಾಮಗ್ರಿ ವೆಚ್ಚವನ್ನು ರಾಜ್ಯವಾರು ಅನುಪಾತ 75:25 ದಲ್ಲಿ ಭರಿಸಲಾಗುತ್ತಿತ್ತು. ಪ್ರಸ್ತಾಪಿತ ಯೋಜನೆಯಲ್ಲಿ ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 60:40 ಅನುಪಾತದಲ್ಲಿ ವೆಚ್ಚಗಳನ್ನು ಹಂಚಿಕೊಳ್ಳುತ್ತವೆ. ಆದಾಗ್ಯೂ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಮಾದರಿಯು 90:10 ಅನುಪಾತದಲ್ಲಿ ಉಳಿಯುತ್ತದೆ.
ಕೃಪೆ: Deccan Herald