×
Ad

" ನೀವು ಏಕೆ ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸುತ್ತೀರಿ ?" ಎಂಬ ಪ್ರಶ್ನೆಗೆ ಅತ್ಯುತ್ತಮ ಉತ್ತರವೇನು ? ?

Update: 2016-08-06 14:33 IST

1.ಕಂಪೆನಿ ಬಗ್ಗೆ ಅಧ್ಯಯನ ಮಾಡಿ

ಕಂಪೆನಿಗಳು ತಮ್ಮ ಸಂಸ್ಥೆಯಲ್ಲಿ ಅತ್ಯುತ್ತಮ ಕೆಲಸಗಾರರನ್ನು ಬಯಸುತ್ತವೆ. ಹೀಗಾಗಿ ನೀವು ಸೂಕ್ತ ತಯಾರಿ ಮಾಡಿಕೊಂಡು ನವೀಕೃತ ಜ್ಞಾನದ ಜೊತೆಗೆ ಸಂದರ್ಶನಕ್ಕೆ ಹೋಗಬೇಕು. ಕಂಪೆನಿಗಳು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗಮನಿಸಿ, ಸುದ್ದಿವಾಹಿನಿಗಳಲ್ಲಿ ತಮ್ಮ ಗ್ರಾಹಕರ ವಿವರ ತಿಳಿದಿರುತ್ತದೆ. ಹೀಗಾಗಿ ನೀವೂ ಸಂದರ್ಶನಕ್ಕೆ ಹೋಗುವ ಸಂಸ್ಥೆಯ ಪೂರ್ಣ ವಿವರಗಳನ್ನು ತಿಳಿದುಕೊಂಡಿರಬೇಕು. ಲಿಂಕ್ಡಿನ್ ಪ್ರೊಫೈಲಿನಲ್ಲಿ ಸಂದರ್ಶನ ಮಾಡುವವರ ವಿವರ ತಿಳಿದುಕೊಂಡು ಹೋಗಿ.

►ಏನು ಹೇಳಬೇಕು?

ಕಂಪೆನಿ ನಿಮಗೆ ಏಕೆ ಆಕರ್ಷಕವಾಗಿದೆ? ಅದರಲ್ಲಿ ಏನು ಹೇಳಿದರೆ ಸಂದರ್ಶಕನ ಮನ ಗೆಲ್ಲಬಹುದು? ಈ ಕಂಪೆನಿ ಮತ್ತು ಇತರ ಕಂಪೆನಿಗಳ ನಡುವಿನ ಸಮಾನತೆ ಮತ್ತು ವ್ಯತ್ಯಾಸಗಳೇನು? ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹೇಗಿದ್ದಾರೆ?

2.ನಿಮ್ಮ ಪಾತ್ರವನ್ನು ಅಧ್ಯಯನ ಮಾಡಿ

ಕಂಪೆನಿಯ ಕೊರತೆಗಳನ್ನು ಹೇಗೆ ಸಕಾರಾತ್ಮಕವಾಗಿ ಪರಿವರ್ತಿಸಬಹುದು ಎನ್ನುವ ವಿವರಗಳನ್ನು ಹೊಂದಿರಿ. ಪ್ರತೀ ಅಗತ್ಯ ಮತ್ತು ಜವಾಬ್ದಾರಿಗಳಿಗೆ ನಿಮ್ಮ ಬಳಿ ಉತ್ತರವಿರಬೇಕು. ಆ ಉತ್ತರಗಳಿಗೆ ಸಾಕ್ಷ್ಯಗಳೂ ಬೇಕು. ನೀವು ಈ ನಿರ್ದಿಷ್ಟ ಪಾತ್ರವನ್ನು ಹೇಗೆ ನಿಭಾಯಿಸಬಲ್ಲಿರಿ ಎಂದು ಮಾಲಕರು ಪ್ರಶ್ನಿಸಬಹುದು. ಅದಕ್ಕಾಗಿ ನಿಮ್ಮ ಆಸಕ್ತಿಯ ವಿಷಯಗಳನ್ನು ಮುಂದಿಡಿ. ತಾವು ಅರ್ಜಿ ಹಾಕಿರುವ ಉದ್ಯೋಗದಲ್ಲಿ ಏನು ಮಾಡಬೇಕು ಎಂದು ತಿಳಿಯದ ಉದ್ಯೋಗಿಗಳನ್ನು ಯಾರೂ ಬಯಸುವುದಿಲ್ಲ.

►ಏನು ಹೇಳಬೇಕು?

ನಿಮ್ಮ ಉತ್ತರದಲ್ಲಿ ನೀವು ಖುಷಿಯಿಂದ ಒಪ್ಪಿಕೊಳ್ಳುವ, ನಿಮಗೆ ಹೊಂದಿಕೊಳ್ಳುವ ಮತ್ತು ನಿಮಗೆ ಅನುಭವವಿರುವ ಪಾತ್ರದ ವಿವರಗಳಿರಲಿ. ಇವೆಲ್ಲಕ್ಕೂ ಸಾಕ್ಷ್ಯಗಳು ಬೇಕು. ನಾನು 2 ವರ್ಷಗಳ ಕಾಲ ಅರೆಕಾಲಿಕ ಕೆಲಸ ಮಾಡಿದ್ದೇನೆ ಎಂದು ವಿವರಗಳನ್ನು ನೀಡಬಹುದು.

3.ಉದ್ಯೋಗಕ್ಕೆ ಹೊಂದಿಕೊಳ್ಳುವ ಪ್ರೇರಣೆ

ಅರ್ಜಿ ಹಾಕುವ ಮೊದಲು ಉದ್ಯಮದಲ್ಲಿ ಎಂತಹ ವ್ಯಕ್ತಿಗಳು ಕೆಲಸ ಮಾಡುತ್ತಾರೆ? ಕಂಪೆನಿ ಅವರಿಂದ ಏನನ್ನು ನಿರೀಕ್ಷಿಸುತ್ತದೆ ಎಂದು ತಿಳಿದಿರಲಿ. ನೀವು ಕೆಲಸ ಮಾಡಿದ ದೊಡ್ಡ ಯೋಜನೆಗಳು, ನಿಮಗೆ ಸಿಕ್ಕ ಭಡ್ತಿ ಮತ್ತು ನಿಮ್ಮ ಬಳಿ ಇರುವ ಪ್ರಭಾವೀ ಕ್ಲೈಂಟ್ ಗಳ ವಿವರ ನೀಡಬಹುದು. ಕಂಪೆನಿಗೆ ಎಂತಹ ವ್ಯಕ್ತಿ ಬೇಕು ಮತ್ತು ಆ ಅಗತ್ಯವನ್ನು ನೀವು ಹೇಗೆ ಪೂರ್ಣಗೊಳಿಸಬಲ್ಲಿರಿ ಎನ್ನುವುದನ್ನು ವಿವರಿಸಬೇಕು.

►ಏನು ಹೇಳಬೇಕು?

ನೀವು ಉದ್ಯಮದಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು, ನಿಮ್ಮ ವ್ಯಕ್ತಿತ್ವ ಉದ್ಯೋಗಕ್ಕೆ ಹೇಗೆ ಹೊಂದಿಕೊಳ್ಳುತ್ತದೆ, ನಿಮ್ಮ ಹಿಂದಿನ ಅನುಭವ ಮತ್ತು ನಿಮ್ಮ ಗುರಿಗಳ ಬಗ್ಗೆ ವಿವರಿಸಬಹುದು.

4. ಕಂಪೆನಿ ಸಂಸ್ಕೃತಿಗೆ ಹೊಂದಿಕೊಳ್ಳುವುದು

ನೀವು ಎಷ್ಟು ಚೆನ್ನಾಗಿ ಉತ್ತರಿಸಿದ್ದೀರಿ, ಎಷ್ಟು ಚೆನ್ನಾಗಿ ಕೇಳಿದ್ದೀರಿ, ನಿಮ್ಮ ಸಂವಹನ ಶೈಲಿ ಮತ್ತು ಇತರ ವಿಷಯಗಳು ನಿಮ್ಮ ಹೊಂದಿಕೊಳ್ಳುವ ಗುಣವನ್ನು ಹೊರಗಿಡುತ್ತದೆ. ಸಂದರ್ಶಕ ಮತ್ತು ನಿಮ್ಮ ಮಾತುಕತೆಯಲ್ಲಿಯೇ ಈ ವಿಷಯ ಹೊರಗೆ ಬರುತ್ತದೆ. ನೀವೆಂತಹ ವ್ಯಕ್ತಿ ಎಂದು ಸಂದರ್ಶಕ ವಿಶ್ಲೇಷಿಸಿರುತ್ತಾರೆ.

►ಏನು ಹೇಳಬೇಕು?

ನೀವು ಕಂಪೆನಿಯ ಸಂಸ್ಕೃತಿಗೆ ಹೇಗೆ ಒಗ್ಗಿಕೊಳ್ಳುತ್ತೀರಿ ಎಂದು ವಿವರಿಸಬೇಕು. ಅದಕ್ಕೆ ಕಂಪೆನಿ ಬಗ್ಗೆ ತಿಳಿದಿರಬೇಕು. ನೀವು ಎಂತಹ ವ್ಯಕ್ತಿಗಳ ಜೊತೆಗೆ ಕೆಲಸ ಮಾಡಬಯಸುತ್ತೀರಿ ಎಂದು ಒಂದಿಬ್ಬರ ಹೆಸರು ಹೇಳಬಹುದು. ನೀವು ಯಾರ ಜೊತೆಗೆ ಕೆಲಸ ಕಲಿತಿದ್ದೀರಿ ಎನ್ನುವುದನ್ನೂ ಹೇಳಬಹುದು.

5. ಸಂಕ್ಷಿಪ್ತವಾಗಿ ಉತ್ತರಿಸಿ

ನೀವು ಹೇಳುತ್ತಾ ಹೋಗುವ ಅಗತ್ಯವಿಲ್ಲ. ಹಾಗೆ ಮಾಡಿದರೆ ನಿಮಗೆ ಸಂಕ್ಷಿಪ್ತವಾಗಿ ವಿವರಿಸುವ ಕೌಶಲ್ಯವಿಲ್ಲ ಎಂದು ಸಂದರ್ಶಕನಿಗೆ ಅನಿಸಬಹುದು. ಹಾಗೆಂದು ಒಂದೇ ಶಬ್ದದಲ್ಲಿ ಉತ್ತರಿಸಬೇಡಿ. ಉತ್ತರವನ್ನು ಚೆನ್ನಾಗಿ ಹೇಳುವ ಕೌಶಲ್ಯ ಬೆಳೆಸಿಕೊಳ್ಳಿ.

6. ಉತ್ಸಾಹ ತೋರಿಸಿ

ನೀವು ಫ್ರೆಶರ್ ಆಗಿದ್ದರೆ ಸಂದರ್ಶಕ ನಿಮ್ಮಲ್ಲಿ ಉತ್ಸಾಹ ಹುಡುಕಬಹುದು. ನಿಮಗೆ ಅನುಭವವಿಲ್ಲದಿದ್ದರೂ ಕೆಲಸ ಕಲಿಯುವ ಉಮೇದು ಇದೆಯೇ ಎನ್ನುವುದು ಸಂದರ್ಶಕನಿಗೆ ಮುಖ್ಯವಾಗಿರುತ್ತದೆ. ಹೀಗಾಗಿ ಹೆಚ್ಚು ಆಸಕ್ತಿ ಹೊಂದಿದ ಮತ್ತು ಕಂಪೆನಿಗೆ ಭರವಸೆಯ ಅಭ್ಯರ್ಥಿಯನ್ನು ಹುಡುಕುತ್ತಾರೆ.

7. ಮುಖವಾಡ ಬೇಡ

ನೀವು ಹಣಕ್ಕಾಗಿಯೇ ಉದ್ಯೋಗವನ್ನು ಬಯಸುತ್ತಿದ್ದಿರಬಹುದು. ಆದರೆ ಉದ್ಯೋಗ ಮತ್ತು ಕಂಪೆನಿಯ ಬಗ್ಗೆಯೂ ನಿಮಗೆ ಆಸಕ್ತಿ ಇರುತ್ತದೆ. ನಿಮಗೆ ಕೆಲಸಬಿಡಲು ಇಷ್ಟವಿಲ್ಲದೆ ಇದ್ದಲ್ಲಿ ಮೊದಲಿನಿಂದಲೇ ಆರಂಭಿಸಬೇಕು. ನಿಮ್ಮ ಹೃದಯ ಬಯಸದೆ ಇದ್ದಲ್ಲಿ ನೀವು ಅಂತಹ ಉದ್ಯೋಗದಲ್ಲಿ ಮುಂದುವರಿಯುವ ಅಗತ್ಯವಿರುವುದಿಲ್ಲ. ಸಾಮಾನ್ಯವಾಗಿ ಬಹಳಷ್ಟು ಸಂದರ್ಶನ ಮಾಡಿದ ಅನುಭವವಿರುವವರಿಗೆ ನೀವು ನಕಲಿ ಅಥವಾ ಇಂಟರ್ನೆಟ್ ನಿಂದ ಜಾಲಾಡಿದ ಉತ್ತರ ನೀಡಿದರೆ ತಿಳಿಯುತ್ತದೆ. ನೀವಾಗೇ ಇರಲು ಪ್ರಯತ್ನಿಸಿ. ಮುಖವಾಡ ಬೇಡ.

►ಏನು ಹೇಳಬೇಕು

ಯಾವುದಾದರೂ ಪ್ರಶ್ನೆ ನಿಮಗೆ ಇಷ್ಟವಾಗದಿದ್ದರೆ, ನಿಮ್ಮ ಕೌಟುಂಬಿಕ ವಿವರ ಮತ್ತು ಸಾಮರ್ಥ್ಯಗಳ ಬಗ್ಗೆ ಏನಾದರೂ ಸಂದರ್ಶಕನ ಮಾತು ಇಷ್ಟವಾಗದಿದ್ದರೆ ನೇರವಾಗಿ ಹೇಳಿಬಿಡಿ. ಸಂದರ್ಶಕನ ಮಾತನ್ನು ವಿರೋಧಿಸಲು ಆತಂಕ ಬೇಡ.

8. ನೀವೇಕೆ ಕೆಲಸ ಮಾಡುತ್ತೀರಿ ಎನ್ನುವ ವಿವರಣೆ

ಕಂಪೆನಿ ನಿಮಗೆ ಏಕೆ ಇಷ್ಟವಾಯಿತು ಎನ್ನುವ ಕಾರಣ. ಪಾತ್ರ ನಿಮಗೆ ಏಕೆ ಇಷ್ಟವಾಗಿದೆ ಮತ್ತು ನೀವೇಕೆ ಕೆಲಸ ಮಾಡಲಿದ್ದೀರಿ? ಕಂಪೆನಿಯ ಉದ್ಯೋಗ ನಿಮ್ಮ ವೃತ್ತಿ ಗುರಿಗಳನ್ನು ಸಾಧಿಸಲು ನೆರವಾಗುವುದೆ? ಈಗಿನ ಉದ್ಯೋಗಿಗಳ ಜೊತೆಗೆ ನೀವು ಹೊಂದಿಕೊಳ್ಳುವಿರೇ? ಆರಂಭದಲ್ಲಿ ಸಂದರ್ಶಕ ತೋರಿಸಿದ ಅಸಡ್ಡೆ ನಿಮಗೆ ನೋವಾಗಿಲ್ಲ ಎನ್ನುವುದನ್ನು ತಿಳಿಸುವುದು. ಮುಖ್ಯವಾಗಿ ಸಂಕ್ಷಿಪ್ತ, ಉತ್ಸಾಹಿ ಮತ್ತು ಪ್ರಾಮಾಣಿಕರಾಗಿರಿ.

ಕೃಪೆ: http://www.businessinsider.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News