ಲೋಕಸಭೆ: ಗಾಢ ನಿದ್ದೆಯಲ್ಲಿ ರಾಹುಲ್ ಗಾಂಧಿ..!
Update: 2016-07-20 15:46 IST
ಹೊಸದಿಲ್ಲಿ, ಜು.20: ಲೋಕಸಭೆಯಲ್ಲಿ ಬುಧವಾರ ದಲಿತರ ದೌರ್ಜನ್ಯದ ವಿರುದ್ಧ ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿ ಗದ್ದಲ ಉಂಟಾಗಿದ್ದರೂ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವನ್ನು ಕಿವಿಗೆ ಹಾಕಿಕೊಳ್ಳದೆ ಗಾಢ ನಿದ್ದೆಯಲ್ಲಿರುವುದು ಗಮನ ಸೆಳೆಯಿತು.
.ಹಲ್ಲೆಗೊಳಗಾದ ದಲಿತ ಯುವಕರನ್ನು ಗುರುವಾರ ಭೇಟಿಯಾಗುವುದಾಗಿ ಈಗಾಗಲೇ ತಿಳಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಸತ್ ನಲ್ಲಿ ಕುಳಿತಲ್ಲೆ ಮುಖಕ್ಕೆ ಕೈ ಇಟ್ಟು ನಿದ್ದೆಗೆ ಶರಣಾಗಿದ್ದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ಬಿಸಿ ಬಿಸಿ ಚರ್ಚೆಯಲ್ಲಿ ರಾಹುಲ್ ಗಾಂಧಿ ಆಸಕ್ತಿ ಇಲ್ಲದಂತೆ ವರ್ತಿಸಿರುವುದು ವಿವಾದಕ್ಕೆ ಕಾರಣವಾಗಿದೆ.