×
Ad

25-26ರಂದು ಇಸ್ಲಾಮಾಬಾದ್‌ಗೆ ಜೇಟ್ಲಿ ಭೇಟಿ?

Update: 2016-08-14 23:58 IST

ಇಸ್ಲಾಮಾಬಾದ್,ಆ.14: ಈ ತಿಂಗಳ ಅಂತ್ಯದಲ್ಲಿ ನಡೆಯುವ ಸಾರ್ಕ್ ದೇಶಗಳ ಸಚಿವರ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿತ್ತ ಸಚಿವ ಅರುಣ್‌ಜೇಟ್ಲಿ ಇಸ್ಲಾಮಾಬಾದ್‌ಗೆ ಆಗಮಿಸಲಿರುವ ಸಂದರ್ಭದಲ್ಲಿ ತಾನೋರ್ವ ಉತ್ತಮ ಆತಿಥೇಯನಾಗಲು ಪಾಕಿಸ್ತಾನ ನಿರ್ಧರಿಸಿದೆ ಹಾಗೂ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಉಂಟಾದಂತಹ ಉದ್ವಿಗ್ನ ವಾತಾವರಣವು ಪುನಾರವರ್ತನೆಯಾಗದಂತೆ ಕ್ರಮಕೈಗೊಳ್ಳಲಿದೆ.

ಆಗಸ್ಟ್ 25 ಹಾಗೂ 26ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ವಿತ್ತ ಸಚಿವರ ಸಮಾವೇಶದಲ್ಲಿ ಜೇಟ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಪಾಕ್ ಹಣಕಾಸು ಸಚಿವ ಇಶಾಕ್ ದಾರ್ ಹಾಗೂ ಅವರ ಭಾರತೀಯ ಸಹವರ್ತಿ ಅರುಣ್‌ಜೇಟ್ಲಿ ನಡುವೆ ‘ಹೃತ್ಪೂರ್ವಕವಾದ ಹಸ್ತಲಾಘವ’ ನಡೆಯುವ ಸಾಧ್ಯತೆಯಿದೆಯೆಂದು ಪಾಕ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಮುಂಬರುವ ಸಾರ್ಕ್ ಸಮಾವೇಶದ ಕುರಿತಾದ ಪೂರ್ವಸಿದ್ಧತೆಗಳನ್ನು ಸರಕಾರವು ಅಂತಿಮಗೊಳಿಸಿದೆಯೆಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಸಮಾವೇಶದ ಸಿದ್ಧತೆಗಳ ಪರಾಮರ್ಶೆಗಾಗಿ ಇಂದು ನಡೆದ ಸಭೆಯ ಅಧ್ಯಕ್ಷತೆಯನ್ನು ದಾರ್ ವಹಿಸಿದ್ದರೆಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News