×
Ad

ಝಿಕಾ ಹತೋಟಿಗೆ ಕುಲಾಂತರಿ ಸೊಳ್ಳೆಗಳು

Update: 2016-08-06 23:56 IST

ಶಿಕಾಗೊ, ಆ. 6: ಝಿಕಾ ವೈರಸನ್ನು ಹೊತ್ತಿರುವ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡುವ ವಿಧಾನವಾಗಿ, ಕುಲಾಂತರಿ (ಜನೆಟಿಕಲಿ ಮೋಡಿಫೈಡ್) ಸೊಳ್ಳೆಗಳನ್ನು ಸೃಷ್ಟಿಸುವ ಪ್ರಯೋಗವನ್ನು ಫ್ಲೋರಿಡದಲ್ಲಿ ನಡೆಸಲು ಅಮೆರಿಕ ಅನುಮತಿ ನೀಡಿದೆ.

ಇಂಟ್ರಕ್ಸಾನ್ ಕಾರ್ಪ್ ಸೃಷ್ಟಿಸಿರುವ ಕುಲಾಂತರಿ ಸೊಳ್ಳೆಗಳ ಕ್ಷೇತ್ರ ಪರೀಕ್ಷೆಯು ಪರಿಸರದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಶುಕ್ರವಾರ ತಿಳಿಸಿದೆ.

ಕುಲಾಂತರಿ ಸೊಳ್ಳೆಗಳ ಮರಿಗಳು ಮೊಟ್ಟೆ ಇಡುವ ಮೊದಲೇ ಸಾಯುತ್ತವೆ. ಈ ಸೊಳ್ಳೆಗಳು ಸ್ಥಳೀಯ ಈಡಿಸ್ ಈಜಿಪ್ಟಿ ಸೊಳ್ಳೆಗಳ ಸಂಖ್ಯೆಯನ್ನು 90 ಶೇಕಡಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕಡಿಮೆ ಮಾಡಿರುವುದನ್ನು ಬ್ರೆಝಿಲ್, ಪನಾಮ ಮತ್ತು ಕೇಮನ್ ಐಲ್ಯಾಂಡ್‌ಗಳಲ್ಲಿ ನಡೆದ ಪ್ರಯೋಗಗಳಲ್ಲಿ ಕಂಡುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News