ಮುಂಬೈ: ನೌಕಾಪಡೆಯ ಬಂದರಿನಲ್ಲಿ ಎರಡು ಗಸ್ತು ದೋಣಿ ಮುಳುಗಡೆ
Update: 2016-07-19 23:16 IST
ಮುಂಬೈ, ಜು.19: ಮುಂಬೈ ಸಮುದ್ರದಲ್ಲಿ ಗಸ್ತಿಗೆ ಉಪಯೋಗಿಸುತ್ತಿದ್ದ ಜಲ ಸೇನೆಯ ಎರಡು ಭದ್ರತಾ ದೋಣಿಗಳು ಬೆಂಕಿ ಅಪಘಾತವೊಂದರ ಬಳಿಕ ನೌಕಾಪಡೆಯ ದಕ್ಕೆಯಲ್ಲಿ ಇಂದು ಮುಳುಗಿವೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಅಥವಾ ಬಂದರಿನಲ್ಲಿರುವ ನೌಕಾಪಡೆಯ ಇತರ ಆಸ್ತಿಗಳಿಗೆ ಧಕ್ಕೆಯಾಗಿಲ್ಲ. ಘಟನೆಯ ಕುರಿತು ವಿಚಾರಣಾ ಸಮಿತಿಯೊಂದನ್ನು ರಚಿಸಲು ಆದೇಶಿಸಲಾಗಿದೆಯೆಂದು ಜಲಸೇನಾ ಮೂಲಗಳು ಪಿಟಿಐಗೆ ತಿಳಿಸಿವೆ. ಇಂದು ನಸುಕಿನಲ್ಲಿ ಒಂದು ಭದ್ರತಾ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದನ್ನು ನಂದಿಸುವ ವೇಳೆ ಎರಡು ದೋಣಿಗಳಿಗೆ ಹಾನಿಯಾಯಿತು. ಅವುಗಳಲ್ಲಿ ನೀರು ತುಂಬಿ ಬಂದರು ಪ್ರದೇಶದ ಆಳವಲ್ಲದ ನೀರಿನಲ್ಲಿ ಮುಳುಗಿದವೆಂದು ಅವು ಹೇಳಿವೆ.