ಚೀನಾದಲ್ಲಿ ಅತ್ಯಂತ ಎತ್ತರ, ಉದ್ದದ ಗಾಜಿನ ಸೇತುವೆ ಅನಾವರಣ

Update: 2016-08-21 18:22 GMT

ಬೀಜಿಂಗ್, ಆ. 21: ಚೀನಾದ ಹುನಾನ್ ಪ್ರಾಂತದಲ್ಲಿ ಜಗತ್ತಿನ ಅತ್ಯಂತ ಎತ್ತರ ಹಾಗೂ ಉದ್ದದ ಗಾಜಿನ ತಳದ ಸೇತುವೆಯನ್ನು ಶನಿವಾರ ಜನರ ವೀಕ್ಷಣೆಗೆ ತೆರೆಯಲಾಗಿದೆ.

 430 ಮೀಟರ್ ಉದ್ದದ ಸೇತುವೆ ಹುನಾನ್‌ನಲ್ಲಿರುವ ಝಾಂಗ್‌ಜಿಯಾಜಿ ಕಣಿವೆಯನ್ನು ಸಂಪರ್ಕಿಸುತ್ತದೆ ಹಾಗೂ ಅದು ನೆಲದಿಂದ 300 ಮೀಟರ್ ಎತ್ತರದಲ್ಲಿದೆ. 99 ಮೂರು ಪದರಗಳ ಗಾಜಿನ ಹಲಗೆಗಳ ಮೂಲಕ ಕೆಳಗೆ ಇಣುಕಲು ಈ ಸೇತುವೆಯು ಅವಕಾಶ ಮಾಡಿಕೊಡುತ್ತದೆ.

ತಿಯಾನಾನ್ಮೆನ್ ವೌಂಟನ್ ನ್ಯಾಶನಲ್ ಪಾರ್ಕ್‌ನಲ್ಲಿರುವ ಕಮರಿಯ ಎರಡು ಅಂಚುಗಳ ನಡುವೆ ಸೇತುವೆ ತೂಗುತ್ತಿದೆ.

ಸೇತುವೆ ನಿರ್ಮಾಣಕ್ಕೆ 22.81 ಕೋಟಿ ರೂಪಾಯಿ ಖರ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News