ಕ್ಯಾಲಿಫೋರ್ನಿಯದಲ್ಲಿ ಕಾಡ್ಗಿಚ್ಚು

Update: 2016-08-17 18:23 GMT

ಲಾಸ್ ಏಂಜಲಿಸ್, ಆ. 17: ಹೊಸದಾಗಿ ಕಾಣಿಸಿಕೊಂಡ ಕಾಡ್ಗಿಚ್ಚೊಂದು ಮಂಗಳವಾರ ಲಾಸ್ ಏಂಜಲಿಸ್‌ನ ಪೂರ್ವ ಭಾಗದ ಬರಪೀಡಿತ ಕಣಿವೆಗಳ ಮೂಲಕ ಎಲ್ಲ ದಿಕ್ಕುಗಳಲ್ಲಿ ವೇಗವಾಗಿ ಹರಡುತ್ತಿದೆ. ಅದು ಕೆಲವೇ ಗಂಟೆಗಳ ಅವಧಿಯಲ್ಲಿ 14 ಚದರ ಮೈಲಿ ಪ್ರದೇಶಕ್ಕೆ ಹರಡಿದ್ದು 82,000ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಕ್ಯಾಜನ್ ಪಾಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಗುಡ್ಡಗಾಡು ಸಮುದಾಯಗಳಿಗೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡಿದೆ. 34,500 ಮನೆಗಳ 82,500 ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಆದೇಶ ಹೊರಡಿಸಲಾಗಿದೆ ಎಂದು ಸ್ಯಾನ್ ಬರ್ನಾಡಿನೊ ಕೌಂಟಿಯ ಅಗ್ನಿಶಾಮಕ ಇಲಾಖೆಯ ವಕ್ತಾರ ಎರಿಕ್ ಶರ್ವಿನ್ ತಿಳಿಸಿದರು.

ಕೆಲವು ಕಟ್ಟಡಗಳು ಈಗಾಗಲೇ ಸುಟ್ಟುಹೋಗಿವೆ. ಆದರೆ, ಅವುಗಳು ಮನೆಗಳೇ ಎನ್ನುವುದು ಖಚಿತವಾಗಿಲ್ಲ.

ಸ್ಕಿ-ರಿಸಾರ್ಟ್ ಪಟ್ಟಣ ರೈಟ್‌ವುಡ್‌ನಿಂದ ಸುಮಾರು 4,500 ಮಂದಿಯನ್ನು ಸ್ಥಳಾಂತರಿಸಲಾಗುತ್ತಿದೆ. ಸದರ್ನ್ ಕ್ಯಾಲಿಫೋರ್ನಿಯ ಮತ್ತು ಲಾಸ್ ವೇಗಸ್ ರಾಜ್ಯಗಳನ್ನು ಸಂಪರ್ಕಿಸುವ ಅಂತಾರಾಜ್ಯ ರಸ್ತೆ 15ನ್ನು ಮುಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News