ಟರ್ಕಿ: ಕಾರ್‌ಬಾಂಬ್ ಸ್ಫೋಟಕ್ಕೆ 3 ಬಲಿ
Update: 2016-08-15 23:57 IST
ದಿಯಾರ್‌ಬಕೀರ್,ಆ.15: ಆಗ್ನೇಯ ಟರ್ಕಿಯ ಅತಿ ದೊಡ್ಡ ನಗರವಾದ ದಿಯಾರ್ ಬಕಿರ್‌ನಲ್ಲಿ ಸೋಮವಾರ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸ್ಫೋಟ ನಡೆದ ಸ್ಥಳಕ್ಕೆ ಆ್ಯಂಬುಲೆನ್ಸ್‌ಗಳು ಹಾಗೂ ರಕ್ಷಣಾಕಾರ್ಯಕರ್ತರು ಧಾವಿಸಿದ್ದಾರೆಂದು ಡೊಗಾನ್ ಸುದ್ದಿಸಂಸ್ಥೆ ವರದಿ ಮಾಡಿದೆ. ದಿಯಾರ್‌ಬಕಿರ್ ನಗರ ಹಾಗೂ ಬಿಸ್ಮಿಲ್ ಜಿಲ್ಲೆಗೆ ಮಧ್ಯೆ ಇರುವ ರಸ್ತೆಯಲ್ಲಿ ಸ್ಫೋಟ ಸಂಭವಿಸಿರುವುದಾಗಿ ಭದ್ರತಾ ಮೂಲಗಳು ತಿಳಿಸಿವೆ. ಟರ್ಕಿ ಸರಕಾರ ಹಾಗೂ ನಿಷೇಧಿತ ಕುರ್ದಿಸ್ತಾನ್ ಕಾರ್ಮಿಕ ಪಕ್ಷದ ನಡುವೆ ಕಳೆದ ವರ್ಷ ಕದನ ವಿರಾಮ ಮುರಿದುಬಿದ್ದ ಬಳಿಕ, ಕುರ್ದ್ ಜನಾಂಗೀಯರೇ ಅಧಿಕ ಸಂಖ್ಯೆಯಲ್ಲಿರುವ ಈ ಪ್ರಾಂತದಲ್ಲಿ ಸರಣಿ ಹಿಂಸಾಚಾರದ ಘಟನೆಗಳು ಮರುಕಳಿಸುತ್ತಿವೆ.