×
Ad

ಮೊಗಾದಿಶು: ಅವಳಿ ಸ್ಫೋಟಕ್ಕೆ 13 ಬಲಿ

Update: 2016-07-26 23:52 IST

ಮೊಗಾದಿಶು, ಜು. 26: ಸೊಮಾಲಿಯದ ರಾಜಧಾನಿ ಮೊಗಾದಿಶುವಿನ ವಿಮಾನ ನಿಲ್ದಾಣದ ಸಮೀಪವಿರುವ ವಿಶ್ವಸಂಸ್ಥೆ ಮತ್ತು ಆಫ್ರಿಕನ್ ಯೂನಿಯನ್ ಕಟ್ಟಡಗಳ ಸಮೀಪ ಮಂಗಳವಾರ ಸಂಭವಿಸಿದ ಅವಳಿ ಸ್ಫೋಟಗಳಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡು ಆತ್ಮಾಹುತಿ ದಾಳಿಗಳ ಹೊಣೆಯನ್ನು ಶಬಾಬ್ ಗುಂಪು ಹೊತ್ತುಕೊಂಡಿದೆ.

ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವುದರಿಂದ ದಾಳಿಕಾರರನ್ನು ತಡೆಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News