ಆಗ್ರಾದಿಂದ ವಲಸೆ ಹೋಗಲು ಮುಸ್ಲಿಮರ ಮೇಲೆ ಒತ್ತಡ
ಬಿಜೆಪಿಯ ಪ್ರಕಾರ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಹಿಂದೂಗಳು ವಲಸೆ ಹೋಗುತ್ತಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಗ್ರಾದಲ್ಲಿ ಅಲ್ಪ ಸಂಖ್ಯಾತ ವರ್ಗದವರ ಮೇಲಿನ ಒತ್ತಡದಿಂದಾಗಿ ಇಟಿಮಾಡ್ ಉದ್ ದೌಲಾಹ್ ಪ್ರಾಂತದ ಮುಸ್ಲಿಂ ನಿವಾಸಿಗಳು ವಲಸೆ ಹೋಗಲು ತೀರ್ಮಾನಿಸಿದ್ದಾರೆ. ಎಸ್‌ಪಿ ಬೆಂಬಲಿತ ಭೂ ಸ್ವಾಧೀನಕಾರರು ತಮ್ಮ ಆಸ್ತಿ ಮಾರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿರುವ ನಿವಾಸಿಗಳು ಮನೆಯ ಹೊರಗೆ ಮನೆ ಮಾರಾಟಕ್ಕಿದೆಎಂದು ಬೋರ್ಡ್ ಹಾಕಿದ್ದಾರೆ.
ಆಡಳಿತ ಮತ್ತು ಪೊಲೀಸರು ಭೂ ಸ್ವಾಧೀನಕಾರರ ದೌರ್ಜನ್ಯವನ್ನು ಕಂಡೂ ಸುಮ್ಮನಿದೆ ಎಂದು ನಿವಾಸಿಗಳು ಹೇಳುತ್ತಾರೆ. ಬಹಳಷ್ಟು ಮಂದಿ ಈಗಾಗಲೇ ಇಟಿಮಾಡ್ ಉದ್ ದೌಲಾಹ್ ನಿಂದ ವಲಸೆ ಹೋಗಿದ್ದಾರೆ ಮತ್ತು ಹಲವರು ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ನಿವಾಸಿಗಳು ಸ್ಥಳೀಯ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಡುತ್ತಿದ್ದಾರೆ. ಭೂ ಆಕ್ರಮಣಕಾರರು ಆಡಳಿತ ಎಸ್‌ಪಿ ನಾಯಕರ ಬೆಂಬಲ ಹೊಂದಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
“ನಾವು ಮನೆ ಮಾರಲು ವಿರೋಧಿಸಿದಾಗ ಅವರು ಎಲ್ಲಾ ರೀತಿಯ ಬೆದರಿಕೆಗಳನ್ನು ಮತ್ತು ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ” ಎಂದು ಒಬ್ಬರು ದೂರಿದ್ದಾರೆ. ಭೂ ಆಕ್ರಮಣಕಾರರು ಖಾಲಿ ಜಾಗಗಳನ್ನೂ ಒತ್ತಾಯಪೂರ್ವಕ ವಶಪಡಿಸಿಕೊಳ್ಳುತ್ತಿದ್ದಾರೆ. ಈ ದುಷ್ಕರ್ಮಿಗಳಿಗೆ ಉತ್ತರ ಪ್ರದೇಶದ ಪ್ರಭಾವಿ ಸಚಿವರ ಸಂಬಂಧಿಕರೊಬ್ಬರ ಕುಮ್ಮಕ್ಕಿದೆ ಎಂದು ಆರೋಪಿಸಲಾಗಿದೆ. ಸರ್ಕಾರ ತಮಗಾಗಿ ಏನೂ ಮಾಡುತ್ತಿಲ್ಲ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಅಲ್ಪಸಂಖ್ಯಾತರ ವಿರೋಧಿ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಆದರೆ ಎಸ್‌ಎಸ್‌ಪಿ ಪ್ರೀತಿಂದರ್ ಸಿಂಗ್‌ರಿಗೆ ಈ ವಲಸೆ ಬಗ್ಗೆ ಮಾಹಿತಿಯೇ ತಿಳಿದಿಲ್ಲ. ಆದರೆ ಧೀರ್ಘ ಕಾಲದ ಆಸ್ತಿ ವಿವಾದಗಳಿಂದಾಗಿ ಪ್ರಾಂತದಲ್ಲಿ ಸ್ವಲ್ಪ ಸಂಘರ್ಷದ ಸ್ಥಿತಿಯಿದೆ ಎಂದು ಅವರು ಒಪ್ಪಿಕೊಂಡರು. “ಇದು ಕೋಮುವಾದಿ ವಿಷಯವೇನೂ ಅಲ್ಲ” ಎಂದೂ ಸಿಂಗ್ ಹೇಳಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ಅಭಯ ನೀಡಿದ್ದಾರೆ.
ಕೃಪೆ: timesofindia.indiatimes.com