×
Ad

ಇರಾಕ್: ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಠ 12 ಬಲಿ

Update: 2016-07-24 23:56 IST

ಬಾಗ್ದಾದ್,ಜು.24: ಉತ್ತರಬಾಗ್ದಾದ್‌ನಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬಾತ ರವಿವಾರ ತಪಾಸಣಾಠಾಣೆಯ ಮೇಲೆ ದಾಳಿ ನಡೆಸಿ ಕನಿಷ್ಠ 12 ಮಂದಿಯನ್ನು ಹತ್ಯೆಗೈದಿದ್ದಾನೆ.

ಆತ್ಮಹತ್ಯಾದಾಳಿಯಲ್ಲಿ ಕನಿಷ್ಠ 22ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲವಾದರೂ, ಐಸಿಸ್ ಭಯೋತ್ಪಾದಕ ಇದಾಗಿರಬೇಕೆಂದು ಶಂಕಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಬಗ್ದಾದ್‌ನ ಕರ್ರಾಡಾ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳಲ್ಲಿ 292 ಮಂದಿ ಸಾವನ್ನಪ್ಪಿದ್ದರು. 2014ರಿಂದೀಚೆಗೆ ಐಸಿಸ್, ಬಗ್ದಾದ್‌ನ ಉತ್ತರದ ಹಾಗೂ ಪಶ್ಚಿಮ ಪ್ರಾಂತಗಳ ಬಹುತೇಕ ಪ್ರದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಇರಾಕಿ ಪಡೆಗಳು, ಹಲವೆಡೆ ಐಸಿಸ್ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಗಿವೆ.ಇರಾಕ್‌ನಲ್ಲಿ ಐಸಿಸ್ ವಶದಲ್ಲಿರುವ ಕಟ್ಟಕಡೆಯ ನಗರವಾದ ಮೊಸುಲ್‌ನ್ನು ಮರುವಶಪಡಿಸಿಕೊಳ್ಳಲು ಇರಾಕಿ ಪಡೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News