×
Ad

ಇನ್ನು ಬರಲಿದೆ ಅತ್ಯಾಧುನಿಕ ಇ-ಪಾಸ್‌ಪೋರ್ಟ್

Update: 2016-07-29 12:42 IST

ಈ ಹೈಟೆಕ್ ಯುಗದಲ್ಲೂ, ಹಳೆ ಮಾದರಿಯ ಪಾಸ್‌ಪೋರ್ಟ್‌ಗಳನ್ನೇ ಏಕೆ ಒಯ್ಯಬೇಕು? ಇದೇಕೆ ಹೈಟೆಕ್ ಆಗಿಲ್ಲ ಎಂದು ಯೋಚಿಸುತ್ತೀರಾ? ಪಾಸ್‌ಪೋರ್ಟ್ ಕೂಡಾ ಈಗ ಹೈಟೆಕ್ ಯೋಗ ಪಡೆದಿದೆ. ಭವಿಷ್ಯದಲ್ಲಿ ಭಿನ್ನ, ಹೈಟೆಕ್ ಪಾಸ್‌ಪೋರ್ಟ್‌ಗಳು ಹಳೆಯ ಪಾಸ್‌ಪೋರ್ಟ್‌ಗಳಿಗೆ ಗೇಟ್‌ಪಾಸ್ ನೀಡಲಿವೆ.

ಇನ್ನಷ್ಟು ಭದ್ರತಾ ಲಕ್ಷಣಗಳನ್ನು ಒಳಗೊಂಡ ಹೊಸ ಪೀಳಿಗೆಯ ಇ-ಪಾಸ್‌ಪೋರ್ಟ್ ಬಿಡುಗಡೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಇದುವರೆಗೆ ರಾಜತಾಂತ್ರಿಕರಿಗೆ ಮಾತ್ರ ಸೀಮಿತವಾಗಿರುವ ಇ-ಪಾಸ್‌ಪೋರ್ಟ್ ಸೌಲಭ್ಯ ನಾಗರಿಕರಿಗೂ ಇಷ್ಟರಲ್ಲೇ ವಿಸ್ತರಣೆಯಾಗಲಿದೆ. ಇದರಲ್ಲಿ ಬಯೋಮೆಟ್ರಿಕ್ ವಿವರಗಳು ಕೂಡಾ ಇದ್ದು, ನಕಲಿ ಪಾಸ್‌ಪೋರ್ಟ್ ದಂಧೆಗೆ ಕಡಿವಾಣ ಹಾಕಲು ಇದು ಸಹಕಾರಿಯಾಗಲಿದೆ.

ಇದರಲ್ಲಿನ ಎಲೆಕ್ಟ್ರಾನಿಕ್ ಚಿಪ್, ಮಾಮೂಲಿ ಪಾಸ್‌ಪೋರ್ಟ್ ಪುಸ್ತಕದಲ್ಲಿರುವ ಎಲ್ಲ ವಿವರಗಳನ್ನೂ ಒಳಗೊಂಡಿರುತ್ತದೆ. ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ಪ್ರಕಾರ, ಇ-ಪಾಸ್‌ಪೋರ್ಟ್ ಸಾಧನ ಖರೀದಿ ಪ್ರಕ್ರಿಯೆ ನಡೆದಿದೆ. ನಾಸಿಕ್‌ನಲ್ಲಿರುವ ಇಂಡಿಯನ್ ಸೆಕ್ಯುರಿಟಿ ಪ್ರೆಸ್‌ನಲ್ಲಿ ಇವುಗಳನ್ನು ಮುದ್ರಿಸಲು ಅಗತ್ಯವಾದ ಕಾಂಟ್ಯಾಕ್ಟ್‌ಲೆಸ್ ಇನ್‌ಲೇಸ್ ಖರೀದಿಗೂ ಸರ್ಕಾರ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News