×
Ad

ಸ್ಮಿತಾ ಠಾಕ್ರೆಗೆ ಜನಿಸಿದ ಐಶ್ವರ್ಯ ತನ್ನ ಪುತ್ರನಲ್ಲ : ಜಯದೇವ್ ಠಾಕ್ರೆ!

Update: 2016-07-21 11:40 IST

 ಮುಂಬೈ,ಜುಲೈ 21: ತನ್ನ ಪತ್ನಿಯಾಗಿದ್ದ ಸ್ಮಿತಾ ಠಾಕ್ರೆಗೆ ಜನಿಸಿದ ಐಶ್ವರ್ಯ ತನ್ನ ಪುತ್ರನಲ್ಲ ಎಂದು ಬಾಳಠಾಕ್ರೆಯ ಎರಡನೆ ಪುತ್ರ ಜಯದೇವ್ ಠಾಕ್ರೆ ಹೇಳಿರುವುದಾಗಿ ವರದಿಯಾಗಿದೆ. ತನ್ನ ತಮ್ಮ ಉದ್ಧವ್ ಠಾಕ್ರೆ ಹಾಗೂ ಐಶ್ವರ್ಯನ ನಡುವೆ ಕುಟುಂಬದ ಸೊತ್ತನ್ನು ಹಂಚಿರುವ ಬಾಳ್ ಠಾಕ್ರೆಯ ಉಯಿಲನ್ನು ಪ್ರಶ್ನಿಸಿ ಅವರ ಎರಡನೆ ಪುತ್ರ ಜಯದೇವ್ ಠಾಕ್ರೆ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಕೋರ್ಟಿಗೆ  ಜಯದೇವ್ ಹೀಗೆ ತಿಳಿಸಿದ್ದಾರೆಂದು ವರದಿ ತಿಳಿಸಿದೆ.

  ಠಾಕ್ರೆಯ ವಸತಿಯಾದ ಮಾತೋಶ್ರೀಯ ಮಹಡಿಯಲ್ಲಿ ಒಂದನ್ನು ಐಶ್ವರ್ಯನಿಗೆ ನೀಡಬೇಕು ಎಂದು ಬಾಳಠಾಕ್ರೆ ಉಯಿಲಿನಲ್ಲಿ ತಿಳಿಸಿದ್ದರು. ಉಳಿದ ಮಾತೋಶ್ರಿಯ ಮಹಡಿಗಳು ಹಾಗೂ ಬ್ಯಾಂಕ್ ಬ್ಯಾಲೆನ್ಸನ್ನು ಉದ್ಧವ್ ಠಾಕ್ರೆಗೆ ನೀಡಬೇಕೆಂದು ಬಾಳ ಠಾಕ್ರೆ ಉಯಿಲಿನಲ್ಲಿದೆ. ಆದರೆ ಜಯದೇವ್ ಈ ಉಯಿಲನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಇದು ನಕಲಿ ಉಯಿಲು ಎಂದು ಆರೋಪಿಸುತ್ತಿದ್ದಾರೆ. ಬಾಳಠಾಕ್ರೆಯ ಸೊತ್ತಿನಲ್ಲಿ ತನಗೂ ಹಕ್ಕಿದೆ ಎಂದು ಬಾಳ ಠಾಕ್ರೆ ನಿಧನರಾಗುವ ಮೊದಲು ತನಗೆ ತಿಳಿಸಿದ್ದರು ಎಂದು ವಾದಿಸಿ ಜಯದೇವ್ ಕೋರ್ಟ್‌ನ ಮೊರೆಹೋಗಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News