×
Ad

ಕೋಯಿಕ್ಕೋಡ್: ವಿದ್ಯಾರ್ಥಿನಿಯ ಆತ್ಮಹತ್ಯೆ

Update: 2016-07-23 23:55 IST


ಕೋಯಿಕ್ಕೋಡ್, ಜು.23: ಇಲ್ಲಿನ ವಡಕರ ಸಮೀಪದ ತೊಡನ್ನೂರು ಎಂಬಲ್ಲಿ 19ರ ಹರೆಯದ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಆತ್ಮಹತ್ಯೆಗೆ ರ್ಯಾಗಿಂಗ್ ಕಾರಣವೆಂದು ವಿದ್ಯಾರ್ಥಿನಿಯ ಕುಟುಂಬಿಕರು ಆರೋಪಿಸಿದ್ದಾರೆ.
 ಚೇರಂಡತೂರಿನ ಎಂಎಚ್‌ಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜ್‌ನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ-ಮೈಕ್ರೊಬಯಾಲಜಿ ವಿದ್ಯಾರ್ಥಿನಿಯಾಗಿದ್ದ ಅಸ್ನಾಸ್ ಎಂಬಾಕೆ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಸಂಜೆ 5:30ರ ವೇಳೆ ಆಕೆಯ ಹೆತ್ತವರಿಗೆ ಕಂಡು ಬಂದಿದ್ದಳು. ತಮ್ಮ ಕರೆಗಳಿಗೆ ಅಸ್ನಾಸ್ ಉತ್ತರಿಸದಿದ್ದಾಗ ಅವರಿಗೆ ಸಂಶಯ ಬಂದಿತ್ತು. ಅಸ್ನಾಸ್‌ಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಲೇಜಿನಲ್ಲಾದ ರ್ಯಾಗಿಂಗ್ ಘಟನೆಯೊಂದು ಹಶಿನಾಸ್‌ಳ ಈ ನಿರ್ಧಾರಕ್ಕೆ ಕಾರಣ. ಯಾವುದೋ ವಿವಾದದಲ್ಲಿ ಆಕೆ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಮೂರನೆ ವರ್ಷದ ಹಿರಿಯ ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಅದಕ್ಕೆ ಹಶಿನಾಸ್ ನಿರಾಕರಿಸಿದಾಗ, ಅದು ಕಾಲೇಜಿನ 2ನೆ ಮತ್ತು 3ನೆ ವರ್ಷದ ವಿದ್ಯಾರ್ಥಿಗಳ ನಡುವೆ ಜಗಳವಾಗಿ ಮಾರ್ಪಟ್ಟಿತ್ತೆಂದು ಆಕೆಯ ಕುಟುಂಬಿಕರು ಆರೋಪಿಸಿದ್ದಾರೆ.
ಕೆಲವು ಪ್ರಾಧ್ಯಾಪಕರು ಮಧ್ಯಪ್ರವೇಶಿಸಿ, ಕ್ಷಮೆ ಯಾಚಿಸುವಂತೆ ಹಶಿನಾಸ್‌ಗೆ ಸೂಚಿಸಿದ್ದರು. ಅದನ್ನಾಕೆ ಒಲ್ಲದ ಮನಸ್ಸಿನಿಂದ ಮಾಡಿದ್ದಳು. ಇದು ಅಸ್ನಾಸ್‌ಗೆ ತೀವ್ರ ನೋವು ಹಾಗೂ ಮುಜುಗರವನ್ನುಂಟು ಮಾಡಿತ್ತು. ಅವಳು ಕಾಲೇಜಿನಲ್ಲಿ ಇಡೀ ದಿನ ಅಳುತ್ತಿದ್ದಳೆಂದು ಆಕೆಯ ಸ್ನೇಹಿತರು ತಮಗೆ ತಿಳಿಸಿದ್ದಾರೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News