×
Ad

ಎರ್ದೊಗಾನ್ ಸೆರೆಹಿಡಿಯಲು ಯತ್ನಿಸಿದ್ದ 11 ಸೈನಿಕರ ಬಂಧನ

Update: 2016-08-01 23:53 IST

ಇಸ್ತಾಂಬುಲ್, ಆ. 1: ಕಳೆದ ತಿಂಗಳು ಟರ್ಕಿಯಲ್ಲಿ ನಡೆದ ವಿಫಲ ಸೇನಾ ದಂಗೆಯ ವೇಳೆ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರನ್ನು ಸೆರೆ ಹಿಡಿಯಲು ಯತ್ನಿಸಿದರೆನ್ನಲಾದ 11 ಸೇನಾ ಕಮಾಂಡೊಗಳನ್ನು ಟರ್ಕಿಯ ವಿಶೇಷ ಪಡೆಗಳು ಸೆರೆಹಿಡಿದಿವೆ ಎಂದು ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಅನಡೊಲು ಏಜನ್ಸಿ ಸೋಮವಾರ ತಿಳಿಸಿದೆ.

ಎರ್ದೊಗಾನ್ ತಂಗಿದ್ದ ರಿಸಾರ್ಟ್ ಪಟ್ಟಣ ಮಾರ್ಮರಿಸ್‌ನ ಹೊಟೇಲೊಂದರ ಮೇಲೆ ಜುಲೈ 15ರ ರಾತ್ರಿ ದಾಳಿ ನಡೆಸಿದ ತಂಡದಲ್ಲಿ ಈ 11 ಮಂದಿ ಸೈನಿಕರಿದ್ದರು.

ತಾನು ಅಪಾಯದಲ್ಲಿದ್ದೇನೆ ಎಂಬ ಬಗ್ಗೆ ಮಾಹಿತಿ ಪಡೆದ ಎರ್ದೊಗಾನ್, ಈ ಸೈನಿಕರು ಹೊಟೇಲ್‌ಗೆ ತಲುಪುವ ಮುನ್ನವೇ ಅಲ್ಲಿಂದ ಪರಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News