ಸರ್ವ ಶ್ರೇಷ್ಠ ಒಲಿಂಪಿಯನ್ ಮೈಕಲ್ ಫೆಲ್ಫ್ಸ್ ಇಷ್ಟೆಲ್ಲವನ್ನು ಜೀರ್ಣಿಸಿಕೊಳ್ಳುವುದು ಹೇಗೆ?

Update: 2016-08-16 10:03 GMT

ಸಾರ್ವಕಾಲಿಕ ಅತೀ ಯಶಸ್ವೀ ಒಲಿಂಪಿಯನ್ ಮೈಕೆಲ್ ಫೆಲ್ಫ್ಸ್ ತಮ್ಮ 23ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬೀಜಿಂಗ್ ಒಲಿಂಪಿಕ್ಸ್‌ಗೆ 2008ರಲ್ಲಿ ಆಗಮಿಸುವ ಮುನ್ನ ಸೇವಿಸುವಂತೆ ಹೆಚ್ಚಾಗಿ ಆಹಾರವನ್ನು ಈಗ ಸೇವಿಸುವುದಿಲ್ಲ. ನಿತ್ಯವೂ ಹೆಚ್ಚು ಕ್ಯಾಲರಿಗಳನ್ನು ಅವರು ಸೇವಿಸುವುದಿಲ್ಲ. ಬಹಳಷ್ಟು ಪ್ರಮಾಣದ ಆಹಾರವನ್ನು ಅವರು ಕಡಿಮೆ ಮಾಡಿದ್ದಾರೆ.

ಆದರೆ ಬೀಜಿಂಗ್ ಗೇಮ್ಸ್‌ಗೆ ಮೊದಲು ನಿತ್ಯವೂ 12,000 ಕ್ಯಾಲರಿಗಳನ್ನಾದರೂ ಸೇವಿಸುತ್ತಿದ್ದರು. ಅಥವಾ ಊಟವೊಂದಕ್ಕೆ 4000 ಕ್ಯಾಲರಿ. ಮೊಟ್ಟೆ ಸ್ಯಾಂಡ್ವಿಚ್ ಗಳಿಂದ ಆರಂಭಿಸಿ ಬೆಣ್ಣೆ, ಫ್ರೈ ಮಾಡಿದ ಈರುಳ್ಳಿಯಿಂದ ಮಾಯೋವರೆಗೆ ಸೇವಿಸುತ್ತಿದ್ದರು. ಚಾಕಲೇಟ್ ಚಿಪ್ ಪ್ಯಾನ್ ಕೇಕ್, ಫ್ರೆಂಚ್ ಟೋಸ್ಟ್, ಗ್ರಿಟ್ಸ್ ಮತ್ತು ಐದು ಮೊಟ್ಟೆ ಆಮ್ಲೆಟ್ ಕೂಡ ಸೇವಿಸುತ್ತಿದ್ದರು. ಊಟದಲ್ಲಿ ಹ್ಯಾಮ್, ಚೀಸ್ ಸ್ಯಾಂಡ್ವಿಚ್, ಎನರ್ಜಿ ಡ್ರಿಂಕ್ ಮತ್ತು ಪಾಸ್ತಾ ಇರುತ್ತಿತ್ತು. ಖನ್ನರ್ ಗೆ ಇಡೀ ಪಿಝಾ ಮತ್ತು ಪಾಸ್ತಾ ಸೇವಿಸುತ್ತಿದ್ದರು. ಹಾಗಿದ್ದರೂ ಎಂಟು ಚಿನ್ನದ ಪದಕಗಳನ್ನು ಅವರು 2008ರಲ್ಲಿ ಪಡೆದಿದ್ದರು.

2012ಕ್ಕೆ ಆಗುವಾಗ ಅವರ ಊಟ ಬದಲಾಯಿತು. ಈಗಲೂ ಸಾಕಷ್ಟು ಕ್ಯಾಲರಿ ಸೇವಿಸುತ್ತಾರೆ. ಆದರೆ 2008ರ ಹಾಗಿಲ್ಲ.

ಉಪಾಹಾರ:

ಹಣ್ಣು, ಕಾಫಿ, ದೊಡ್ಡ ಬೌಲ್ ಓಟ್ ಮೀಲ್, ಹ್ಯಾಮ್ ಮತ್ತು ಚೀಸ್ ಆಮ್ಲೆಟ್

ಮಧ್ಯಾಹ್ನದ ಊಟ:

ಮೀಟ್ ಬಾಲ್ ಸಬ್

ಡಿನ್ನರ್:

ಹೋಲ್ ಗ್ರೈನ್, ಲೀನ್ ಮೀಟ್ ಮತ್ತು ತರಕಾರಿ

ಇಂತಹ ಶಿಸ್ತಿನ ಆಹಾರದ ನಂತರವೂ ಅವರು ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿ ಪದಕ ಪಡೆದಿದ್ದಾರೆ. ಫೆಲ್ಫ್ಸ್ ಗೆ ಮೆಕ್ಸಿಕನ್ ಆಹಾರ ಇಷ್ಟ. ಹ್ಯಾಂಬರ್ಗ್, ಹಾಟ್ ಡಾಗ್, ಸ್ಟೀಕ್ ಮತ್ತು ಗ್ರಿಲ್ಡ್ ಚಿಕನ್ ಇಷ್ಟ. ಮುಖ್ಯವಾಗಿ ಪ್ರೊಟೀನ್ ಸೇವಿಸುವುದು ಹೆಚ್ಚು ಮಾಡಿ ಕಾರ್ಬೋಹೈಡ್ರೇಟನ್ನೂ ಸೇವಿಸುತ್ತಾರೆ. ಪಾಸ್ತಾ ಅವರ ನಿತ್ಯದ ಆಹಾರ.

ಕೃಪೆ: http://www.businessinsider.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News