×
Ad

ಭಾರತ, ಚೀನಾಗಳಿಗೆ ನೇಪಾಳದ ವಿಶೇಷ ಪ್ರತಿನಿಧಿಗಳು

Update: 2016-08-12 23:52 IST

ಕಠ್ಮಂಡು, ಆ. 12: ಹೊಂದಾಣಿಕೆ ಕಸರತ್ತೊಂದನ್ನು ನಡೆಸಿರುವ ನೇಪಾಳದ ನೂತನ ಪ್ರಧಾನಿ ಪ್ರಚಂಡ ಶೀಘ್ರವೇ ಭಾರತ ಮತ್ತು ಚೀನಾಗಳಿಗೆ ವಿಶೇಷ ರಾಯಭಾರಿಗಳನ್ನು ಕಳುಹಿಸಲಿದ್ದಾರೆ.

ರಾಜಕೀಯ ಪರಿವರ್ತನೆಯ ಘಟ್ಟದಲ್ಲಿರುವ ನೇಪಾಳದ ಮೇಲೆ ಹಿಡಿತ ಸಾಧಿಸಲು ಭಾರತ ಮತ್ತು ಚೀನಾ ಗಳೆರಡೂ ಸ್ಪರ್ಧಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಭಾರತದೊಂದಿಗೆ ಮಾತುಕತೆ ನಡೆಸಲು ಪ್ರಚಂಡ ತನ್ನ ಗೃಹ ಸಚಿವ ಬಿಮಲೇಂದ್ರ ನಿಧಿಯನ್ನು ಕಳುಹಿಸಿದರೆ, ಚೀನಾದೊಂದಿಗೆ ಸಭೆಗಾಗಿ ಹಣಕಾಸು ಸಚಿವ ಕೃಷ್ಣ ಬಹಾದುರ್‌ರನ್ನು ಕಳುಹಿಸಿದ್ದಾರೆ.

ಇಬ್ಬರೂ ನಾಯಕರು ಉಪ ಪ್ರಧಾನಿಯ ದರ್ಜೆಯನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News