×
Ad

ಗೋಮಾಂಸಾಹಾರಿಗಳು ಒಂದಾಗುವ ಸಮಯ

Update: 2016-07-22 10:41 IST

ಹೆಣ್ಣಿನ ಕುರಿತಂತೆ ತೀರಾ ನಿಕೃಷ್ಟ ಭಾವನೆಯೊಂದು ಬಿಜೆಪಿ ಮತ್ತು ಆರೆಸ್ಸೆಸ್‌ನೊಳಗೆ ತೀರಾ ಆಳವಾಗಿ ಇದೆ. ಹಾಗೆಯೇ ಬಾಯಿ ತೆರೆದರೆ ಗಬ್ಬು ವಾಸನೆ ಇಡೀ ಭಾರತವನ್ನೇ ಆವರಿಸಿಕೊಳ್ಳುವಂತಹ ನಾಯಕರನ್ನು ಹೊಂದಿದ ಹೆಗ್ಗಳಿಕೆಯೂ ಬಿಜೆಪಿಯದ್ದೇ ಆಗಿದೆ. ಸಾ್ವಗಳ ವೇಷದಲ್ಲಿರುವ ನಾಯಕರೇ ಅತ್ಯಂತ ಹೊಲಸು ಮಾತನಾಡುತ್ತಾರೆ ಎಂದ ಮೇಲೆ ಉಳಿದವರ ಪಾಡೇನು. ಇದೀಗ ಅಂತಹದೇ ಸಡಿಲ ಮಾತೊಂದನ್ನು ಹೆಣ್ಣೊಬ್ಬಳ ಮೇಲೆ ಅದರಲ್ಲೂ ಬಿಎಸ್ಪಿಯ ನಾಯಕಿಯ ಮೇಲೆ ಆಡಿರುವ ಬಿಜೆಪಿ ಮುಖಂಡ ದಯಾಶಂಕರ ಸಿಂಗ್, ತಾನೂ ಅವಘಡದಲ್ಲಿ ಸಿಲುಕಿಕೊಂಡಿದ್ದು, ಇಡೀ ಪಕ್ಷವನ್ನೂ ಆಪತ್ತಿನಲ್ಲಿ ಸಿಲುಕಿಸಿದ್ದಾರೆ. 

ಮಾಯಾವತಿಯನ್ನು ವೇಶ್ಯೆಯೆಂದು ನಿಂದಿಸಿರುವ ಸಿಂಗ್, ದಲಿತ ಹೆಣ್ಣು ಮಕ್ಕಳ ಕುರಿತಂತೆ ಅವರ ಮನಸ್ಥಿತಿಯನ್ನು ಈ ಮಾತಿನಲ್ಲಿ ಹೊರಗೆಡಹಿದ್ದಾರೆೆ. ದಲಿತರನ್ನು ತಮ್ಮ ಕಡೆಗೆ ಸೆಳೆಯಲು ಬೇರೆ ಬೇರೆ ರೀತಿಯಲ್ಲಿ ಪ್ರಹಸನ ಮಾಡುತ್ತಿರುವ ಆರೆಸ್ಸೆಸ್ ಮತ್ತು ಬಿಜೆಪಿಗೆ ಇವರ ಮಾತು ಭಾರೀ ಮುಜುಗರಕ್ಕೆ ಈಡು ಮಾಡಿದೆ. ಇಂದು ದೇಶದ ದಲಿತರೆಲ್ಲ ಪಕ್ಷ ಭೇದ ಮರೆತು ಬಿಜೆಪಿಯ ವಿರುದ್ಧ ನಿಂತಿದ್ದಾರೆ. ಮಾಯಾವತಿಯ ಮೂಲಕ ದಲಿತರು ಹೊಸ ರಾಜಕೀಯ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಇಂದು ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ, ದೇಶಾದ್ಯಂತ ಮಾಯಾವತಿಗೆ ಭಾರೀ ಅಭಿಮಾನಿಗಳಿದ್ದಾರೆ. ಭಾವನಾತ್ಮಕವಾಗಿ ಆಕೆಯನ್ನು ಹಚ್ಚಿಕೊಂಡವರಿದ್ದಾರೆ. ಅವರೆಲ್ಲರೂ ಬಿಜೆಪಿಯ ಈ ನಾಯಕನ ಮಾತಿಗೆ ಆಘಾತಗೊಂಡಿದ್ದಾರೆ. ದೇಶದೆಲ್ಲೆಡೆ ಲಕ್ಷಾಂತರ ಜನರು ಬೀದಿಗಿಳಿದು ಬಿಜೆಪಿಯ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಪರಿಸ್ಥಿತಿ ಹದಗೆಡುವುದನ್ನು ಅರಿತುಕೊಂಡ ಬಿಜೆಪಿಯ ಮುಖಂಡರು ತಕ್ಷಣ ಸಿಂಗ್ ವಿರುದ್ಧ ಹೇಳಿಕೆ ನೀಡಿ, ಅವರನ್ನ್ನು ಪಕ್ಷದಿಂದ ಅಮಾನತು ಮಾಡುವ ನಾಟಕವಾಡಿದ್ದಾರೆ. ಆದರೆ ಈವರೆಗೆ ಅವರ ಮೇಲೆ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ಕಳೆದೆರಡು ದಿನಗಳಿಂದ ಗುಜರಾತ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮುಂದುವರಿದ ಭಾಗವಾಗಿದೆ ಮಾಯಾವತಿಯವರ ಅವಹೇಳನ. ಚರ್ಮ ಸಾಗಿಸುತ್ತಿದ್ದ ದಲಿತರ ಮೇಲೆ ಮಾರಕ ಹಲ್ಲೆ ನಡೆದ ಬೆನ್ನಿಗೇ ಗುಜರಾತಿನ ದಲಿತರು ಅದರ ವಿರುದ್ಧ ಭಾರೀ ಪ್ರತಿಭಟನೆಗಿಳಿದರು. ಒಂದೆಡೆ ಇದೇ ದಲಿತರ ಕೈಯಲ್ಲಿ ಚರ್ಮ, ದನದ ಎಲುಬುಗಳ ಸಂಗ್ರಹವನ್ನು ಮಾಡಿಸುವ ವ್ಯವಸ್ಥೆ, ಮಗದೊಂದೆಡೆ ಸಂಸ್ಕೃತಿಯ ಹೆಸರಿನಲ್ಲಿ ಅವರಿಗೆ ಥಳಿಸುವ ಕೆಲಸ ಮಾಡುತ್ತಿದೆ.

ಇದರಿಂದ ತೀವ್ರ ಆಕ್ರೋಶಗೊಂಡ ದಲಿತರು, ದನದ ಎಲುಬುಗಳನ್ನು ಕಚೇರಿಗಳ ಮೇಲೆ ಎಸೆದು ತಮ್ಮ ಪ್ರತಿಭಟನೆಯನ್ನು ಮಾಡಿದರು. ನಿಜಕ್ಕೂ ಈ ಪ್ರತಿಭಟನೆ ಸಂಘಪರಿವಾರವನ್ನು ಅಲುಗಾಡಿಸಿದೆ. ಗೋಮಾಂಸದ ಕುರಿತ ರಾಜಕಾರಣ ಅತಿಯಾದರೆ, ಅದಕ್ಕೆ ಸಿಗುವ ಪ್ರತಿಕ್ರಿಯೆಯೇನು ಎನ್ನುವುದನ್ನು ಇದು ಬಯಲುಗೊಳಿಸಿದೆ. ವಿಪರ್ಯಾಸವೆಂದರೆ ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಸಂಘಪರಿವಾರದ ಮುಖಂಡರೂ ಖಂಡಿಸಿದ್ದಾರೆ. ಆದರೆ ಈ ಖಂಡನೆ ಅತ್ಯಂತ ವಿರೋಧಾಭಾಸಗಳನ್ನು ಹೊಂದಿದೆ. ದಲಿತರ ಮೇಲೆ ಹಲ್ಲೆ ನಡೆಯುವುದಕ್ಕೆ ಈ ಸಂಘಪರಿವಾರ ದನದ ಕುರಿತಂತೆ ಹಬ್ಬಿಸಿರುವ ಪ್ರಚೋದನೆಗಳೇ ಕಾರಣ. ಗೋಮಾಂಸವನ್ನು ಸೇವಿಸಬಾರದು ಎನ್ನುವ ರಾಜಕಾರಣದ ಮುಂದುವರಿದ ಭಾಗವೇ ಗುಜರಾತ್‌ನಲ್ಲಿ ನಡೆದಿದೆ. ಈ ಹಿಂದೆ ಈ ದೇಶದ ವಿವಿಧೆಡೆೆ ಗೋಮಾಂಸದ ಹೆಸರಿನಲ್ಲಿ ಭಾರೀ ಹಲ್ಲೆಗಳು ನಡೆದಿವೆೆ. ಹಲವರನ್ನು ಥಳಿಸಿ ಕೊಲ್ಲಲಾಗಿದೆ. ಆದರೆ ಈ ದೇಶದ ಮುಸ್ಲಿಮರು ಅದನ್ನು ವೌನವಾಗಿ ಸಹಿಸಿಕೊಂಡೇ ಬಂದಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಆರಂಭದಲ್ಲಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ನಡೆದ ಈ ರಾಜಕಾರಣ ಇದೀಗ ದಲಿತರ ಕಡೆಗೆ ತಿರುಗಿದೆ.

ಆದರೆ ದಲಿತರು ಒಂದಾಗಿ ಇದರ ಬಗ್ಗೆ ಪ್ರತಿಭಟಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತರ ಜೊತೆಗೆ ಎಲ್ಲ ಮುಸ್ಲಿಮರು ಕೈ ಜೋಡಿಸಬೇಕಾಗಿದೆ. ಇಂತಹ ಹಲ್ಲೆಗಳನ್ನು ಮುಸ್ಲಿಮರು ಈ ದೇಶದಲ್ಲಿ ಹಲವು ದಶಕಗಳಿಂದ ಸಹಿಸುತ್ತಾ ಬಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಗೋಮಾಂಸ ತಿಂದಿದ್ದಾರೆ ಎಂದು ಅಖ್ಲಾಕ್ ಎಂಬವರನ್ನು ಥಳಿಸಿ ಕೊಂದ ಘಟನೆ ನಡೆಯಿತು. ಆಗ ಎಲ್ಲರೂ ಒಂದಾಗಿ ಈ ಸಂಘಪರಿವಾರದ ಗೋಮಾಂಸ ವಿರೋ ಆಂದೋಲನದ ವಿರುದ್ಧ ನಿಂತಿದ್ದರೆ ಇಂದು ದಲಿತರ ಮೇಲೆ ಈ ಪರಿಯ ದಾಳಿಗಳು ಆಗುತ್ತಿರಲಿಲ್ಲವೇನೋ. ದಲಿತರು ಗುಜರಾತ್‌ನಲ್ಲಿ ಒಂದಾಗಿ ಸಂಘಪರಿವಾರದ ವಿರುದ್ಧ ಪ್ರತಿಭಟನೆ ನಡೆಸಿದ ಬೆನ್ನಿಗೇ ಮಾಯಾವತಿಯನ್ನು ವೇಶ್ಯೆ ಎಂದು ಕರೆದು ಬಿಜೆಪಿ ಮುಖಂಡ ಅವಮಾನ ಮಾಡಿದ ಘಟನೆ ನಡೆದಿದೆ. ಮಾಯಾವತಿಯ ಕುರಿತಂತೆ ಅಸಹ್ಯ ಹೇಳಿಕೆಯನ್ನು ನೀಡಿರುವುದು ಇಡೀ ಸೀ ಕುಲಕ್ಕೆ ಮಾಡಿರುವ ಅವಮಾನವಾಗಿದೆ. ಆದುದರಿಂದ, ಇದನ್ನು ಕೇವಲ ಬಿಎಸ್ಪಿ ಮತ್ತು ಬಿಜೆಪಿಯ ತಿಕ್ಕಾಟ ಎಂದು ನೋಡದೆ, ಹೆಣ್ಣು ಮಕ್ಕಳ ಕುರಿತಂತೆ ಸಂಘಪರಿವಾರ ಹೊಂದಿರುವ ಮನಸ್ಥಿತಿಯ ವಿರುದ್ಧ ಹೋರಾಟ ಮಾಡಬೇಕಾಗಿದೆ.

ಈ ಹೋರಾಟ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ. ಅವಾಚ್ಯ ಮಾತುಗಳನ್ನಾಡಿರುವ ಬಿಜೆಪಿ ಮುಖಂಡನ ನಾಲಗೆಯನ್ನು ಕತ್ತರಿಸಿ ತಂದವರಿಗೆ 50 ಲಕ್ಷ ರೂಪಾಯಿ ಬಹುಮಾನವೆಂದು ಬಿಎಸ್ಪಿ ಮುಖಂಡರೊಬ್ಬರು ಘೋಷಿಸಿದ್ದಾರೆ. ಹಾಗೆಯೇ ಇನ್ನೊಬ್ಬ ನಾಯಕರೂ ಈ ಸಿಂಗ್ ಕುರಿತಂತೆ ಅವಾಚ್ಯ ಮಾತುಗಳನ್ನಾಡಿದ್ದಾರೆ. ನಾಲಗೆ ಕಡಿಯುವ, ತಲೆ ಕತ್ತರಿಸುವ ಸಂಸ್ಕೃತಿ ಸಂಘಪರಿವಾರ ಮತ್ತು ಬಿಜೆಪಿಗೆ ಸಂಬಂಸಿದ್ದು. ಅದನ್ನು ಈ ದೇಶದ ದಲಿತರು ಯಾವತ್ತೂ ಮಾದರಿಯಾಗಿ ತೆಗೆದುಕೊಳ್ಳಬಾರದು. ಇಂದು ಗೋಮಾಂಸಾಹಾರ ನಮ್ಮ ಹಕ್ಕು ಎನ್ನುವುದನ್ನು ಸಂಘಪರಿವಾರದ ವೈದಿಕ ಮನಸ್ಸುಗಳಿಗೆ ಸ್ಪಷ್ಟಪಡಿಸುವ ಅಗತ್ಯವಿದೆ. ನಮ್ಮ ಆಹಾರವಾಗಿರುವ ಗೋಮಾಂಸದ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ ಎನ್ನುವುದನ್ನು ಅವರಿಗೂ ಮನವರಿಕೆ ಮಾಡಬೇಕಾಗಿದೆ.

ಈ ನಿಟ್ಟಿನಲ್ಲಿ, ಇದು ಕೇವಲ ದಲಿತರಷ್ಟೇ ಮುಂದುವರಿಸುವ ಹೋರಾಟವಲ್ಲ. ಈ ದೇಶದ ಶೇ. 75ರಷ್ಟಿರುವ ಗೋಮಾಂಸಾಹಾರಿಗಳೆಲ್ಲ ಒಂದಾಗಿ ದಲಿತರ ಜೊತೆಗೆ ನಿಲ್ಲಬೇಕು. ಹಾಗೆಯೇ ಪ್ರಜಾಸತ್ತೆಯ ಮೇಲೆ ನಂಬಿಕೆಯುಳ್ಳ ಗೋಮಾಂಸಾಹಾರಿಗಳಲ್ಲದವರೂ ಈ ಹೋರಾಟದಲ್ಲಿ ಜೊತೆಯಾಗಬೇಕಾಗಿದೆ. ಗೋ ಉದ್ಯಮವನ್ನು ಉಳಿಸುವ ನಿಟ್ಟಿನಲ್ಲೂ ಇಂತಹದೊಂದು ಹೋರಾಟದ ಅಗತ್ಯವಿದೆ. ಒಂದೆಡೆ ಬಿಜೆಪಿ ಮುಖಂಡರೇ ಗೋಮಾಂಸ ಸಂಸ್ಕರಣೆಯ ಘಟಕಗಳನ್ನು ಹೊಂದಿದ್ದಾರೆ. ವಿದೇಶಕ್ಕೆ ಈ ಘಟಕಗಳ ಮೂಲಕ ಮಾಂಸವನ್ನು ರ್ತು ಮಾಡಿ ಕೋಟಿ ಕೋಟಿ ಬಾಚಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಡ ದಲಿತ ಅಥವಾ ಮುಸ್ಲಿಮನೊಬ್ಬ ದನದ ವ್ಯಾಪಾರ ಮಾಡಿದರೆ, ದನ ಸಾಗಿಸಿದರೆ ಆತನನ್ನು ತಡೆದು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಬರ್ಬರವಾಗಿ ಥಳಿಸಿ ಕೊಂದು ಹಾಕುವುದು. ಬಿಜೆಪಿ ಮತ್ತು ಸಂಘಪರಿವಾರ ತಮ್ಮ ಈ ದ್ವಂದ್ವ ನೀತಿಯನ್ನು ಬದಲಿಸದೇ ಇದ್ದರೆ ಒಂದಲ್ಲ ಒಂದು ದಿನ ಅದು ಅವರ ಕೊರಳಿಗೇ ಉರುಳಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News