ರಿಯೋ ಒಲಿಂಪಿಕ್ಸ್ : ವಿಶ್ವ ದಾಖಲೆಯ ಹೀರೊ ಫೆಲ್ಪ್ಸ್ ಖಾತೆಗೆ 21ನೆ ಚಿನ್ನ

Update: 2016-08-10 06:46 GMT

ರಿಯೋ ಡಿ ಜನೈರೊ, ಆ.10: ಕ್ರೀಡಾ ಜಗತ್ತು ಕಂಡ  ಅದ್ಭುತ ಈಜುಗಾರ ಅಮೆರಿಕದ ಮೈಕಲ್ ಫೆಲ್ಪ್ಸ್ಒಲಿಂಪಿಕ್ಸ್‌ನಲ್ಲಿ 21ನೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಅವರು ತನ್ನ  ವಿಶ್ವ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿದ್ದಾರೆ.

 ಚಿನ್ನದ ಮೀನು ಎಂದೇ ಖ್ಯಾತರಾದ ಅಮೆರಿಕದ ಈಜುಪಟು ಮೈಕೆಲ್ ಫೆಲ್ಪ್ಸ್ ಮಂಗಳವಾರ ರಾತ್ರಿ ಅವರು  200ಮೀಟರ‍್  ಬಟರ‍್ ಫ್ಲೈ ವೈಯಕ್ತಿಕ  ವಿಭಾಗದಲ್ಲಿ ಚಿನ್ನ ಮತ್ತು 4x200 ಮೀ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದರು.
31ರ ಹರೆಯದ ಅವರು  ಈ ವರೆಗೆ ಒಲಿಂಪಿಕ್ಸ್ ನಲ್ಲಿ 25 ಪದಕಗಳನ್ನು ಜಯಿಸಿದ್ದಾರೆ.  ಇದೊಂದು ಸಾರ್ವಕಾಲಿಕ ಒಲಿಂಪಿಕ್ಸ್ ದಾಖಲೆಯಾಗಿದೆ. ಇದರಲ್ಲಿ ಚಿನ್ನ 21, ಬೆಳ್ಳಿ 2 ಮತ್ತು ಕಂಚು 2
ಈ ಮೊದಲು 4x100 ಮೀ ಫ್ರೀಸ್ಟೈಲ್ ರಿಲೇಯಲ್ಲಿ ಫೆಲ್ಪ್ಲ್ 3;09;92 ನಿಮಿಷಗಳಲ್ಲಿ ಗುರಿ ಮುಟ್ಟಿ ರಿಯೋ ಒಲಿಂಪಿಕ್ಸ್ ನಲ್ಲಿ ಖಾತೆ ತೆರೆದಿದ್ದರು. ಇದು ಅವರ 19ನೆ ಚಿನ್ನವಾಗಿತ್ತು. ರಿಯೋ ಒಲಿಂಪಿಕ್ಸ್ ನಲ್ಲಿ ಒಟ್ಟು ಮೂರು ಚಿನ್ನ ಬಾಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News