ವಿಂಡೀಸ್‌ನಲ್ಲಿ ಸ್ಪಿನ್ನರ್‌ಗಳಿಂದ ಮಹತ್ವದ ಪಾತ್ರ: ಧೋನಿ
Update: 2016-07-20 23:52 IST
ಹೊಸದಿಲ್ಲಿ, ಜು.20: ಟೆಸ್ಟ್ ಕ್ರಿಕೆಟ್ ಆಡುವುದರಿಂದ ವಂಚಿತರಾಗಿರುವ ಭಾರತದ ಸೀಮಿತ ಓವರ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಗುರುವಾರ ಆ್ಯಂಟಿಗುವಾದಲ್ಲಿ ಆರಂಭವಾಗಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಕೆರಿಬಿಯನ್‌ನಲ್ಲಿ ಸ್ಪಿನ್ನರ್‌ಗಳು ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ನನ್ನ ಪ್ರಕಾರ ವೆಸ್ಟ್‌ಇಂಡೀಸ್‌ನ ಪಿಚ್ ಮಂದಗತಿಯಲ್ಲಿದ್ದು, ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದ್ದಾರೆ. ಭಾರತ ತಂಡದಲ್ಲಿ 8 ರಿಂದ 10 ವೇಗ ಬೌಲರ್‌ಗಳಿದ್ದಾರೆ. ತಂಡದಲ್ಲಿ ಹೆಚ್ಚು ಸ್ಪರ್ಧೆಯಿದ್ದರೆ ಉತ್ತಮವಾಗುತ್ತದೆ’’ ಎಂದು ಧೋನಿ ಹೇಳಿದ್ದಾರೆ.
ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದೆ ಎಂದಿರುವ ಧೋನಿ,‘‘ನಮ್ಮ ತಂಡದಲ್ಲಿ ಅಗ್ರ ಕ್ರಮಾಂಕದಲ್ಲಿ ಆರು ಬಲಿಷ್ಠ ಬ್ಯಾಟ್ಸ್‌ಮನ್‌ಗಳಿದ್ದಾರೆ. ಒಂದಿಬ್ಬರು ಹೊಸ ಮುಖವಿದೆ. ಹೊಸ ಆಟಗಾರರಿಗೆ ಉಪ ಖಂಡದಿಂದ ಹೊರಗೆ ಆಡಿರುವ ಅನುಭವವಿದೆ ಎಂದು ಹೇಳಿದರು.