ಅಧ್ಯಕ್ಷನಾದಲ್ಲಿ ಡಬ್ಲುಟಿಒನಿಂದ ಅಮೆರಿಕ ಹೊರಗೆ: ಟ್ರಂಪ್

Update: 2016-07-25 18:27 GMT

ವಾಶಿಂಗ್ಟನ್,ಜು.25: ತಾನು ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಅಮೆರಿಕವು ವಿಶ್ವ ವಾಣಿಜ್ಯ ಸಂಘಟನೆ (ಡಬ್ಲುಟಿಒ)ಯಿಂದ ಹೊರಬರುವ ಸಾಧ್ಯತೆಯಿದೆಯೆಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ರವಿವಾರ ಪ್ರಸಾರವಾದ ಎನ್‌ಬಿಸಿ ಟಿವಿ ವಾಹಿನಿಯ ‘ಮೀಟ್ ದಿ ಪ್ರೆಸ್’ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಉತ್ಪಾದನಾ ಚಟುವಟಿಕೆಗಳನ್ನು ವಿದೇಶಗಳಿಗೆ ವರ್ಗಾಯಿಸಿದ ಕಂಪೆನಿಗಳ ಮೇಲೆ ಶೇ.30ರಷ್ಟು ಆಮದು ದಂಡನಾ ತೆರಿಗೆಗಳನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದರು.

ಮೆಕ್ಸಿಕೊ ಮತ್ತಿತರ ರಾಷ್ಟ್ರಗಳ ಜೊತೆ ಏರ್ಪಡಿಸಿಕೊಂಡ ಉತ್ತರ ಅಮೆರಿಕ ಮುಕ್ತ ವಾಣಿಜ್ಯ ಒಡಂಬಡಿಕೆಯನ್ನು ಕೂಡಾ ಮರುಪರಿಶೀಲಿಸುವುದಾಗಿ ಇಲ್ಲವೇ ರದ್ದುಪಡಿಸಲಾಗುವುದೆಂದು ಅವರು ಸಂದರ್ಶನದಲ್ಲಿ ಘೋಷಿಸಿದ್ದಾರೆ.

ಯುರೋಪ್ ಒಕ್ಕೂಟದ ವಿಭಜನೆಯಿಂದ ಅಮೆರಿಕಕ್ಕೆ ಪ್ರಯೋಜನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆರ್ಥಿಕ ವ್ಯವಹಾರಗಳಲ್ಲಿ ಅಮೆರಿಕಕ್ಕೆ ಸ್ಪರ್ಧೆ ನೀಡುವ ಉದ್ದೇಶದಿಂದಲೇ ಯುರೋಪ್ ರಾಷ್ಟ್ರಗಳು ಒಗ್ಗೂಡಿದ್ದವು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News