ಮಾನ್ಸೂನ್‌ನಲ್ಲಿ ಮಗುವಿನ ಆರೈಕೆ
ಮಾನ್ಸೂನ್‌ನಲ್ಲಿ ಚಿಕ್ಕ ಸೆಕೆಬೊಕ್ಕೆಗಳು ಮಕ್ಕಳಲ್ಲಿ ಸಾಮಾನ್ಯ. ಮಗುವಿನ ನವಿರಾದ ಚರ್ಮಕ್ಕೆ ಇದು ಸಾಕಷ್ಟು ತೊಂದರೆ ಕೊಡುತ್ತದೆ. ಬಿಸಿ ಹಾಗೂ ಬೆವರಿನಲ್ಲಿ ಇಂಥ ಕೆಂಪು, ತುರಿಕೆಗೆ ಕಾರಣವಾಗುವ ಬೊಕ್ಕೆಗಳು ಮಕ್ಕಳನ್ನು ಕಾಡುವುದು ಸಹಜ. ಸಾಮಾನ್ಯವಾಗಿ ಇದು ಹಣೆ, ಕತ್ತು, ಎದೆಯ ಮೇಲ್ಭಾಗ, ತೊಡೆಸಂಧಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಗುಳ್ಳೆಗಳು ಸೋಂಕಿಗೆ ತುತ್ತಾಗದಿದ್ದರೆ ಕೆಲ ದಿನಗಳಲ್ಲಿ ವಾಸಿಯಾಗುತ್ತವೆ. ಈ ಸಮಸ್ಯೆಗೆ ಸುಲಭ ಪರಿಹಾರಗಳು ಇಲ್ಲಿವೆ ನೋಡಿ.
► ಮಗುವನ್ನು ತಣ್ಣನೆಯ, ಗಾಳಿಯಾಡುವ ಕೊಠಡಿಯಲ್ಲೇ ಇರುವಂತೆ ನೋಡಿಕೊಳ್ಳಿ.
► ಮಗುವಿಗೆ ನವಿರಾದ ಹತ್ತಿಬಟ್ಟೆ ಬಳಸಿ. ಆದಷ್ಟು ನ್ಯಾಪ್‌ಕಿನ್ ಬಳಕೆ ಬೇಡ.
► ಪಾಲಿಸ್ಟರ್, ನೈಲಾನ್‌ನಂಥ ಸಿಂಥೆಟಿಕ್ ಉಡುಗೆ ಬೇಡ.
► ಶವರ್ ಮೂಲಕ ಸ್ನಾನ ಮಾಡಿಸಿ ಚರ್ಮ ತಂಪಾಗಿಸಿ.
► ಟವೆಲ್‌ನಿಂದ ಮೈ ಒರೆಸುವ ಬದಲು ಗಾಳಿಯಿಂದಲೇ ಮೈ ಒಣಗಿಸಿ.
► ತುರಿಕೆ ತಪ್ಪಿಸಲು ಕಲಮೈನ್ ಲೋಶನ್ ಹಚ್ಚಿ.
► ಬೊಕ್ಕೆಗಳು ದಟ್ಟವಾಗಿದ್ದರೆ, ವೈದ್ಯರ ಸಲಹೆ ಪಡೆದು ಹೈಡ್ರೊಕೋರ್ಟಿಸೋನ್ ಕ್ರೀಮ್ ಬಳಸಿ.
► ಸಾಕಷ್ಟು ನೀರು ಹಾಗೂ ದ್ರವ ಆಹಾರ ಸೇವಿಸುವಂತೆ ನೋಡಿಕೊಳ್ಳಿ.
► ಗುಳ್ಳೆಗಳು ಒಂದೆರಡು ದಿನದಲ್ಲಿ ಕಡಿಮೆಯಾಗದಿದ್ದರೆ ಅಥವಾ ಹೆಚ್ಚಿದರೆ ವೈದ್ಯರ ಬಳಿ ತಪಾಸಣೆ ಮಾಡಿಸಿ.