×
Ad

ಕೆಲಸದಿಂದ ವಜಾ : ಮರಹತ್ತಿ ಆತ್ಮಹತ್ಯೆ ಬೆದರಿಕೆ - ಕೆಲಸ ದಕ್ಕಿಸಿಕೊಂಡ ಭೂಪ!

Update: 2016-07-21 12:14 IST

   ಕಣ್ಣೂರು,ಜುಲೈ 21: ಖಾಸಗಿ ಕಂಪೆನಿಯೊಂದು ಕೆಲಸದಿಂದ ವಜಾಗೊಳಸಿದ್ದನ್ನು ಪ್ರತಿಭಟಿಸಿ ವ್ಯಕ್ತಿಯೊಬ್ಬ ಮರಹತ್ತಿ ಕುಳಿತು ಕೊರಳಿಗೆ ಹಗ್ಗದ ಉರುಳು ಸಿಕ್ಕಿಸಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಘಟನೆ ಕೇರಳದ ಕಣ್ಣೂರಿನಿಂದವರದಿಯಾಗಿದೆ. ಕೆಲಸಕ್ಕೆ ಪುನಃ ತೆಗೆದುಕೊಳ್ಳುವ ಭರವಸೆ ಸಿಕ್ಕಿದ ನಂತರವೇ ಆತ ಮರದಿಂದ ಕೆಳಗಿಳಿದು ಬಂದಿದ್ದಾನೆ. ಕಣ್ಣೂರು ವಿಮಾನನಿಲ್ದಾಣದಲ್ಲಿ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಎಲ್ ಆಂಡ್ ಡಿ ಕಂಪೆನಿಯಲ್ಲಿ ತಾತ್ಕಾಲಿಕ ಚಾಲಕನಾದ ಕೋಟ್ಟಯಂ ಪೊನ್‌ಕುನ್ನು ಮನೂಪ್ ಎಂಬ ಯುವಕ ಬುಧವಾರ ಸಂಜೆ 4:30ಕ್ಕೆ ಮರಹತ್ತಿ ಆತ್ಮಹತ್ಯೆ ಬೆದರಿಕೆಹಾಕಿದ ವ್ಯಕ್ತಿಯೆಂದು ವರದಿ ತಿಳಿಸಿದೆ.

  ಕಣ್ಣೂರಿನ ಲೇಬರ್ ಕೋರ್ಟ್‌ನ ಸಮೀಪದ ಮರಕ್ಕೆ ಹತ್ತಿ ಕೊರಳಿಗೆ ಉರುಳು ಹಾಕಿ ಕೆಲಸಕ್ಕೆ ಪುನಃ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆಹಾಕಿದಾಗ ಜನರ ಗುಂಪು ಅಲ್ಲಿ ಸೇರಿತ್ತು. ವಿಷಯ ತಿಳಿದು ಬಂದ ಅಗ್ಮಿಶಾಮಕ ದಳದವರು ಒಲೈಕೆ ನಡೆಸಲು ಪ್ರಯತ್ನಿಸಿದರೂ ಆತ ಮರ ಇಳಿದು ಬರಲು ಒಪ್ಪಲಿಲ್ಲ. ಮರಕ್ಕೆ ಅಗ್ನಿಶಾಮಕ ದಳದವರು ಮರಹತ್ತತೊಡಗಿದಂತೆ ಅನುಪ್ ಕೊರಳಿನ ಉರುಳು ಬಿಗಿಯಲು ತೊಡಗಿದ್ದ. ಅಂತಿಮವಾಗಿ ತಹಶೀಲ್ದಾರ್ ಕಂಪೆನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಆದರೆ ಕಂಪೆನಿ ಅಧಿಕಾರಿಗಳುತನಗೆ ನೇರವಾಗಿ ಫೋನ್ ಮಾಡಿ ಕೆಲಸ ಕೊಡುವ ಭರವಸೆ ನೀಡಬೇಕೆಂದು ಅನುಪ್ ಬೇಡಿಕೆ ಇರಿಸತೊಡಿಗಿದ. ಅಂತಿಮವಾಗಿ ಕಂಪೆನಿ ಅಧಿಕಾರಿಗಳು ಮರದ ಮೇಲಿದ್ದ ಅನುಪ್‌ನ ಕೈಯಲಿದ್ದ ಮೊಬೈಲ್‌ಗೆ ಫೋನ್ ಮಾಡಿ ಕೆಲಸ್ಕೆ ಮತ್ತೆ ಸೇರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಆತ ಮರ ಇಳಿದು ಬಂದಿದ್ದು ಪ್ರಕರಣ ಸುಖಾಂತ್ಯವಾಯಿತೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News