×
Ad

ನ್ಯಾಯಮಂಡಳಿ ತೀರ್ಪನ್ನು ಗೌರವಿಸಿ

Update: 2016-07-26 23:53 IST

ವಿಯಾಂಟಿಯಾನ್, ಜು. 26: ದಕ್ಷಿಣ ಚೀನಾ ಸಮುದ್ರ ವಿವಾದಕ್ಕೆ ಸಂಬಂಧಿಸಿ ಹೇಗ್‌ನ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಾಲಯವು ನೀಡಿರುವ ತೀರ್ಪನ್ನು ಗೌರವಿಸುವಂತೆ ಜಪಾನ್, ಆಸ್ಟ್ರೇಲಿಯ ಮತ್ತು ಅಮೆರಿಕಗಳು ಇಂದು ಚೀನಾವನ್ನು ಒತ್ತಾಯಿಸಿದವು.

ಸಮುದ್ರದ ಮೇಲಿನ ಹಕ್ಕುಗಳಿಗೆ ಸಂಬಂಧಿಸಿ ನ್ಯಾಯಮಂಡಳಿಯು ಫಿಲಿಪ್ಪೀನ್ಸ್ ಪರವಾಗಿ ತೀರ್ಪು ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಇಲ್ಲಿ ನಡೆಯುತ್ತಿರುವ ಅಸೋಸಿಯೇಶನ್ ಆಫ್ ಸೌತ್‌ಈಸ್ಟ್ ಏಶ್ಯನ್ ನೇಶನ್ಸ್ (ಆಸಿಯಾನ್)ನ ಸಭೆಯಲ್ಲಿ ಭಾಗವಹಿಸುತ್ತಿರುವ ವೇಳೆ ಅಮೆರಿಕದ ವಿದೇಶ ಕಾರ್ಯದರ್ಶಿ ಜಾನ್ ಕೆರಿ ಹಾಗೂ ಜಪಾನ್ ಮತ್ತು ಆಸ್ಟ್ರೇಲಿಯಗಳ ವಿದೇಶ ಸಚಿವರು ಈ ಸಂಬಂಧ ಜಂಟಿ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News