ನಿಮ್ಮ ಕನಸು ನನಸಾಗಲು ಈ ಐದು ತಪ್ಪುಗಳನ್ನು ಮಾಡಬೇಡಿ

Update: 2016-08-16 11:41 GMT

ರಾತ್ರೋರಾತ್ರಿ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ

ರಾತ್ರೋರಾತ್ರಿ ಯಶಸ್ಸು ಸಿಗುತ್ತದೆ ಎನ್ನುವುದು ಹಲವರ ನಂಬಿಕೆ. ಬಹಳಷ್ಟು ಮಂದಿ ಇತರರನ್ನು ಕಂಡು ರಾತ್ರೋರಾತ್ರಿ ಯಶಸ್ಸು ಪಡೆದವರು ಎಂದುಕೊಳ್ಳುತ್ತಾರೆ. ಆದರೆ ಅವರ ಯಶಸ್ಸಿನ ಹಿಂದೆ ಇರುವ ಶ್ರಮವನ್ನು ಯಾರೂ ನೋಡುವುದಿಲ್ಲ. ಪ್ರತಿಷ್ಠಿತ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಹಿಂದಿನ ಕಲಿಕೆಯ ಶ್ರಮ ಇತರರಿಗೆ ಕಾಣುವುದಿಲ್ಲ. ಯಶಸ್ಸಿಗೆ ಅಡ್ಡದಾರಿಯಿಲ್ಲ.

ನಿಮ್ಮ ಉತ್ತರ ಬೇರೆಯವರಲ್ಲಿದೆ ಎಂದುಕೊಳ್ಳುವುದು

ನಿಮ್ಮ ಜೀವನದ ಬಗ್ಗೆ ಪರಿಪೂರ್ಣ ಉತ್ತರ ಯಾರ ಬಳಿಯೂ ಇಲ್ಲ. ನಿಮಗಾಗಿ ಜನರ ಬಳಿ ಅಭಿಪ್ರಾಯ ಇರಬಹುದು. ಅವರು ನಿಮ್ಮ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ನಿಮ್ಮ ನಿರ್ಧಾರವನ್ನು ನೀವೇ ಮಾಡಬೇಕು. ನಿಮ್ಮ ಭಾವನೆಗೆ ತಕ್ಕಂತೆ ಹೋಗಿ ನಿರ್ಧಾರ ಕೈಗೊಳ್ಳಿ. ಇತರರು ನಿಮ್ಮನ್ನು ನಿಯಂತ್ರಿಸದಿರಲಿ.

ಪ್ರಗತಿ ಖಚಿತವಾದಾಗ ಸ್ಥಿರವಾಗುವುದು

ಇದು ನಿಮ್ಮ ಕನಸುಗಳಿಗೆ ಕಂಟಕ. ನೀವು ಯಶಸ್ವೀ ಉದ್ಯಮ ನಡೆಸುತ್ತೀರಿ ಎಂದು ಸ್ಥಿರವಾಗಲು ನಿರ್ಧರಿಸುತ್ತೀರಿ. ನೀವು ಉದ್ಯಮದ ಯಶಸ್ಸಿನ ತುದಿಯಲ್ಲಿದ್ದಾಗ ಇತರ ತುದಿಗಳ ಕಡೆಗೆ ದೃಷ್ಟಿಬೀರಿ. ಪ್ರಗತಿ ಸದಾ ಮುಂದುವರಿಯುತ್ತದೆ ಮತ್ತು ಅದಕ್ಕೆ ದಿಗಂತವಿಲ್ಲ ಎಂದುಕೊಂಡು ಮುಂದುವರಿಯಿರಿ.

ತಪ್ಪು ಮತ್ತೊಬ್ಬರದೆಂದು ನಂಬುವುದು

ನಾವೆಲ್ಲರೂ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುತ್ತೇವೆ. ಮಾರುಕಟ್ಟೆ ಸರಿಯಿಲ್ಲವೆಂದು ಪ್ರಗತಿ ಕುಸಿದಿದೆ ಎನ್ನುತ್ತೇವೆ. ನಿಮ್ಮ ಪ್ರಗತಿಯ ಜವಾಬ್ದಾರಿ ನಿಮ್ಮದೇ. ನಿಮ್ಮ ಕನಸನ್ನು ಯಾರೂ ಇಷ್ಟಪಡದೆ ಇದ್ದರೆ ತಪ್ಪು ನಿಮ್ಮದೇ. ನಿಮ್ಮ ಕನಸಿಗೆ ನೀವೇ ಜವಾಬ್ದಾರರು.

ಕನಸುಗಳೇ ಮುಖ್ಯ ಎನ್ನುವ ನಂಬಿಕೆ

ಕನಸುಗಳೇ ಮುಖ್ಯವೆನ್ನುವುದು ಜೀವನದ ದೊಡ್ಡ ಸುಳ್ಳು. ಗುರಿ ತಲುಪಲು ಕನಸುಗಳು ಬೇಕು. ಅದು ಖುಷಿ ಕೊಡುತ್ತದೆ. ಆದರೆ ಗುರಿಗಳನ್ನು ತಲುಪುವುದೂ ಮುಖ್ಯ. ಅದಕ್ಕಾಗಿ ಹೊಸ ಪಯಣದ ಅಗತ್ಯವಿದೆ. ಗುರಿ ತಲುಪುವ ಪ್ರಯಾಣವೇ ಕಲಿಕೆಯ ಅನುಭವ.

ಕೃಪೆ : http://www.businessinsider.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News