ಬಾಂಗ್ಲಾ: 4 ಶಂಕಿತ ಭಯೋತ್ಪಾದಕಿಯರ ಬಂಧನ

Update: 2016-08-16 18:33 GMT

ಢಾಕಾ, ಆ. 16: ಕಳೆದ ತಿಂಗಳು ಢಾಕಾ ಕೆಫೆಯೊಂದರ ಮೇಲೆ ನಡೆದ ಭಯೋತ್ಪಾದನೆ ದಾಳಿಗೆ ಸಂಬಂಧಿಸಿ ದೇಶಿ ಭಯೋತ್ಪಾದಕ ಗುಂಪಿಗೆ ಸೇರಿದವರೆನ್ನಲಾದ ನಾಲ್ವರು ಮಹಿಳೆಯರನ್ನು ಬಂಧಿಸಿರುವುದಾಗಿ ಬಾಂಗ್ಲಾದೇಶದ ಭದ್ರತಾ ಅಧಿಕಾರಿಗಳು ಮಂಗಳವಾರ ತಿಳಿಸಿದರು.

ಜುಲೈ 1ರಂದು ಕೆಫೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 22 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ತಿಂಗಳು ಬಂಧಿತನಾದ ಉಗ್ರನೊಬ್ಬ ನೀಡಿದ ಮಾಹಿತಿಯ ಆಧಾರದಲ್ಲಿ ರಾಜಧಾನಿಯಲ್ಲಿ ಸೋಮವಾರ ರಾತ್ರಿ ನಡೆಸಲಾದ ದಾಳಿಯಲ್ಲಿ ನಾಲ್ವರು ಮಹಿಳೆಯರನ್ನು ಬಂಧಿಸಲಾಯಿತು ಎಂದು ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್‌ನ ಅಧಿಕಾರಿಯೊಬ್ಬರು ತಿಳಿಸಿದರು. ‘‘ಅವರ ಪೈಕಿ ಮೂವರು ವಿದ್ಯಾರ್ಥಿನಿ ಯರು ಹಾಗೂ ಇನ್ನೊಬ್ಬಳು ಢಾಕಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇನ್‌ಟರ್ನ್ ಆಗಿ ಕೆಲಸ ಮಾಡುತ್ತಿದ್ದಾಳೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News