×
Ad

ಆರೆಸ್ಸೆಸ್ ತನ್ನ ಹಣದ ಮೂಲ ಬಹಿರಂಗಪಡಿಸಲಿ : ದಿಗ್ವಿಜಯ್ ಸಿಂಗ್

Update: 2016-07-25 11:04 IST

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆರೆಸ್ಸೆಸ್ ಒಂದು ನೋಂದಣಿಯಾಗದ ಸಂಘಟನೆ ಎಂದು ಹೇಳಿದ್ದಾರೆ ಮತ್ತು ವಾರ್ಷಿಕವಾಗಿ ಮತ್ತು ಮುಖ್ಯವಾಗಿ ಗುರುಪೂರ್ಣಿಮದ ದಿನ ಅದು ಸಂಗ್ರಹಿಸುವ ಅನುದಾನದ ವಿವರಗಳನ್ನು ಬಹಿರಂಗಪಡಿಸುವಂತೆ ಹೇಳಿದ್ದಾರೆ.

“ನೋಂದಣಿಯಾಗದ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆಯೇ ಬರುವುದಿಲ್ಲ. ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಿ ಎಂದು ನೀವೆಷ್ಟು ಬಾರಿ ಕೇಳಿದರೂ, ಅದು ನೋಂದಣಿಯಾಗಿರುವ ಸಂಘಟನೆಯಲ್ಲ ಎನ್ನುವುದು ನಿಮಗೆ ತಿಳಿದುಬರುತ್ತದೆ” ಎಂದು ಪಣಜಿಯಲ್ಲಿ ಸಿಂಗ್ ಸಂಯೋಜನ ಸಮಿತಿಯ ಸಭೆಯಲ್ಲಿ ಹೇಳಿದ್ದಾರೆ. “ಆರೆಸ್ಸೆಸ್ ವ್ಯಾಪಕ ಅನುದಾನವನ್ನು ಗುರು ಪೂರ್ಣಿಮದಂದು ಸಂಗ್ರಹಿಸುತ್ತದೆ. ಅದರ ಮೌಲ್ಯವೇ ಗೊತ್ತಿಲ್ಲ. ಆರೆಸ್ಸೆಸ್ಗೆ ಗುರುದಕ್ಷಿಣೆಯಾಗಿ ಎಷ್ಟು ಹಣ ಬರುತ್ತದೆ? ಅದರ ಲೆಕ್ಕ ಯಾವತ್ತಾದರೂ ಕೇಳಿದೆಯೆ?” ಎಂದು ಅವರು ಪ್ರಶ್ನಿಸಿದರು.

“ಆರೆಸ್ಸೆಸ್ನಂತಹ ನೋಂದಣಿಯಾಗದ ಸಂಘಟನೆ ಯಾವುದೇ ಕಾಯ್ದೆಯಡಿ ಬರುವುದಿಲ್ಲ. ಆ ಹಣ ಎಲ್ಲಿ ಹೋಗುತ್ತದೆ? ಇದನ್ನು ಆರೆಸ್ಸೆಸ್ ಹೇಳಬೇಕು” ಎಂದು ಅವರು ಹೇಳಿದರು. ಗುಜರಾತಿನ ಊನಾದಲ್ಲಿ ದನದ ಚರ್ಮ ಸುಲಿದದ್ದಕ್ಕಾಗಿ ಗುಂಪೊಂದು ದಲಿತರ ಮೇಲೆ ಹೀನಾಯವಾಗಿ ಹಲ್ಲೆ ಮಾಡಿದ ಪ್ರಕರಣದಲ್ಲೂ, ಗುಂಪಿನ ಹಿಂದಿರುವ ಸಂಘಟನೆ ನೋಂದಣಿಯಾಗಿಲ್ಲ. ನೋಂದಣಿಯಾಗದ ಸಂಘಟನೆ ಸ್ಥಳೀಯ ಪೊಲೀಸರ ನೆರವಿನಿಂದ ಹಣ ಸಂಗ್ರಹಿಸುತ್ತದೆ ಎಂದು ಅವರು ಆರೋಪಿಸಿದರು.

“ಅಂತಹ ಸಂಘಟನೆಯನ್ನು ನಿಷೇಧಿಸುವುದು ಹೇಗೆ? ನೋಂದಣಿಯಾಗಿರುವ ಸಂಘಟನೆ ಎಲ್ಲಿದೆ? ನೈತಿಕ ಪೊಲೀಸಗಿರಿಗೆ ಅವರಿಗೆ ಕಾನೂನು ರೀತ್ಯಾ ಅಧಿಕಾರವಿದೆಯೆ? ಅವರಿಗೆ ಯಾರನ್ನೇ ಆದರೂ ಬಯಸಿದಂತೆ ಹೊಡೆಯುವ ಕಾನೂನು ಅಧಿಕಾರ ಇದೆಯೆ?” ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ. ಜುಲೈ 11ರ ಹಲ್ಲೆಯಲ್ಲಿ ಗೋ ರಕ್ಷಣಾ ಸಮಿತಿ ಸದಸ್ಯರು ಭಾಗವಹಿಸಿರುವ ಆರೋಪವಿದೆ. ಈ ಪ್ರಕರಣಕ್ಕೆ ಗುಜರಾತಿನ ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿದೆ.

ಕೃಪೆ: caravandaily.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News