×
Ad

ಅಹ್ಮದಾಬಾದ್‌ ನ 10 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ

Update: 2025-12-17 21:37 IST

ಸಾಂದರ್ಭಿಕ ಚಿತ್ರ | Photo Credit : PTI

ಹೊಸದಿಲ್ಲಿ, ಡಿ.17: ಬಾಂಬ್ ಸ್ಫೋಟಿಸುವ ಬೆದರಿಕೆಯೊಡ್ಡಿ ಬುಧವಾರ ಅಹ್ಮದಾಬಾದ್‌ ನ 10 ಶಾಲೆಗಳಲ್ಲಿ ಇಮೇಲ್ ಸಂದೇಶ ಬಂದಿದೆ. ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲವಾದ್ದರಿಂದ ಇದೊಂದು ಹುಸಿಬೆದರಿಕೆಯೆಂದು ದೃಢಪಟ್ಟಿರುವುದಾಗಿ ಗುಜರಾತ್ ಪೊಲೀಸರು ತಿಳಿಸಿದ್ದಾರೆ.

ಇ ಮೇಲ್‌ ನಲ್ಲಿ ಬಾಂಬ್ ಬೆದರಿಕೆಯ ಸಂದೇಶವನ್ನು ಸ್ವೀಕರಿಸುವ ಮುನ್ನ ಬೆಳಗ್ಗಿ ಹೊತ್ತಿನ ತರಗತಿಗಳು ಮುಗಿದಿದ್ದರಿಂದ ಮಧ್ಯಾಹ್ನದ ಆನಂತರ ಶಾಲೆಗಳಿಗೆ ರಜೆಯನ್ನು ಘೋಷಿಸಲಾಯಿತು. ಈ ಶಾಲೆಗಳಿಗೆ ಬಂದಿರುವ ಬೆದರಿಕೆ ಸಂದೇಶವು ಒಂದೇ ರೀತಿಯದ್ದಾಗಿದೆ ಎಂದು ಅಹ್ಮದಾಬಾದ್‌ ನ ಉಪಪೊಲೀಸ್ ಆಯುಕ್ತ ಹರ್ಷದ್ ಪಟೇಲ್ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ವಿಧ್ವಂಸಕೃತ್ಯ ನಿಗ್ರಹ ದಳವು ಶಾಲೆಗಳಿಗೆ ಆಗಮಿಸಿ, ಕೂಲಂಕಷವಾಗಿ ಶೋಧ ಕಾರ್ಯಾಚರಣೆ ನಡೆಸಿದವು.

ಆದರೆ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಲಿಲ್ಲ. ಇದೀಗ ಸೈಬರ್ ಅಪರಾಧ ತಡೆ ದಳವು ಈ ಇ-ಮೇಲ್‌ ಗಳ ಮೂಲವನ್ನು ಹಾಗೂ ಅದರ ಹಿಂದೆ ಯಾರಿದ್ದಾರೆಂಬ ಬಗ್ಗೆ ತನಿಖೆಯನ್ನು ನಡೆಸುತ್ತಿವೆ ಎಂದು ಪಟೇಲ್ ಹೇಳಿದ್ದಾರೆ.

ಮಧ್ಯಾಹ್ನ 1.11ರ ವೇಳೆಗೆ ಈ ಶಾಲೆಗಳಲ್ಲಿ ಬಾಂಬ್ ಸ್ಫೋಟಗಳು ನಡೆಯಲಿವೆಯೆಂದು ಇಮೇಲ್‌ ನಲ್ಲಿ ಬೆದರಿಕೆಹಾಕಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News