ನವಾಝ್ ಶರೀಫ್‌ರ ಸರ್ವಾಧಿಕಾರಿ ಧೋರಣೆ ಪಾಕಿಸ್ತಾನಕ್ಕೆ ಅಪಾಯಕಾರಿ: ಇಮ್ರಾನ್ ಖಾನ್
Update: 2016-07-20 11:56 IST
ಇಸ್ಲಾಮಾ ಬಾದ್,ಜುಲೈ 20: ಪಾಕಿಸ್ತಾನದಲ್ಲಿ ಸೈನಿಕ ದಂಗೆಯ ಬೆದರಿಕೆಯಿಲ್ಲ. ಆದರೆ ನವಾಝ್ ಶರೀಫ್‌ರ ಸರ್ವಾಧಿಕಾರಿ ಧೋರಣೆ ಪಾಕಿಸ್ತಾನಕ್ಕೆ ಅಪಾಯಕಾರಿಯಾಗಿದೆ ಎಂದು ತೆಹ್ರೀಕೆ ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ಆರೋಪಿಸಿದ್ದಾರೆಂದುವರದಿಯಾಗಿದೆ. ಅವರು ಭಾಗ್ ಮತ್ತು ಮುಖಫ್ಫರಾಬಾದ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಟರ್ಕಿಯಲ್ಲಿ ಸಂಭವಿಸಿದಂತೆ ಸೈನಿಕ ಬುಡಮೇಲು ಕೃತ್ಯ ಪಾಕಿಸ್ತಾನದಲ್ಲಿ ಆಗದು. ಎರ್ದೊಗಾನ್‌ರಿದ್ದಲ್ಲಿ ಒಂದು ವೇಳೆ ನವಾಝ್ ಶರೀಫ್ ಇರುತ್ತಿದ್ದರೆ ಸರಕಾರವನ್ನು ಬುಡಮೇಲುಗೊಳಿಸುವ ಯತ್ನ ಯಶಸ್ವಿಯಾಗಬಹುದಿತ್ತು. ಹಾಗೆ ನಡೆದಿದ್ದರೆ ಜನರು ಸಿಹಿಹಂಚಿ ಸಂಭ್ರಮಿಸುತ್ತಿದ್ದರೆಂದು ಇಮ್ರಾನ್ ಖಾನ್ ಹೇಳಿದ್ದಾರೆಂದು ವರದಿ ತಿಳಿಸಿದೆ.